91.07 ಲಕ್ಷ ಕೆಜಿಯಷ್ಟು ಹಾಲು ಶೇಖರಿಸಿ ದಾಖಲೆ ನಿರ್ಮಿಸಿದ ಕೆಎಂಎಫ್

Update: 2022-05-25 14:53 GMT

ಬೆಂಗಳೂರು, ಮೇ 25: ‘ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳಿ(KMF) ಇದೇ ಮೊದಲ ಬಾರಿಗೆ ಗರಿಷ್ಟ ಒಟ್ಟು 91.07 ಲಕ್ಷ ಕೆಜಿ ಪ್ರಮಾಣದಷ್ಟು ಹಾಲನ್ನು ಶೇಖರಣೆ ಮಾಡುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದೆ' ಎಂದು ಕೆಎಂಎಫ್‍ನ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ತಿಳಿಸಿದ್ದಾರೆ.

‘ಸರಾಸರಿ ದಿನನಿತ್ಯ 100 ಲಕ್ಷ ಕೆಜಿಯಷ್ಟು ಪ್ರಮಾಣದ ಹಾಲು ಶೇಖರಣೆ ಮಾಡುವಷ್ಟರ ಮಟ್ಟಿಗೆ ಹಾಲು ಉತ್ಪಾದನಾ ಹೆಚ್ಚಳದ ವೇಗವನ್ನು ವೃದ್ಧಿಸಿಕೊಳ್ಳಬೇಕೆಂಬುದು ಕೆಎಂಎಫ್ ಗುರಿಯಾಗಿದೆ. ಗರಿಷ್ಠ ಪ್ರಮಾಣದ ಹಾಲು ಶೇಖರಣೆ ಮಾಡುವ ಮೂಲಕ ಹೊಸ ಮೈಲುಗಲ್ಲು ಸೃಷ್ಟಿಸಿದ ಹಾಲು ಉತ್ಪಾದಕರು, ಸಹಕಾರ ಸಂಘಗಳು, ಕೇಂದ್ರ-ರಾಜ್ಯ ಸರಕಾರ ಸೇರಿದಂತೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು' ಎಂದು ಹೇಳಿದ್ದಾರೆ.

‘2020ರ ಜುಲೈ 14ರಂದು 88.30 ಲಕ್ಷ ಕೆಜಿ, 2021ರ ಜೂನ್ 11ಕ್ಕೆ ಕೋವಿಡ್ ಸಂದರ್ಭದಲ್ಲಿಯೂ 90.62 ಲಕ್ಷ ಕೆಜಿಯಷ್ಟು ಪ್ರಮಾಣದ ಹಾಲನ್ನು ಶೇಖರಿಸುವ ಮೂಲಕ ಪ್ರಥಮ ಮತ್ತು ದ್ವಿತಿಯ ಮೈಲುಗಲ್ಲನ್ನು ಸ್ಥಾಪಿಸಲಾಗಿತ್ತು. ಇದೀಗ 91.07ಲಕ್ಷ ಕೆಜಿ ಗರಿಷ್ಟ ಪ್ರಮಾಣದಷ್ಟು ಹಾಲನ್ನು ಶೇಖರಣೆ ಮಾಡಲಾಗಿದೆ' ಎಂದು ಬಿ.ಸಿ. ಸತೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News