''ಪಠ್ಯಪುಸ್ತಕ ಪರಿಷ್ಕರಣೆ - ಒಂದು ಅನಗತ್ಯ, ಭೇದ ಕಲ್ಪಿಸುವ ಮತ್ತು ದುಬಾರಿ ಕಾರ್ಯ''

Update: 2022-06-03 04:41 GMT
ಸಾಂದರ್ಭಿಕ ಚಿತ್ರ

ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ನಾವು ಕರ್ನಾಟಕ ಸರ್ಕಾರವನ್ನು ದೃಢವಾಗಿ ಒತ್ತಾಯಿಸುತ್ತೇವೆ:

1. ಉತ್ತಮವಾಗಿ ವ್ಯಾ ಖ್ಯಾನಿಸಲಾದ ಪಠ್ಯಕ್ರಮದ ಚೌಕಟ್ಟು ಮತ್ತು ಪ್ರಕ್ರಿಯೆಗಳನ್ನು ಅನುಸರಿಸದೆ, ಅನಿಯಂತ್ರಿತ ರೀತಿಯಲ್ಲಿ ಪಠ್ಯಪುಸ್ತಕಗಳಲ್ಲಿ ಮಾಡಲಾಗಿರುವ ಇತ್ತೀಚಿನ ಪ್ರತಿಗಾಮಿ ಪರಿಷ್ಕರಣೆಗಳನ್ನು ಹಿಂತೆಗೆದುಕೊಳ್ಳಿ.

2. ಹಿಂದಿನ ಪರಿಷ್ಕರಣೆಯ ನಂತರ ಹಲವು ವರ್ಷ ಗಳಿಂದ ಬಳಕೆಯಲ್ಲಿರುವ ಪಠ್ಯಪುಸ್ತಕಗಳನ್ನು ಮುದ್ರಿಸಿ, ಸರಬರಾಜು ಮಾಡಿ ಮತ್ತು ಮಕ್ಕಳಿಗೆ ಒದಗಿಸಿ.

3. ರಾಜ್ಯದಲ್ಲಿ ಕೋ ವಿಡ್ ನಿಂದ ಉಂಟಾಗಿರುವ ಗಂಭೀರ ಶಿಕ್ಷಣದ ಬಿಕ್ಕಟ್ಟನ್ನು ಪರಿಹರಿಸಲು ಶಕ್ತಿಸಾಮರ್ಥ್ಯಗಳನ್ನು ಕೇಂದ್ರೀಕರಿಸಿ, ಕ್ರಿಯಾಯೋಜನೆ ಸಿದ್ಧಪಡಿಸಿ, ಹಿಂದುಳಿದ, ಸಮಾಜದ ಅಂಚಿನಲ್ಲಿರುವ ಮತ್ತು ಬಡ ಸಮುದಾಯಗಳ ಮಕ್ಕಳಿಗೆ ಕಲಿಕಾ ನಷ್ಟವನ್ನು ನಿವಾರಿಸಲು ಅನುವು ಮಾಡಿಕೊಡುವ ಕಾರ್ಯಕ್ರಮಗಳನ್ನು ಜಾರಿಗೊಳಿಸಿ.

ಹಿನ್ನೆಲೆ

ಕರ್ನಾ ಟಕ ಸರ್ಕಾರವು ಇತ್ತೀಚೆಗೆ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಪರಿಷ್ಕರಣೆಯನ್ನು ಕೈಗೊಂಡಿದೆ, ಅದರಲ್ಲಿಕೆಲವು ಅಧ್ಯಾ ಯಗಳನ್ನು ತೆಗೆದುಹಾಕಲಾಗಿದೆ ಮತ್ತು ಕೆಲವನ್ನು ಸೇರಿಸಲಾಗಿದೆ. ಪಠ್ಯಪುಸ್ತಕ ಪರಿಷ್ಕರಣೆಯ ಪ್ರಕ್ರಿಯೆ ಬಹಳ ಸಂಕಟಕರವಾಗಿದೆ ಹಾಗು ಹಲವಾರು ಕಾರಣಗಳಿಂದ ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಸಂವಿಧಾನದ ಮೂಲ ವೌಲ್ಯಗಳಿಗೆ ವಿರುದ್ಧವಾಗಿದೆ.

