ಸರಕಾರದ ಎಚ್ಚರಿಕೆಯನ್ನು ಕಡೆಗಣಿಸಿ ಸಚಿವಾಲಯ ಬಂದ್: ಕರ್ತವ್ಯಕ್ಕೆ ಗೈರಾದ ಶೇ.90ರಷ್ಟು ನೌಕರರು

Update: 2022-05-27 09:51 GMT

ಬೆಂಗಳೂರು, ಮೇ 27: ಸಚಿವಾಲಯದ 542 ಕಿರಿಯ ಸಹಾಯಕರ ಹುದ್ದೆಗಳನ್ನು ಕಡಿತ ಪ್ರಸ್ತಾವ ಕೈಬಿಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕರ್ನಾಟಕ ಸರಕಾರ ಸಚಿವಾಲಯದ ನೌಕರರ ಸಂಘ ಕರೆ ನೀಡಿದ್ದ ಬಂದ್ ಕರೆಗೆ ಉತ್ತಮ ಸ್ಪಂದನ ವ್ಯಕ್ತವಾಗಿದೆ.

ಅಧಿಕಾರಿಗಳನ್ನು ಹೊರತುಪಡಿಸಿ ಶೇ.90ರಷ್ಟು ನೌಕರರು ಶುಕ್ರವಾರ ಕಚೇರಿಗೆ ಹಾಜರಾಗದೆ ಪ್ರತಿರೋಧ ವ್ಯಕ್ತಪಡಿಸಿದರು.  ನೌಕರರೊಂದಿಗೆ ಗುತ್ತಿಗೆ ನೌಕರರು ಸಹ ಕಚೇರಿಗೆ ಗೈರು ಹಾಜರಾಗಿದ್ದರಿಂದ ಸಚಿವಾಲಯ ಜನರಿಲ್ಲದೆ ಖಾಲಿ ಖಾಲಿಯಾಗಿತ್ತು.

ಬಂದ್ ಕರೆ ಕಾನೂನುಬಾಹಿರ, ಇದರಲ್ಲಿ ಭಾಗಿಯಾಗದೆ ಕರ್ತವ್ಯಕ್ಕೆ ಹಾಜರಾಗುವಂತೆ ಸಚಿವಾಲಯಲದ ನೌಕರರಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಎಚ್ಚರಿಕೆ ನೀಡಿದ್ದರು. ಬಗ್ಗೆ ಸುತ್ತೋಲೆಯನ್ನೂ ಹೊರಡಿಸಿದ್ದರು. ಹಾಗಿದ್ದರೂ ಬಹುತೇಕ ಸಿಬ್ಬಂದಿ ಶುಕ್ರವರ ಕಚೇರಿಗೆ ಆಗಮಿಸಲಿಲ್ಲ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News