ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮೇ 31ಕ್ಕೆ ರೈಲ್ವೆ ಸ್ಟೇಷನ್ ಮಾಸ್ಟರ್ ಗಳ ಪ್ರತಿಭಟನೆ

Update: 2022-05-25 17:07 GMT

ಬೆಂಗಳೂರು, ಮೇ 25: ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಹುದ್ದೆಗಳನ್ನು ಭರ್ತಿ ಮಾಡದಿರುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮೇ 31ರಂದು ಸಾಮೂಹಿಕ ರಜೆಯನ್ನು ಹಾಕುವ ಮೂಲಕ ಪ್ರತಿಭಟನೆ ನಡೆಸಲು ಅಖಿಲ ಭಾರತ ಸ್ಟೇಷನ್ ಮಾಸ್ಟರ್ ಗಳ ಸಂಘವು ಕರೆ ನೀಡಿದೆ.

ಬುಧವಾರ ಸಂಘದ ಮುಖಂಡ ಹಾಗೂ ನೈರುತ್ಯ ರೈಲ್ವೆ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಎಂ. ಜಯಣ್ಣ ಮಾತನಾಡಿ, ಸರಕಾರವು ರೈಲ್ವೆ ಇಲಾಖೆಯಲ್ಲಿ ಹೆಚ್ಚು ಜವಾಬ್ದಾರಿಯಿರುವ ಸ್ಟೇಷನ್ ಮಾಸ್ಟರ್ ಹುದ್ದೆಗಳನ್ನು ತುಂಬುತ್ತಿಲ್ಲ. ಹಿಂದೆ ಸ್ಟೇಷನ್ ಮಾಸ್ಟರ್‍ಗಳಿಗೆ ನೀಡುತ್ತಿದ್ದ ರಾತ್ರಿ ಪಾಳಿಯ ಭತ್ತೆವನ್ನು ಈಗ ನೀಡುತ್ತಿಲ್ಲ. ಸ್ಟೇಷನ್ ಮಾಸ್ಟರ್‍ಗಳ ವೇತನವನ್ನು ಪರಿಷ್ಕರಣೆ ಮಾಡಲಿಲ್ಲ. ಹಾಗಾಗಿ ಈ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News