ಭಾರತದ ನಿಜವಾದ ಸತ್ಯಗಳನ್ನು ಕಂಡುಹಿಡಿಯಲು ನಾವೆಲ್ಲರೂ ಪ್ರಾಮಾಣಿಕವಾಗಿ ಅಗೆಯೋಣ

Update: 2022-05-27 06:29 GMT

ಸತ್ಯವಿದ್ದರೆ, ಶೈವರು ಅಪವಿತ್ರಗೊಳಿಸಿದ ದೇವಸ್ಥಾನಗಳನ್ನು ಮತ್ತೆ ಪಡೆದುಕೊಳ್ಳಲು ವೈಷ್ಣವರು ಬಯಸಬಹುದು ಹಾಗೂ ವೈಷ್ಣವರು ಅಪವಿತ್ರಗೊಳಿಸಿದ ದೇವಸ್ಥಾನಗಳನ್ನು ಮರುವಶಪಡಿಸಿಕೊಳ್ಳಲು ಶೈವರು ಬಯಸಬಹುದು. ಸತ್ಯವನ್ನು ಹೇಳಿದರೆ ಮತ್ತು ಸತ್ಯ ಮರುಸ್ಥಾಪನೆಯಾದರೆ, ಹೀಗೆ ಯಾಕೆ ಮಾಡಬಾರದು? ಭಾರತದ ಮೂಲ ನಿವಾಸಿಗಳಾದ ಆದಿವಾಸಿಗಳು ಕೂಡ ತಮ್ಮ ದೇವತೆಗಳನ್ನು ಹೇಗೆ ನಾಶಪಡಿಸಲಾಯಿತು ಅಥವಾ ಹಿಂದೂ ದೇವರ ಗುಂಪಿಗೆ ಹೇಗೆ ಸೇರಿಸಲಾಯಿತು ಎಂಬ ಸತ್ಯವನ್ನು ಅಗೆಯಲು ನ್ಯಾಯೋಚಿತವಾಗಿಯೇ ಬಯಸಬಹುದು.


ಅಯೋಧ್ಯೆಯ ಬಳಿಕ, ಇನ್ನಷ್ಟು ಮಸೀದಿಗಳು ವಿವಾದದಲ್ಲಿ ಸಿಲುಕಿ ಕೊಂಡಿವೆ.
ಹಾಗಾಗಿ, ಭಾರತೀಯ ಮುಸ್ಲಿಮರೆಲ್ಲರೂ ಮತಾಂತರಗೊಂಡವರು. ಅವರು ತಮ್ಮನ್ನು ಮತಾಂತರಗೊಳಿಸಿದವರನ್ನು ದೊಡ್ಡ ಧ್ವನಿಯಲ್ಲಿ ಖಂಡಿಸುವ, ಅವರ ಕೃತ್ಯಗಳನ್ನು ತಿರಸ್ಕರಿಸುವ ಮತ್ತು ಮತ್ತೊಮ್ಮೆ ಪೂರ್ಣ ಪ್ರಮಾಣದಲ್ಲಿ ಹಿಂದೂಗಳಾಗುವ ಸಮಯ ಇದು.
ಅದಕ್ಕಾಗಿ, ಸರ್ವೇಕ್ಷಣೆಗಳು ಮುಂತಾದ ಉಪಕ್ರಮಗಳ ಮೂಲಕ ‘ಸತ್ಯ’ವನ್ನು ಕಂಡುಹಿಡಿಯುವುದು ಹಿಂದೂಗಳ ಸಾಮೂಹಿಕ ಬೇಡಿಕೆ ಎಂಬಂತೆ ಬಿಂಬಿಸಲಾಗುತ್ತಿದೆ.
ಇದನ್ನು ಮೊನ್ನೆ ಸುದ್ದಿವಾಹಿನಿಯೊಂದರ ಪ್ರೈಮ್‌ಟೈಮ್ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಪ್ರದೀಪ್ ನಂದ್ರಜೋಗ್ ಮನಮುಟ್ಟುವಂತೆ ನಿರೂಪಿಸಿದರು. ಸತ್ಯ ಎಲ್ಲರಿಗೂ ಗೊತ್ತಿದೆ ಎಂದು ಅವರು ಹೇಳಿದರು. ಆರಾಧನಾ ಸ್ಥಳಗಳ ಮೇಲೆ ರಾಜರು ದಾಳಿ ನಡೆಸುತ್ತಲೇ ಬಂದಿದ್ದಾರೆ. ಅದು ಔರಂಗಜೇಬನಿಗೆ ಮಾತ್ರ ಸೀಮಿತವಾಗಿಲ್ಲ.