ಅಪ್ರಜಾಸತ್ತಾತ್ಮಕ

ಕರ್ನಾ ಟಕ ಸರ್ಕಾರವು ಏಳು ಜನರ ಸಮಿತಿಯೊಂದನ್ನು ರಚಿಸಿ, ಯಾವುದೇ ಸಮಾಲೋ ಚನೆಯಿಲ್ಲದೆ, ಪಠ್ಯಪುಸ್ತಕದಲ್ಲಿ ಅಧ್ಯಾ ಯಗಳನ್ನು ಸೇರಿಸುವ ಮತ್ತು ಬಿಡುವ ನಿರ್ಧಾ ರಗಳನ್ನು ತೆಗೆದುಕೊಂಡಿದ್ದಾರೆ. ಇದು ಹಿಂದಿನ ಪರಿಷ್ಕರಣೆಯ ಪ್ರಕ್ರಿಯೆಗೆ ವ್ಯತಿರಿಕ್ತವಾಗಿದೆ - 2014 ರ ಬರಗೂರು ರಾಮಚಂದ್ರಪ್ಪ ಸಮಿತಿಯು ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು 172 ತಜ್ಞರನ್ನು ಒಳಗೊಂಡ 27 ಸಮಿತಿಗಳ ಮೂಲಕ ಕೆಲಸ ಮಾಡಿತ್ತು ಮತ್ತು ವೈವಿಧ್ಯಮಯ ಅಭಿಪ್ರಾಯಗಳನ್ನು ಕೇಳಲು ಹಲವಾರು ಸಾರ್ವ ಜನಿಕ ಸಮಾಲೋ ಚನೆಗಳನ್ನು ನಡೆಸಿತ್ತು. ಚಕ್ರತೀರ್ಥ ಸಮಿತಿಯು ತನ್ನ ಪ್ರಕ್ರಿಯೆಯಲ್ಲಿ ಯಾವುದೇ ಸಾರ್ವ ಜನಿಕ ಸಮಾಲೋಚನೆಗಳನ್ನು ನಡೆಸಿದೆ ಎಂಬುದು ತಿಳಿದಿಲ್ಲ.

ಪಠ್ಯಪುಸ್ತಕಗಳ ತಯಾರಿಕೆಯು ಹೆಚ್ಚಿನ ವಿವೇಚನೆಯುಳ್ಳ, ಜವಾಬ್ದಾರಿಯುತ ಪ್ರಕ್ರಿಯೆಯಾಗಿದೆ, ಏಕೆಂದರೆ ಪಠ್ಯಪುಸ್ತಕಗಳು ಲಕ್ಷಾಂತರ ಯುವ ಮನಸ್ಸುಗಳ ಮೇಲೆ ಪ್ರಭಾವ ಬೀರುವ ಪ್ರಮುಖ ಸಂಪನ್ಮೂ ಲವಾಗಿದೆ. ಸಾಮಾನ್ಯವಾಗಿ, ಶೈಕ್ಷಣಿಕ ತಜ್ಞರು, ಶಿಕ್ಷಕರು ಮತ್ತು ಪ್ರಖ್ಯಾ ತ ನಾಗರಿಕರ ವಿವಿಧ ಆಲೋ ಚನೆಗಳು ಮತ್ತು ಸಲಹೆಗಳನ್ನು ಪಡೆದು, ಪರಿಗಣಿಸಲಾಗುತ್ತದೆ. ಈ ಕ್ರಮವು ಪಠ್ಯಪುಸ್ತಕ ಪರಿಷ್ಕರಣೆ ಅಭ್ಯಾ ಸದಲ್ಲಿ ಕೆಲವು ಜನರ ಪಕ್ಷಪಾತದಿಂದ ಮುಕ್ತವಾಗಿರಲು ಅನುವು ಮಾಡಿಕೊಡುತ್ತದೆ. ಆದರೆ, ಈಗಿನ ಸಂದರ್ಭದಲ್ಲಿ, ಕೇವಲ ಏಳು ಜನರು ಅಧ್ಯಾ ಯಗಳನ್ನು ಸೇರಿಸುವ ಮತ್ತು ಬಿಡುವ ನಿರ್ಧಾ ರಗಳನ್ನು ತೆಗೆದುಕೊಂಡಿರುವುದರಿಂದ, ಪರಿಷ್ಕರಣಾ ಪ್ರಕ್ರಿಯೆಗೆ ಅಂತಹ ಸಮಾಲೋ ಚನಾ ನ್ಯಾಯಸಮ್ಮತತೆಯನ್ನು ನಿರಾಕರಿಸಲಾಗಿದೆ. ಎರಡನೆಯದಾಗಿ, ಸಮಿತಿಯನ್ನು ಸ್ಥಾಪಿಸಿದ ಸಮಯದಲ್ಲಿ, ಶಿಕ್ಷಣ ಸಚಿವರು ಸಮಿತಿಯು ಮೊದಲು ಅಧ್ಯಯನ ಮಾಡಿದ ವರದಿಯನ್ನು ಸಲ್ಲಿಸುವುದು, ಆನಂತರವೇ ಪರಿಷ್ಕರಣೆ ಮಾಡಲಾಗುವುದು ಎಂದು ಘೋಷಿಸಿದ್ದರು. ಆದಾಗ್ಯೂ , ಪರಿಷ್ಕರಣೆಗೆ ಮುಂಚಿತವಾಗಿ ಸಮಿತಿಯು ಸಾರ್ವ ಜನಿಕ ಚರ್ಚೆಗಾಗಿ ವರದಿಯನ್ನು ಸಲ್ಲಿಸಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.

