ಶಾಲೆಗೆ ಧ್ವನಿವರ್ಧಕದ ಕೊಡುಗೆ ನೀಡಿದ ನಾಯರ್ಮೂಲೆ ಖಾದರ್, ಇಬ್ರಾಹಿಂ ಹಾಜಿ ಕುಟುಂಬ

Update: 2022-06-03 17:52 GMT

ವಿಟ್ಲ : ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಪಕಳಕುಂಜ ಶ್ರೀ ವೇಣುಗೋಪಾಲ ಹಿರಿಯ ಪ್ರಾಥಮಿಕ ಶಾಲೆಗೆ ಸುಶಿಕ್ಷಿತ ನಾಯರ್ಮೂಲೆ ಕುಟುಂಬವು ಧ್ವನಿವರ್ಧಕವನ್ನು ಕೊಡುಗೆಯಾಗಿ ನೀಡಿದೆ.

ಈ ಶಾಲೆಯಲ್ಲಿ ಕಲಿತ ಹಲವಾರು ಮಂದಿ ವಿಶೇಷ ಸಾಧನೆ ಮಾಡಿದ್ದಾರೆ. ಆ ಪೈಕಿ ಇಲ್ಲಿನ ನಾಯರ್ಮೂಲೆ ಕುಟುಂಬವೂ ಒಂವಾಗಿದೆ. ಈ ಕುಟುಂಬದಲ್ಲಿ ೩೬ ವೈದ್ಯರು, ನ್ಯಾಯಾಧೀಶರು, ವಕೀಲರು, ಶಿಕ್ಷಕರು, ಅಭಿಯಂತರರು ಹೀಗೆ ಸಮಾಜದ ಎಲ್ಲಾ ಸ್ತರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಕುಟುಂಬದ ಸದಸ್ಯರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅದೆಷ್ಟೆತ್ತರಕ್ಕೆ ಬೆಳೆದರೂ ಕೂಡ ತಮ್ಮ ಪ್ರಾಥಮಿಕ ಶಿಕ್ಷಣ ಪಡೆದ ಶಾಲೆ ಯನ್ನು ಮರೆತಿಲ್ಲ ಎಂಬುದಕ್ಕೆ ಆಗಾಗ ಶಾಲೆಗೆ ನೀಡುತ್ತಿರುವ ಕೊಡುಗೆಗಳು ಸಾಕ್ಷಿಯಾಗಿವೆ.

ಇಲ್ಲಿನ ಶಾಲಾ ಮಕ್ಕಳಿಗೆ ರಾಷ್ಟ್ರಗೀತೆ ಹಾಡಲು. ಸಾಂಸ್ಕೃತಿಕ, ಸಾಹಿತ್ಯ ಕಾರ್ಯಕ್ರಮ ನಡೆಸಲು ಉತ್ತಮ ಗುಣ ಮಟ್ಟದ ಧ್ವನಿವರ್ಧಕದ ಕೊರತೆ ಇತ್ತು. ಆ ಬಗ್ಗೆ ಮಾಹಿತಿ ಪಡೆದುಕೊಂಡ ನಾಯರ್ಮೂಲೆ ಕುಟುಂಬವು ಶುಕ್ರವಾರ ಶಾಲೆಯ ಮುಖ್ಯ ಶಿಕ್ಷಕ ಮದನ್ ಮೋಹನ್ ಮಾಸ್ಟರ್‌ರಿಗೆ ಹಸ್ತಾಂತರಿಸಿತು.

ನಾಯರ್ಮೂಲೆ ಕುಟುಂಬದ ಹಿರಿಯರಾದ ಖಾದರ್ ಕುಂಞಿ ಹಾಜಿ ಹಾಗೂ ಇಬ್ರಾಹಿಂ ಹಾಜಿ ನಾಯರ್ಮೂಲೆ ಅವರ ಸಮ್ಮುಖ ಕುಂಞಿಮೋನು, ರಝಾಕ್ ಎನ್, ಇಬ್ರಾಹಿಂ ಕರೀಮ್, ಮುಸ್ತಫ, ನಾಸಿರ್, ಅಶ್ರಫ್, ಫವಾಝ್ ನಾಯರ್ಮೂಲೆ ಮತ್ತಿತರರು ಹಾಜರಿದ್ದರು.

ಇತ್ತೀಚಿಗೆ ಶಾಲಾ ಮಕ್ಕಳ ಕುಡಿಯುವ ನೀರಿಗಾಗಿ ಜಲ ಶುದ್ಧೀಕರಣ ಯಂತ್ರವನ್ನು ನಾಯರ್ಮೂಲೆ ಕುಟುಂಬ ದಾನ ಮಾಡಿತ್ತು. ಅಲ್ಲದೆ ಕುಟುಂಬದ ಹಿರಿಯರಾದ ನಿವೃತ ಜಿಲ್ಲಾ ನ್ಯಾಯಾಧೀಶ, ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಸದಸ್ಯ ನ್ಯಾಯಾಧೀಶರಾಗಿದ್ದ ಮೂಸಾ ಕುಂಞ ನಾಯರ್ಮೂಲೆ ಎಲ್ಲಾ ತರಗತಿ ಕೊಠಡಿಗಳಿಗೆ ಫ್ಯಾನ್‌ಗಳನ್ನು ಕೊಡುಗೆಯಾಗಿನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News