ಹಾಗಾಗಿ, ಈಗ ಚಾಲ್ತಿಯಲ್ಲಿರುವ 1991ರ ಆರಾಧನಾ ಸ್ಥಳಗಳ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎನ್ನುವುದು ಅವರ ಸಮಭಾವದ ನಿಲುವು. 1947 ಆಗಸ್ಟ್ 15ರಂದು ಕಟ್ಟಡಗಳು ಯಾವ ಧಾರ್ಮಿಕ ಸ್ಥಾನಮಾನವನ್ನು ಹೊಂದಿದ್ದವೋ, ಅದೇ ಸ್ಥಾನಮಾನ ಕೊನೆಯವರೆಗೂ ಮುಂದುವರಿಯುತ್ತದೆ ಎನ್ನುವುದು ಈ ಕಾಯ್ದೆಯ ಒಟ್ಟಾರೆ ಸಾರಾಂಶ. ಅಂತಹ ಧಾರ್ಮಿಕ ಸ್ಥಳಗಳ ಸ್ಥಾನಮಾನಕ್ಕೆ ಸಂಬಂಧಿಸಿದ ಯಾವುದೇ ದೂರನ್ನು ಪುರಸ್ಕರಿಸಲಾಗುವುದಿಲ್ಲ ಎನ್ನುವುದನ್ನು ಕಾಯ್ದೆಯು ಸ್ಪಷ್ಟಪಡಿಸುತ್ತದೆ.
ಜವಾಹರಲಾಲ್ ನೆಹರೂ ತನ್ನ ‘ಡಿಸ್ಕವರಿ ಆಫ್ ಇಂಡಿಯ’ದಲ್ಲಿ ಹೇಳಿರುವಂತೆ, ಶ್ರೀಮಂತ ಬಹುಸಂಸ್ಕೃತಿಯ ನಾಗರಿಕತೆಗಳಿರುವ ದೇಶಗಳ ಪೈಕಿ ಭಾರತ ಅತ್ಯಂತ ಶ್ರೀಮಂತವಾಗಿದೆ.

ಆರಂಭದಲ್ಲಿ ಹರಪ್ಪನ್ನರು ಮತ್ತು ಆದಿವಾಸಿಗಳು ಬಂದರೆ, ನಂತರದ ಶತಮಾನಗಳಲ್ಲಿ ಆರ್ಯನ್ನರು, ಗ್ರೀಕರು, ರೊರಾಸ್ಟ್ರಿಯನ್ನರು, ಯಹೂದಿಗಳು, ಆಫ್ರಿಕನ್ ಸಿದ್ದಿಗಳು, ಕ್ರೈಸ್ತರು, ಮುಸ್ಲಿಮರು (ಮುಸ್ಲಿಮರು ಮೊದಲು ಬಂದದ್ದು ಮಲಬಾರ್ ಕರಾವಳಿಗೆ 8ನೇ ಶತಮಾನದಲ್ಲಿ ವ್ಯಾಪಾರಿಗಳಾಗಿ), ಮಂಗೋಲಿಯನ್ನರು ಮತ್ತು ತುರ್ಕರು ಬಂದರು. ಹಳೆಯ ಇತಿಹಾಸದ ಪುಟಗಳು ಆಂಶಿಕವಾಗಿ ಅಳಿಸಿ ಹೋಗಿವೆ ಅಥವಾ ವಿವರಗಳು ಒಂದರ ಮೇಲೆ ಒಂದರಂತೆ ದಾಖಲಾಗಿವೆ. ಆದರೆ, ಅದರ ಒಟ್ಟಾರೆ ನೋಟ ಮತ್ತು ಭಾರತದ ಕಲ್ಪನೆ ಕಳೆದುಹೋಗಿಲ್ಲ. ಎಲ್ಲಿ ನೋಡಿದರೂ ಭಾರತದ ಶ್ರೀಮಂತ ಬಹು ಸಂಸ್ಕೃತಿಗಳ ಇತಿಹಾಸವನ್ನು ಸಾಬೀತುಪಡಿಸುವ ವಸ್ತುಗಳು, ಪದ್ಧತಿಗಳು ಮತ್ತು ಭಾಷಾ ಗುರುತುಗಳು ಸಿಗುತ್ತವೆ.