ಎಲ್ಲಾ ಸಮುದಾಯಗಳ ಪ್ರತಿನಿಧಿಯಿಲ್ಲದ ಸಮಿತಿ

ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ರಚನೆಯು ಕರ್ನಾ ಟಕ ಸಮಾಜದ ವಾಸ್ತವತೆಯನ್ನು ಬಿಂಬಿಸುವುದಿಲ್ಲ. ಸಮಿತಿಯ ಬಹುತೇಕ ಸದಸ್ಯರು ಬ್ರಾಹ್ಮಣರು. ಕೈಬಿಡಲಾದ ಅಧ್ಯಾ ಯಗಳು ದಲಿತ ಲೇಖಕರು ಮತ್ತು ಪ್ರಗತಿಪರ ಲೇಖಕರ ಬರಹಗಳನ್ನು ಒಳಗೊಂಡಿದ್ದು, ಸೇರಿಸಲಾದ ಅಧ್ಯಾ ಯಗಳು ಬ್ರಾಹ್ಮಣರ ಬರಹಗಳಾಗಿವೆ. ಸಮಿತಿಯು ಜಾತಿವಾದಿ ಪಕ್ಷಪಾತಕ್ಕೊಳಗಾಗಿ ಅಧ್ಯಾ ಯಗಳ ಆಯ್ಕೆ / ಕೈಬಿಡುವಿಕೆಯಲ್ಲಿ ಪ್ರಬಲ ಧರ್ಮ / ಜಾತಿಯ ಸಿದ್ಧಾಂತವನ್ನು ತಳ್ಳುತ್ತಿಲ್ಲವೆಂದು ತೀರ್ಮಾನಿಸುವುದುಕಷ್ಟ. ವೈವಿಧ್ಯತೆ ಮತ್ತು ಪ್ರಾತಿನಿಧ್ಯದ ಕೊ ರತೆಯು ಸಮಿತಿಯ ವಿಶ್ವಾಸಾರ್ಹ ತೆಯನ್ನು ಹಾನಿ ಮಾಡಿದೆ. ಶತಮಾನಗಳಿಂದ ಸಾಮಾಜಿಕ ಅನ್ಯಾಯವನ್ನು ಅನುಭವಿಸಿದವರ ದೃಷ್ಟಿಕೋನಗಳ ನಿರಾಕರಣೆ ಈ ಅನ್ಯಾಯಗಳನ್ನು ಇನ್ನಷ್ಟು ಬಲಪಡಿಸುತ್ತದೆ.

