ಬೆಂಗಳೂರು | ಒತ್ತುವರಿಯಾದ 5-24.08 ಎಕರೆ ಸರಕಾರಿ ಪ್ರದೇಶ ತೆರವು: ಜಿಲ್ಲಾಧಿಕಾರಿ ಜೆ.ಮಂಜುನಾಥ್

Update: 2022-05-27 18:00 GMT

ಬೆಂಗಳೂರು, ಮೇ 27: ಬೆಂಗಳೂರು ನಗರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಒತ್ತುವಾರಿಯಾದ ಒಟ್ಟು 5-24.08 ಎಕರೆ ವಿಸ್ತೀರ್ಣದ ಸರಕಾರಿ ಕೆರೆ, ಕುಂಟೆ, ಗೋಮಾಳ, ಸ್ಮಶಾನ, ರಾಜಕಾಲುವೆ ಮತ್ತು ಇತರೆ ಸರಕಾರಿ ಜಮೀನುಗಳನ್ನು ಮೇ 27 ರಂದು ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರ ನೇತೃತ್ವದಲ್ಲಿ ನಡೆದ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ತೆರವುಗೊಳಿಸಲಾಗಿದೆ. 

ಆನೇಕಲ್ ತಾಲೂಕಿನಲ್ಲಿ 220 ಲಕ್ಷ ರೂ. ಮೌಲ್ಯದ ಒತ್ತುವರಿಯಾದ ಒಟ್ಟು 3-21.08 ಎಕರೆ ವಿಸ್ತೀರ್ಣದ ಸರಕಾರಿ ಕೆರೆ, ರಾಜಕಾಲುವೆ ಹಾಗೂ ಕುಂಟೆ ಪ್ರದೇಶವನ್ನು ಈ ಕಾರ್ಯಾಚರಣೆಯಲ್ಲಿ ತೆರವುಗೊಳಿಸಲಾಗಿದ್ದು, ಆನೇಕಲ್, ಬೆಂಗಳೂರು ದಕ್ಷಿಣ ಹಾಗೂ ಯಲಹಂಕ ತಾಲೂಕುಗಳಲ್ಲಿ 1555.60 ಲಕ್ಷ ರೂ.ಗಳ ಮೌಲ್ಯದ ಒತ್ತುವರಿಯಾದ ಒಟ್ಟು 2-03.00 ಎಕರೆ ವಿಸ್ತೀರ್ಣದ ಗೋಮಾಳ, ಮುಫತ್ ಕಾವಲ್, ಗುಂಡುತೋಪು ಹಾಗೂ ಸ್ಮಶಾನ ಪ್ರದೇಶವನ್ನು ತೆರವುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ಹೊಂಗಸಂದ್ರ ಗ್ರಾಮದಲ್ಲಿ 512.50 ಲಕ್ಷ ರೂ. ಬೆಲೆಬಾಳುವ 1-01 ಎಕರೆ ವಿಸ್ತೀರ್ಣದ ಗೋಮಾಳ ಪ್ರದೇಶ ಹುಳಿಮಾವು ಗ್ರಾಮದಲ್ಲಿ 1000.00 ಲಕ್ಷ ರೂ. ಮೌಲ್ಯದ 0-20 ಎಕರೆ ವಿಸ್ತೀರ್ಣದ ಮುಘತ್ ಕಾವಲ್ ಪ್ರದೇಶ ಒತ್ತುವರಿಯನ್ನು ತೆರೆವುಗೊಳಿಸಲಾಗಿದೆ.

ಯಲಹಂಕ ತಾಲೂಕಿನ ಹೆಸರುಘಟ್ಟ ಹೋಬಳಿಯ ಚೋಕ್ಕನಹಳ್ಳಿ ಗ್ರಾಮದಲ್ಲಿ ಒತ್ತುವರಿಯಾದ 8.10 ಲಕ್ಷ ರೂ. ಮೌಲ್ಯದ 0-09 ಎಕರೆ ವಿಸ್ತೀರ್ಣದ ಗುಂಡುತೋಪು ಪ್ರದೇಶವನ್ನು ತೆರೆವುಗೊಳಿಸಲಾಗಿದೆ.

ಆನೇಕಲ್ ತಾಲೂಕಿನ ಜಿಗಣಿ ಹೋಬಳಿಯ ರಾಜಾಪುರ ಗ್ರಾಮದ 35 ಲಕ್ಷ ರೂ. ಮೌಲ್ಯದ 0-13 ಎಕರೆ ವಿಸ್ತೀರ್ಣದ ಸ್ಮಶಾನ ಪ್ರದೇಶವನ್ನು ತೆರೆವುಗೊಳಿಸಲಾಗಿದೆ. ಆನೇಕಲ್ ತಾಲೂಕಿನ ಕಸಬಾ ಹೋಬಳಿಯ ಬ್ಯಾಗಡದೇವಹಳ್ಳಿ ಮತ್ತು ಅವಡದೇವನಹಳ್ಳಿ ಗ್ರಾಮದ 20.00 ಲಕ್ಷ ಮೌಲ್ಯದ 0-03 ಎಕರೆ ವಿಸ್ತೀರ್ಣದ ರಾಜಕಾಲುವೆ ಜಿಗಣಿ ಹೋಬಳಿಯ ಹುಲ್ಲಹಳ್ಳಿ ಗ್ರಾಮದ 20.00 ಲಕ್ಷ ಮೌಲ್ಯದ 0-03 ಎಕರೆ ವಿಸ್ತೀರ್ಣದ ಕುಂಟೆ, ಸರ್ಜಾಪುರ ಹೋಬಳಿಯ ಅಡಿಗಾರಕಲ್ಲಹಳ್ಳಿ ಗ್ರಾಮದ 3-07 ಎಕರೆ ವಿಸ್ತೀರ್ಣದ 150.00 ಲಕ್ಷ ಮೌಲ್ಯದ ಸರಕಾರಿ ಕರೆ ಪ್ರದೇಶ, ಸರ್ಜಾಪುರ ಹೋಬಳಿಯ ಚೂಡಸಂದ್ರ ಗ್ರಾಮದ 0-05 ಎಕರೆ ವಿಸ್ತೀರ್ಣದ 2.00 ಲಕ್ಷ ಮೌಲ್ಯದ ಸರಕಾರಿ ಕರೆ ಹಾಗೂ ಸರ್ಜಾಪುರ ಹೋಬಳಿಯ ಕಾಡಗ್ರಹಾರ ಗ್ರಾಮದಲ್ಲಿ ಒತ್ತುವರಿಯಾದ 0-03.08 ಎಕರೆ ವಿಸ್ತೀರ್ಣದ ರೂ.10.00 ಲಕ್ಷ ಮೌಲ್ಯದ ರಾಜಕಾಲುವೆ ಪ್ರದೇಶವನ್ನು ತೆರೆವುಗೊಳಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News