ನಮ್ಮ ನೆಲದ ಈ ಬಹು ಸಂಸ್ಕೃತಿಯ ಪರಂಪರೆಯು ನಮ್ಮ ಸಂವಿಧಾನದ ಚಾಲಕ ಶಕ್ತಿಯಾಗಿದೆ. ಭಾರತದಲ್ಲಿ ಏನು ಮಾಡಬೇಕೆಂಬುದಾಗಿ ತಾವು ಯೋಚಿಸುತ್ತಾ ಬಂದಿದ್ದೇವೋ, ಅವುಗಳನ್ನು ಮಾಡಲು ಈಗ ಸಮಯ ಎಂದು ಬಲಪಂಥೀಯ ಹಿಂದುತ್ವದ ಶಕ್ತಿಗಳು ಭಾವಿಸಿವೆ. ಮುಸ್ಲಿಮ್ ಅಸ್ತಿತ್ವದ ಎಲ್ಲ ಕುರುಹುಗಳನ್ನು ಅಳಿಸಿಹಾಕುವುದು (ಭಾರತವನ್ನು ಆಕ್ರಮಿಸಿದವರು ಮುಸ್ಲಿಮರು ಮಾತ್ರ, ಬ್ರಿಟಿಷರು ನಮಗೆ ನಾಗರಿಕತೆ ಕಲಿಸಲು ಬಂದರು ಎಂಬುದಾಗಿ ಅವುಗಳು ಭಾವಿಸಿದಂತಿದೆ) ಮತ್ತು ಭಾರತೀಯರೆಲ್ಲರೂ ಹಿಂದೂಗಳು (ಚೀನೀಯರೆಲ್ಲ ಹಾನ್ ಜನಾಂಗೀಯರು ಎಂಬಂತೆ) ಎಂಬ ಪ್ರಚಲಿತವನ್ನು ಸ್ಥಾಪಿಸುವುದು ಬಲಪಂಥೀಯ ಹಿಂದುತ್ವ ಶಕ್ತಿಗಳ ಉದ್ದೇಶವಾಗಿದೆ.

ಎಲ್ಲವನ್ನೂ ಅಗೆಯೋಣ
ಉದ್ದೇಶವು ‘ಸತ್ಯವನ್ನು ಕಂಡುಹಿಡಿಯುವುದು’ ಆಗಿದೆ. ಇಂತಹ ಉದಾತ್ತ ಧ್ಯೇಯವನ್ನು ಕೇವಲ ಇಸ್ಲಾಮಿಕ್ ಆಕ್ರಮಣಗಳಿಗೆ ಸೀಮಿತಗೊಳಿಸುವುದು ಸಾಧ್ಯವಿಲ್ಲ, ಸಾಧ್ಯವೇ?
ಹಾಗಾಗಿ, ನಾವು ಪ್ರಾಮಾಣಿಕವಾಗಿ ಅಗೆಯೋಣ. ಮಣ್ಣಿನ ಕೆಳಗಿರುವ ಸತ್ಯವು ನಮ್ಮನ್ನು ಎಲ್ಲಿಗೆ ಒಯ್ಯುತ್ತದೋ ಒಯ್ಯಲಿ.
ಹಿಂದೂ ರಾಜರು ಇತರ ಹಿಂದೂ ರಾಜರನ್ನು ಸೋಲಿಸಿ ಅವರ ದೇವಸ್ಥಾನಗಳನ್ನು ಅಪವಿತ್ರಗೊಳಿಸಿದರು ಎಂಬುದಾಗಿ ಹಲವರು ಬರೆದಿದ್ದಾರೆ. ದೇವಸ್ಥಾನಗಳನ್ನು ವಶ ಪಡಿಸಿಕೊಳ್ಳುವ ಉದ್ದೇಶಗಳು ಎರಡು: ಒಂದನೆಯದು, ಅಲ್ಲಿರುವ ಸಂಪತ್ತನ್ನು ದೋಚುವುದು, ಮತ್ತು ಎರಡು, ಅಲ್ಲಿರುವ ದೇವರ ವಿಗ್ರಹಗಳನ್ನು ತೆಗೆದು ತಮ್ಮ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸುವುದು.
ಹಾಗಾಗಿ, ವ್ಯಾಪಕವಾಗಿ ದಾಖಲಾಗಿರುವ ಈ ಹೇಳಿಕೆಗಳಲ್ಲಿ ಸತ್ಯವಿದೆಯೇ ಎಂದು ನೋಡೋಣ.

