ಆರು ಧಾರ್ಮಿಕ ಸಮುದಾಯಗಳಿಗೆ ಅಲ್ಪಸಂಖ್ಯಾತ ಪ್ರಮಾಣಪತ್ರಗಳನ್ನು ನೀಡಲು ಅಸ್ಸಾಂ ಸರಕಾರ ನಿರ್ಧಾರ

Update: 2022-05-30 06:46 GMT
photo: Himanta Biswa Sarma/Facebook

ಗುವಾಹಟಿ: ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು, ಜೈನರು ಹಾಗೂ  ಪಾರ್ಸಿಗಳಿಗೆ ಅಲ್ಪಸಂಖ್ಯಾತ ಪ್ರಮಾಣಪತ್ರಗಳನ್ನು ನೀಡುವುದಾಗಿ ಅಸ್ಸಾಂ ಸರಕಾರ ರವಿವಾರ ಹೇಳಿದೆ ಎಂದು NDTV ವರದಿ ಮಾಡಿದೆ.

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಸ್ಸಾಂ ಆರೋಗ್ಯ ಸಚಿವ ಕೇಶಬ್ ಮಹಂತ ತಿಳಿಸಿದ್ದಾರೆ.

“ನಾವು ಅದನ್ನು ಈಗ ಮೊದಲ ಬಾರಿಗೆ ಆರಂಭಿಸುತ್ತಿದ್ದೇವೆ. ನಮ್ಮಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಇದೆ. ಆದರೆ ಅಲ್ಪಸಂಖ್ಯಾತರು ಯಾರು? ಅಲ್ಪಸಂಖ್ಯಾತರ ಪ್ರಮಾಣಪತ್ರ ಆಧಾರಿತ ಗುರುತು ಇರಲಿಲ್ಲ. ಈಗ ಅವರು ಪ್ರಮಾಣಪತ್ರಗಳನ್ನು ಹೊಂದಿರುತ್ತಾರೆ'' ಎಂದು ಮಹಂತ ಅವರು ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ರಾಜ್ಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವ್ಯಾಖ್ಯಾನವು ಜಿಲ್ಲಾವಾರು ಭಿನ್ನವಾಗಿರಬೇಕು ಎಂದು ಶರ್ಮಾ ಹೇಳಿದ ಒಂದು ತಿಂಗಳ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.

ಭಾರತದಲ್ಲಿ ಮುಸ್ಲಿಮರು ಮಾತ್ರ ಅಲ್ಪಸಂಖ್ಯಾತರು ಎಂಬ ಭಾವನೆ ಇದೆ ಎಂದು ಅವರು ಹೇಳಿದ್ದರು.

"ಅಸ್ಸಾಂನಲ್ಲಿ, ಅವರು (ಮುಸ್ಲಿಮರು) ಇನ್ನು ಮುಂದೆ ಹಲವಾರು ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತರಲ್ಲ. ಈಗ ಪರಿಸ್ಥಿತಿ ಹಾಗೂ  ಬೆದರಿಕೆ ಗ್ರಹಿಕೆಗೆ ಅನುಗುಣವಾಗಿ ಹಿಂದೂಗಳು ಒಂದು ರಾಜ್ಯದಲ್ಲಿ ಅಲ್ಪಸಂಖ್ಯಾತರಾಗಬಹುದು’’ ಎಂದು ಶರ್ಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News