ಪ್ರತಿಗಾಮಿ

ವಿದ್ಯಾ ರ್ಥಿಯ ಚಿಂತನೆಯನ್ನು ವಿಸ್ತರಿಸಲು, ಇತರರ ಬಗ್ಗೆ ಗೌರವವನ್ನು ಬೆಳೆಸಲು ಮತ್ತು ಸಾಮರಸ್ಯದ ಸಮಾಜವನ್ನು ನಿರ್ಮಿಸಲು ವೈವಿಧ್ಯತೆ ಮತ್ತು ತಮ್ಮದಲ್ಲದೆ, ಇತರ ಸಂಸ್ಕೃತಿಗಳಿಗೆ ಒಡ್ಡಿಕೊಳ್ಳುವುದು ಅತ್ಯಗತ್ಯ. ಪರಿಷ್ಕರಣೆಯು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005 ರ ನಾಮಸೂಚಕ ಪೊಸಿಷನ್ ಪೇರ್ಪ ನಲ್ಲಿರುವ ಶಿಕ್ಷಣದ ಈ ಗುರಿಗಳನ್ನು ಉಲ್ಲಂಸುತ್ತದೆ. ಕೈಬಿಡಲಾದ ಒಂದು ಅಧ್ಯಾಯವು ಜಾತಿ ವ್ಯವಸ್ಥೆಯ ಅನ್ಯಾ ಯಗಳನ್ನು ಚರ್ಚಿಸುತ್ತದೆ. ಮತ್ತೊಂದು ಕೈಬಿಡಲಾದ ಅಧ್ಯಾಯವು ಸಸ್ಯಾ ಹಾರಿ ಮತ್ತು ಮಾಂಸಹಾರಿ ಪಾಕಪದ್ಧತಿಗಳನ್ನು ಚರ್ಚಿಸುತ್ತದೆ. ಕೈಬಿಡಲಾದ ಮೂರನೇ ಅಧ್ಯಾಯವು ರಾಮಾಯಣದ ಬಗ್ಗೆ ವಿಭಿನ್ನ ದೃಷ್ಟಿಕೋ ನವನ್ನು ಒದಗಿಸಿದ ಪ್ರಸಿದ್ಧ ಸಮಾಜ ಸುಧಾರಕ ಪೆರಿಯಾರ್  ಅವರದ್ದಾಗಿದೆ.

ಬರಗೂರು ರಾಮಚಂದ್ರಪ್ಪ ಸಮಿತಿಯನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಿರುವ ದೋ ಷಗಳನ್ನು ತೆಗೆದುಹಾಕಲು ಸ್ಥಾಪಿಸಲಾಗಿತ್ತು. ಉದಾಹರಣೆಗೆ, ವಿಜ್ಞಾನ ಪಠ್ಯಪುಸ್ತಕದಲ್ಲಿ ದ್ರೋಣಾಚಾರ್ಯರು ಇನ್ ವಿಟ್ರಿಯೋ ಫರ್ಟಿಲೈಸೇಶನ್ (ಟೆಸ್ಟ್ ಟ್ಯೂ ಬ್ ಬೇಬಿ)ಮೂಲಕ ಜನಿಸಿದರು ಎಂಬ ಹೇಳಿಕೆ ಇತ್ತು. ಪ್ರಸ್ತುತ ಪರಿಷ್ಕರಣೆ ಸಮಿತಿಯೂ ಸಹ ಇದೇ ರೀತಿ ಹೆಮ್ಮೆಯನ್ನು ಉತ್ತೇಜಿಸಲು ವಿದ್ಯಾ ರ್ಥಿಗಳಿಗೆ ಪ್ರಬಲವಾದ ಹಿಂದೂ ಸಂಸ್ಕೃತಿಯ ಹಿರಿಮೆಯ ಬಗ್ಗೆ ಪ್ರಚಾರವನ್ನು ನೀಡಬೇಕೆಂದು ನಂಬಿದೆ ಎಂದೆನಿಸುತ್ತದೆ. ನಿಜವಾದ ಶಿಕ್ಷಣವು, ವೈವಿಧ್ಯಮಯ ದೃಷ್ಟಿಕೋ ನಗಳನ್ನು ಪ್ರಸ್ತುತಪಡಿಸಿ, ಅವುಗಳ ಬಗ್ಗೆ ಮುಕ್ತ ರೀತಿಯಲ್ಲಿ ಚರ್ಚಿಸಲು ಅವಕಾಶ ನೀಡಿ, ಮಕ್ಕಳಲ್ಲಿ ವಿಮರ್ಶಾ ತ್ಮಕ ಚಿಂತನೆಯನ್ನು ಬೆಳೆಸುವುದರಲ್ಲಿ ಅಡಗಿದೆ. ಏಕಪಕ್ಷೀಯ ಪ್ರಚಾರವು ವಿಷಯಗಳು ನಿರ್ಮಿಸಲು ಬಯಸುವ ವೌಲ್ಯಗಳನ್ನೇ ದುರ್ಬಲಗೊಳಿಸಿ, ಕಲಿಸುವ ಮತ್ತು ಕಲಿಯುವವರ ಗೌರವವನ್ನು ಕಳೆದುಕೊಳ್ಳುತ್ತದೆ.