ಸತ್ಯವಿದ್ದರೆ, ಶೈವರು ಅಪವಿತ್ರಗೊಳಿಸಿದ ದೇವಸ್ಥಾನಗಳನ್ನು ಮತ್ತೆ ಪಡೆದುಕೊಳ್ಳಲು ವೈಷ್ಣವರು ಬಯಸಬಹುದು ಹಾಗೂ ವೈಷ್ಣವರು ಅಪವಿತ್ರಗೊಳಿಸಿದ ದೇವಸ್ಥಾನಗಳನ್ನು ಮರುವಶಪಡಿಸಿಕೊಳ್ಳಲು ಶೈವರು ಬಯಸಬಹುದು. ಸತ್ಯವನ್ನು ಹೇಳಿದರೆ ಮತ್ತು ಸತ್ಯ ಮರುಸ್ಥಾಪನೆಯಾದರೆ, ಹೀಗೆ ಯಾಕೆ ಮಾಡಬಾರದು? ಭಾರತದ ಮೂಲ ನಿವಾಸಿಗಳಾದ ಆದಿವಾಸಿಗಳು ಕೂಡ ತಮ್ಮ ದೇವತೆಗಳನ್ನು ಹೇಗೆ ನಾಶಪಡಿಸಲಾಯಿತು ಅಥವಾ ಹಿಂದೂ ದೇವರ ಗುಂಪಿಗೆ ಹೇಗೆ ಸೇರಿಸಲಾಯಿತು ಎಂಬ ಸತ್ಯವನ್ನು ಅಗೆಯಲು ನ್ಯಾಯೋಚಿತವಾಗಿಯೇ ಬಯಸಬಹುದು. ಈ ಆದಿವಾಸಿಗಳಿಗೆ ವನವಾಸಿಗಳು (ಕಾಡಿನಲ್ಲಿ ವಾಸಿಸುತ್ತಿದ್ದವರು) ಎಂಬ ಬಲಪಂಥೀಯ ಹೆಸರನ್ನು ನೀಡಲಾಗಿದೆ. ಮೂಲದಲ್ಲಿ ತಾವಿದ್ದವರು ಎಂಬ ಆದಿವಾಸಿಗಳ ಹೇಳಿಕೆಯನ್ನು ದುರ್ಬಲಗೊಳಿಸುವುದಕ್ಕಾಗಿ ಹೀಗೆ ಮಾಡಲಾಗಿದೆ).
ಹಾಗಾಗಿ, ಅವರು ಕೂಡ ಸತ್ಯವನ್ನು ಅರಸಲು ನೆಲವನ್ನು ಅಗೆಯಲು ಬಯಸಬಹುದಾಗಿದೆ.

