​ಮಣಿಪಾಲ: ವಿಶೇಷ ಶಾಲೆಯ ಮಕ್ಕಳಿಗೆ ಸಂಗೀತ, ನೃತ್ಯ ಕಾರ್ಯಕ್ರಮ

Update: 2022-06-02 13:39 GMT

ಉಡುಪಿ, ಜೂ.2: ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆಟ್ಸರ್ ಅಂಡ್ ಸೈನ್ಸಸ್ (ಜಿಸಿಪಿಎಎಸ್), ಆಸರೆ ವಿಶೇಷ ಶಾಲೆಯ ಅರ್ಚನಾ ಟ್ರಸ್ಟ್ ಹಾಗೂ ಮಾಹೆಯ ಸಹಯೋಗದೊಂದಿಗೆ ‘ಆಸರೆ’ಯ ವಿಶೇಷ ಮಕ್ಕಳಿಗಾಗಿ ಸಂಗೀತ ಮತ್ತು ನೃತ್ಯದ ವಿಶೇಷ ಕಾರ್ಯಕ್ರಮವೊಂದನ್ನು ಇತ್ತೀಚೆಗೆ ಹಮ್ಮಿಕೊಂಡಿತ್ತು.

ಈ ಸಂದರ್ಭದಲ್ಲಿ ಜಿಸಿಪಿಎಎಸ್‌ನ ವಿದ್ಯಾರ್ಥಿಗಳು ಸಮೂಹ ಗಾಯನ, ಸಮೂಹ ನೃತ್ಯ ಮತ್ತು ವಿಶೇಷ ಆಟಗಳ ಮೂಲಕ ‘ಆಸರೆ’ಯ ವಿದ್ಯಾರ್ಥಿ ಗಳೊಂದಿಗೆ ತಮ್ಮನ್ನು ತೊಡಗಿಸಿಕೊಂಡರು. ವಿನೋದ ಮತ್ತು ಉಲ್ಲಾಸ ಭರಿತವಾಗಿ ಈ ದಿನ ಸ್ಮರಣೀಯವಾಯಿತು.

ಎಂಎ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಜೂಡಿ, ಮರಿಯಮ್, ಶ್ರಾವ್ಯ, ರಮ್ಯಾ, ಶ್ರೀಕೃಷ್ಣ ಮತ್ತು ಟ್ರೈಫೆನ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಶೈಕ್ಷಣಿಕ ಮನಶಾಸ್ತ್ರಜ್ಞ ಪ್ರೊ.ಟಿ.ಕೆ. ಹಿರೇಗಂಗೆ ‘ಆಸರೆ’ಗೆ ಒಂದು ಲಕ್ಷ ರೂ. ಮೊತ್ತದ ದೇಣಿಗೆಯನ್ನು ನೀಡಿದರು.

ಮಾಹೆಯ ಜನರಲ್ ಸರ್ವಿಸ್‌ನ ನಿರ್ದೇಶಕ ಕರ್ನಲ್ ಪ್ರಕಾಶ್‌ಚಂದ್ರ, ಆಸರೆಯ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಎಸ್. ಜೈ ವಿಠಲ್, ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News