ರಾಜ್ಯದ ಮಕ್ಕಳಿಗೆ ಹೆಚ್ಚು ವೆಚ್ಚವಾಗುತ್ತದೆ

ಕರ್ನಾ ಟಕದ ಬಹುಪಾಲು ಮಕ್ಕಳು ಸಾಂಕ್ರಾಮಿಕ ಸಮಯದಲ್ಲಿ ರಚನಾತ್ಮಕ ಕಲಿಕೆಯ ಅವಕಾಶ ಮತ್ತು ಪಠ್ಯಪುಸ್ತಕಗಳಿಲ್ಲದೆ ದುರಂತದ ಪರಿಸ್ಥಿತಿಯನ್ನು ಅನುಭವಿಸಿದ್ದಾರೆ. ಅವರಿಗೆ ಪಠ್ಯಪುಸ್ತಕಗಳು ಸೇರಿದಂತೆ ವಿವಿಧ ಕಲಿಕಾ ಸಾಮಗ್ರಿಗಳ ಅಗತ್ಯವಿದೆ, ಇದು ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ, ಸಮಾನತಾಸಿದ್ಧಾಂತ ಮತ್ತು ಭಾರತದ ಸರ್ವ ಸಾಂಸ್ಕೃತಿಕ ಪರಂಪರೆಯ ಆದರ್ಶ ಗಳನ್ನು ಪ್ರತಿಬಿಂಬಿಸಬೇಕು (NCF2005)

ದುರದೃಷ್ಟವಶಾತ್, ಈ ಪರಿಷ್ಕರಣೆಯು ರಾಜ್ಯದ ಮಕ್ಕಳಿಗೆ ಬಹಳ ನಷ್ಟ ಮಾಡಿದೆ - ಈ ಅಭ್ಯಾ ಸದಿಂದಾಗಿ, ಪಠ್ಯಪುಸ್ತಕ ಮುದ್ರಣವು ಕನಿಷ್ಠ 3 ತಿಂಗಳವರೆಗೆ ವಿಳಂಬವಾಗಿದೆ (ಬಹುತೇಕ ಸಂಪೂರ್ಣ ಸೆಮಿರ್ಸ್ಟ). ರಾಜಕಾರಣಿಗಳು ಪಠ್ಯಕ್ರಮದ ಆಟಗಳನ್ನು ಆಡಿದಾಗ, ಬಳಲುವವರು ಮಕ್ಕಳು.

- ರಾಷ್ಟ್ರೀಯ ಶಿಕ್ಷಣ ತುರ್ತು ಸ್ಥಿತಿಯ ಒಕ್ಕೂಟ.

ದೇಶಾದ್ಯಂತ ಇರುವ ವ್ಯಕ್ತಿಗಳು, ಸಂಸ್ಥೆಗಳು ಮತ್ತು ನೆಟ್ವರ್ಕ್ ಗಳು ಶಾಲಾ ಶಿಕ್ಷಣವನ್ನು’ ಪುನರಾರಂಭಿಸಲು ಮತ್ತು ನವೀಕರಿಸಲು’ ಒಟ್ಟಾಗಿರುವ ಗುಂಪು.

info@educationemergency net . | www.educationemergency.net

---------------------------------------------------------------------------------------

ಶಿಕ್ಷಣತಜ್ಞರ ಅಭಿಪ್ರಾಯಗಳು:

‘ಈ ಇಡೀ ಪ್ರಕ್ರಿಯೆಯು ಅಪ್ರಜಾಸತ್ತಾತ್ಮಕ, ಅಪಾರದರ್ಶ ಕವಾಗಿದೆ ಮತ್ತು ಸ್ವಾಭಾವಿಕ ನ್ಯಾಯದ ತತ್ವಗಳನ್ನು ಅನುಸರಿಸುತ್ತಿಲ್ಲ‘