ಬೌದ್ಧರು
ಇಲ್ಲಿ ಹೆಚ್ಚಿನ ಪ್ರಮಾಣದ ಅಗೆತ ಬೇಕಾಗಬಹುದು. ಯಾಕೆಂದರೆ ಇಲ್ಲಿ ಭಾರೀ ಪ್ರಮಾಣದಲ್ಲಿ ಆಕ್ರಮಣಗಳು ನಡೆದಿವೆ. ಇದನ್ನು ಇತಿಹಾಸಕಾರರು ಮತ್ತು ಸ್ವತಃ ಬಲಪಂಥೀಯರ ವಂಶಸ್ಥರೇ ಹೇಳಿದ್ದಾರೆ.
ಬುದ್ಧ ವಿಹಾರಗಳು ಮತ್ತು ಬುದ್ಧ ಸ್ತೂಪಗಳ ಮೇಲೆ ಹಿಂದೂಗಳು ನಡೆಸಿದ ಆಕ್ರಮಣಗಳಿಗೆ ಸಂಬಂಧಿಸಿ ಪ್ರಾಚೀನ ಭಾರತದ ಇತಿಹಾಸಕಾರರಲ್ಲೇ ಶ್ರೇಷ್ಠರಾದ ಡಿ.ಎನ್. ಝಾ ವ್ಯಾಪಕ ಅಧ್ಯಯನ ನಡೆಸಿದ್ದಾರೆ. ಈ ಸಂಬಂಧ ಅವರು ‘ಅಗೆನ್‌ಸ್ಟ್ ದ ಗ್ರೇನ್: ಐಡೆಂಟಿಟಿ, ಇನ್‌ಟೋಲರನ್ಸ್, ಹಿಸ್ಟರಿ’ ಎಂಬ ಪುಸ್ತಕ ಬರೆದಿದ್ದಾರೆ.
ಇದರ ಅಧ್ಯಯನಕ್ಕಾಗಿ ಅಗೆಯುತ್ತಾ ಸಾಗಿದರೆ ತುಂಬಾ ಸಮಯ ಬೇಕಾಗಬಹುದು. ಆದರೆ, ಸತ್ಯವನ್ನು ಕಂಡುಹಿಡಿಯುವುದಕ್ಕಾಗಿ ಅಗೆಯಬೇಕಾಗುತ್ತದೆ.
ಕೆಲವು ಹಿಂದೂ ದೇವಸ್ಥಾನಗಳ ಬಗ್ಗೆ ‘ಕೊಳಕು ಮನಸ್ಸಿನ ಜಾತ್ಯತೀತರು’ ಹೇಳಿರುವ ವಿಷಯಗಳನ್ನು ಸ್ವಾಮಿ ವಿವೇಕಾನಂದ, ದಯಾನಂದ ಸರಸ್ವತಿ ಮತ್ತು ಕಟ್ಟಾ ರಾಷ್ಟ್ರೀಯವಾದಿ ಬಂಕಿಮ್‌ಚಂದ್ರ ಚಟರ್ಜಿ ಮುಂತಾದವರೇ ಅನುಮೋದಿಸಿದ್ದಾರೆ. ಹಾಗಾಗಿ, ಈ ವಿಷಯದಲ್ಲಿ ಅಧ್ಯಯನ ನಡೆಸುವುದು ಅನಿವಾರ್ಯವಾಗುತ್ತದೆ.
ಭೂಮಿ ಅಗೆಯುವ ಬೇಡಿಕೆಗಳು ಇತರ ಅನಿರೀಕ್ಷಿತ ವಲಯದಿಂದಲೂ ಬರಬಹುದಾಗಿದೆ. ಈ ಬೇಡಿಕೆಗಳನ್ನೂ ಗೌರವಿಸಬೇಕಾಗುತ್ತದೆ. ಯಾಕೆಂದರೆ ಬೇಡಿಕೆಗಳು ಮತ್ತು ಸಂಶಯಗಳು ಯಾವುದೇ ಒಂದು ವಿಭಾಗದ ಏಕಸ್ವಾಮ್ಯವೇನೂ ಅಲ್ಲ.


ಇವರು ಹೀಗೆನ್ನುತ್ತಾರೆ...


ಸ್ವಾಮಿ ವಿವೇಕಾನಂದ:
ಭಾರತೀಯ ಇತಿಹಾಸದ ಬಗ್ಗೆ ಕೊಂಚವಾದರೂ ಗೊತ್ತಿರುವ ವ್ಯಕ್ತಿಗೆ, ಜಗನ್ನಾಥ ದೇವಸ್ಥಾನವು ಬೌದ್ಧ ದೇವಾಲಯ ಎನ್ನುವುದು ತಿಳಿದಿದೆ. ನಾವು ಈ ದೇವಸ್ಥಾನ ಮತ್ತು ಇತರ ದೇವಸ್ಥಾನಗಳನ್ನು ವಶಪಡಿಸಿಕೊಂಡೆವು ಹಾಗೂ ಮರು-ಹಿಂದೂಕರಣ ಗೊಳಿಸಿದೆವು. ಇಂತಹ ಹಲವು ಸಂಗತಿಗಳನ್ನು ನಾವು ಇನ್ನೂ ಮಾಡಬೇಕಾಗಿದೆ’’.

