ಅನಿತಾ ಪ್ರೆಸಿಲ್ಲಾ ಕೆಸ್ತಲಿನೋಗೆ ಅತ್ಯುತ್ತಮ ನರ್ಸ್ ರಾಜ್ಯ ಪ್ರಶಸ್ತಿ
Update: 2022-06-02 20:49 IST
ಶಿರ್ವ, ಜೂ.2: ವಿಶ್ವ ದಾದಿಯರ ದಿನಾಚರಣೆ ಸಂದರ್ಭದಲ್ಲಿ ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಛೇರಿಯಲ್ಲಿ ಜರಗಿದ ಕರ್ನಾಟಕ ರಾಜ್ಯ ಮಟ್ಟದ ಪ್ಲಾರೆನ್ಸ್ ನೈಟಿಂಗೇಲ್ ಶುಶ್ರೂಷಾ ಅಧಿಕಾರಿಗಳ ಪ್ರಶಸ್ತಿ 2020-21 ಪ್ರದಾನ ಸಮಾರಂಭದಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ಶುಶ್ರೂಷಕಿ ಶಿರ್ವ ಮಾಣಿ ಪಾಡಿ ಅನಿತಾ ಪ್ರೆಸಿಲ್ಲಾ ಕೆಸ್ತಲಿನೊ ಅವರಿಗೆ ಅತ್ಯುತ್ತಮ ನರ್ಸ್ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಮತ್ತು ಕುಟುಂಬಕಲ್ಯಾಣ ಸಚಿವ ಡಾ.ಕೆ.ಸುಧಾಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವಿಭಾಗದ ಮುಖ್ಯ ಕಾರ್ಯದರ್ಶಿ ಅನಿಲ್ ಕುಮಾರ್ ಟಿ.ಕೆ., ಇಲಾಖೆಯ ಆಯುಕ್ತ ರಣದೀಪ್ ಡಿ., ಪ್ಲಾರೆನ್ಸ್ ನೈಟಿಂಗೇಲ್ ಅವಾರ್ಡ್ ಸಮಿತಿಯ ಚೇಯರ್‌ಮೆನ್ ಐವನ್ ನಿಗ್ಲಿ ಉಪಸ್ಥಿತರಿದ್ದರು.