ಡಾ ನಿರಂಜನಾರಾಧ್ಯ, ಅಭಿವೃದ್ಧಿ ಶಿಕ್ಷಣತಜ್ಞ, ಎಸ್ ಡಿಎಂಸಿಗಳ ಮಾರ್ಗ ದರ್ಶಕರು ಮತ್ತು ರಾಜ್ಯ ಅನುದಾನಿತ ಸಾರ್ವಜನಿಕ ಶಿಕ್ಷಣದ ಮೂಲಕ ನೆರೆಹೊರೆಯ ಸಾಮಾನ್ಯ ಶಾಲಾ ವ್ಯವಸ್ಥೆಯ ಮುಖ್ಯ ಸಮರ್ಥಕರು

‘ಸಾಂಕ್ರಾಮಿಕ ರೋ ಗದಿಂದ ಶಿಕ್ಷಣದಲ್ಲಿ ಉಂಟಾದ ಭಾರಿ ಅಡಚಣೆಯ ನಂತರ ಶಿಕ್ಷಕರನ್ನು ಬೆಂಬಲಿಸಲು ರಾಜ್ಯ ಮತ್ತು ನಾಗರಿಕ ಸಮಾಜ ಒಟ್ಟಾಗಿ ಕೆಲಸ ಮಾಡಬೇಕಾದಾಗ, ಕರ್ನಾ ಟಕ ಕಳೆದ ವರ್ಷ ದಿಂದ ಅನಗತ್ಯ ವಿವಾದಗಳಲ್ಲಿ ಸಿಲುಕಿಕೊಂಡಿರುವುದು ದುರದೃಷ್ಟಕರವಾಗಿದೆ‘

- ಪ್ರೊ.ಮೈಥಿಲಿ ರಾಮಚಂದ್, ಕರ್ನಾ ಟಕ ಡಿ.ಇಎಲ್.ಎಡ್ ಪಠ್ಯಕ್ರಮ ಪರಿಷ್ಕರಣೆ ಸಮಿತಿ ಸದಸ್ಯೆ


‘'ಸಾಂವಿಧಾನಿಕ ತತ್ವಗಳಾದ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವಗಳನ್ನು ಬಲಪಡಿಸಲು ಪಠ್ಯ ಪುಸ್ತಕಗಳ ವಿಷಯವನ್ನು ಸುಧಾರಿಸುವ ಬದಲು, ಕರ್ನಾ ಟಕ ಸರ್ಕಾರವು ಅಂತಹ ವೌಲ್ಯಗಳನ್ನು ಪ್ರತಿಪಾದಿಸುವ ಕೆಲವು ಅಧ್ಯಾ ಯಗಳನ್ನು ವಾಸ್ತವವಾಗಿ ತೆಗೆದುಹಾಕಿರುವುದು ಅವಮಾನಕರ ಸಂಗತಿಯಾಗಿದೆ. ಭಾರತದ ಪ್ರಜಾಪ್ರಭುತ್ವಕ್ಕೆ ವಿಶೇಷ ಮತ್ತು ವಿಶಿಷ್ಟವಾದದ್ದು ಎಲ್ಲಾ ಧರ್ಮ ಗಳು, ಭಾಷೆಗಳು, ಪ್ರದೇಶಗಳು, ಸಂಸ್ಕೃತಿಗಳು ಮತ್ತು ಮುಂತಾದವುಗಳಿಗೆ ಇರುವ ಗೌರವ. ಪಠ್ಯ ಪುಸ್ತಕಗಳ ಇಂತಹ ಕುಶಲತೆ ಮೂಲಕ ಸಮಾಜದ ರಚನೆಗೆ ಆಗುವ ಹಾನಿಯು ಅಸಂಗತತೆ, ಅಪನಂಬಿಕೆ ಮತ್ತು ವಿಭಜನೆಯ ಬೀಜಗಳನ್ನು ಬಿತ್ತುತ್ತದೆ. ಇದು ಜಾತ್ಯತೀತ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತದ ಕಲ್ಪನೆಯ ತಿರುಳನ್ನು ಹೊಡೆಯುತ್ತದೆ''

- ಶಾಂತಾ ಸಿನ್ಹಾ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗದ ( NCPCR) ಮಾಜಿ ಅಧ್ಯಕ್ಷೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News