ಸ್ವಾಮಿ ದಯಾನಂದ ಸರಸ್ವತಿ:
ಆದಿ ಶಂಕರಾಚಾರ್ಯರು 10 ವರ್ಷಗಳ ಕಾಲ ದೇಶಾದ್ಯಂತ ಸಂಚಾರ ಮಾಡಿದರು. ಜೈನ ಧರ್ಮವನ್ನು ವಿರೋಧಿಸಿದರು ಮತ್ತು ವೈದಿಕ ಧರ್ಮವನ್ನು ಬೋಧಿಸಿದರು.; ಈಗ ನೆಲವನ್ನು ಅಗೆಯುವಾಗ ಸಿಗುವ ಎಲ್ಲ ಮುರಿದ ವಿಗ್ರಹಗಳು ಆದಿ ಶಂಕರರ ಕಾಲದಲ್ಲಿ ಮುರಿಯಲಾದ ವಿಗ್ರಹಗಳಾ ಗಿವೆ. ಭೂಮಿಯಡಿಯಲ್ಲಿ ಇಡೀ ವಿಗ್ರಹಗಳು ಸಿಕ್ಕಿದರೆ, ಅವು ಜೈನ ಧರ್ಮವನ್ನು ದ್ವೇಷಿಸುವವರಿಂದ ತಮ್ಮ ವಿಗ್ರಹಗಳನ್ನು ರಕ್ಷಿಸಲು ಜೈನರು ಭೂಮಿಯಡಿಯಲ್ಲಿ ಹೂತು ಹಾಕಿದ ವಿಗ್ರಹಗಳಾಗಿವೆ’’ (ಸತ್ಯಪ್ರಕಾಶ, ಅಧ್ಯಾಯ 11, ಪುಟ 347).

ಬಂಕಿಮ್ ಚಂದ್ರ ಚಟರ್ಜಿ:
ಜಗನ್ನಾಥ ದೇವಸ್ಥಾನದ ರಥೋತ್ಸವದ ಮೂಲದ ಬಗ್ಗೆ ಜನರಲ್ ಕನ್ನಿಂಗ್‌ಹ್ಯಾಮ್ ನೀಡಿರುವ ಅತ್ಯಂತ ಸಮಂಜಸ ವಿವರಣೆಯೊಂದರ ಬಗ್ಗೆ ನನಗೆ ತಿಳಿದಿದೆ. ಬೌದ್ಧರು ಕೂಡ ಇಂತಹದ್ದೇ ಉತ್ಸವವನ್ನು ನಡೆಸುತ್ತಿದ್ದರು ಎಂಬುದಾಗಿ ಅವರು ಹೇಳಿದ್ದಾರೆ. ಬೌದ್ಧರ ಉತ್ಸವದಲ್ಲಿ ಬೌದ್ಧ ಧರ್ಮದ ಮೂರು ಸಂಕೇತಗಳಾದ ಬುದ್ಧ, ದಮ್ಮ ಮತು ಸಂಘರ ಮೂರ್ತಿಗಳನ್ನು ಇದೇ ರೀತಿಯಲ್ಲಿ ರಥದಲ್ಲಿ ಎಳೆದುಕೊಂಡು ಹೋಗಲಾಗುತ್ತಿತ್ತು. ಅದನ್ನು ಕೂಡ ಈಗಿನ ಜಗನ್ನಾಥ ರಥ ಯಾತ್ರೆ ನಡೆಯುವ ಋತುವಿನಲ್ಲೇ ನಡೆಸಲಾಗುತ್ತಿತ್ತು ಎಂದು ನಾನು ಭಾವಿಸುತ್ತೇನೆ. ಹಾಗಾಗಿ, ರಥದಲ್ಲಿ ಈಗ ಒಯ್ಯಲಾಗಿರುವ ಜಗನ್ನಾಥ, ಬಲರಾಮ ಮತ್ತು ಸುಭದ್ರಾ ಮೂರ್ತಿಗಳು ಬುದ್ಧ, ದಮ್ಮ ಮತ್ತು ಸಂಘರ ಪಡಿಯಚ್ಚುಗಳಾಗಿವೆ ಎನ್ನುವ ಸಿದ್ಧಾಂತವನ್ನು ದೃಢಪಡಿಸುವ ವಾಸ್ತವವಾಗಿದೆ’’.(ಬಂಕಿಮ್ ಚಂದ್ರ ಚಟರ್ಜಿ, ಆನ್ ದ ಒರಿಜಿನ್ ಆಫ್ ಹಿಂದೂ ಫೆಸ್ಟಿವಲ್ಸ್, ಎಸ್ಸೇಸ್ ಆ್ಯಂಡ್ ಲೆಟರ್ಸ್, ರೂಪಾ, ದಿಲ್ಲಿ, 2010, ಪುಟಗಳು 8-9).

 ಕೃಪೆ: thewire.in

Writer - ಬದ್ರಿ ರೈನಾ

contributor

Editor - ಬದ್ರಿ ರೈನಾ

contributor

Similar News