ಯುವತಿ ಆತ್ಮಹತ್ಯೆ
Update: 2022-05-26 22:41 IST
ಪಡುಬಿದ್ರಿ: ಯುವತಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಜಮಾಡಿ ಕೋಡಿಯಲ್ಲಿ ಗುರುವಾರ ಬೆಳಕಿಗೆ ಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಬಂಕಿಕೂಡ್ಲ ಗ್ರಾಮದ ಯುವತಿ ಗೋದಾವರಿ (24) ಎಂದು ಗುರುತಿಸಲಾಗಿದೆ.
ಈಕೆ ಕ್ವಾಲಿಟಿ ಮೆರೈನ್ ಪುಡ್ ಹೆಸರಿನ ಫ್ಯಾಕ್ಟರಿಯಲ್ಲಿ ಮೀನು ಕಟಿಂಗ್ ಕೆಲಸ ಮಾಡಿಕೊಂಡಿದ್ದಳು. ಹೆಜಮಾಡಿ ಕೋಡಿಯಲ್ಲಿ ಬಾಡಿಗೆ ಮನೆಯಲ್ಲಿ ಇತರ ಮೂವರು ಹುಡುಗಿಯರೊಂದಿಗೆ ವಾಸ ಮಾಡಿಕೊಂಡಿದ್ದಳು. ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪಡುಬಿದ್ರೆ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.