×
Ad

ಮಂಗಳೂರು; ಜೂ. 5ರಂದು ಹಜ್ ಯಾತ್ರಿಕರಿಗೆ ಲಸಿಕೆ

Update: 2022-05-31 21:22 IST

ಮಂಗಳೂರು : ಪ್ರಸಕ್ತ ಸಾಲಿನಲ್ಲಿ  ಹಜ್ ಯಾತ್ರೆಗೆ ತೆರಳಲು ಕೇಂದ್ರ ಹಜ್ ಸಮಿತಿಯಿಂದ ಆಯ್ಕೆಯಾಗಿರುವ  ಯಾತ್ರಿಕರಿಗೆ ಲಸಿಕೆ ನೀಡುವ ಕಾರ್ಯಕ್ರಮವು ಜೂ.5ರಂದು  ಬೆಳಗ್ಗೆ 8.30ಕ್ಕೆ ನಗರದ ಕೋಡಿಯಾಲ್‌ಬೈಲ್‌ನ ಯೆನೆಪೊಯ ಆಸ್ಪತ್ರೆಯಲ್ಲಿ ನಡೆಯಲಿದೆ.

ಹಜ್‌ಗೆ ತೆರಳುವವರು ಲಸಿಕೆ ಪಡೆಯುವುದು ಕಡ್ಡಾಯವಾಗಿದೆ. ಹಾಗಾಗಿ ದ.ಕ, ಉಡುಪಿ, ಕೊಡಗು ಜಿಲ್ಲೆಯ ಹಜ್ ಯಾತ್ರಿಕರು ಅಮದು ಲಸಿಕೆ ಪಡೆಯಬೇಕು ಎಂದು ದ.ಕ. ಜಿಲ್ಲಾ ವಕ್ಫ್  ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸೀರ್ ಲಕ್ಕಿಸ್ಟಾರ್  ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News