×
Ad

ಬೆಂಗಳೂರು; ಆ್ಯಶಿಶ್ ಆಯಿಲ್ ಮಾರಾಟ ಪ್ರಕರಣ: 10 ವರ್ಷ ಕಠಿಣ ಶಿಕ್ಷೆ ಪ್ರಕಟ

Update: 2022-06-04 20:42 IST

ಬೆಂಗಳೂರು, ಜೂ.4: ಮಾದಕ ವಸ್ತು ಆ್ಯಶಿಶ್ ಆಯಿಲ್ ಮಾರಾಟ ಪ್ರಕರಣ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳಿಗೆ 33ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ ಜಡ್ಜ್(ಎನ್‍ಡಿಪಿಎಸ್) ನ್ಯಾಯಾಲಯವು 10 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. 

ಕೇರಳ ಮೂಲದ ಜಾನ್ಸನ್ ಜೋಸೆಫ್(31) ಮತ್ತು ಬಿಜುಅಬ್ರಾಹಂ(38) ಶಿಕ್ಷೆಗೊಳಗಾಗಿದ್ದು, ಇವರು ನ್ಯಾಯಾಲಯ ವಿಧಿಸಿರುವ ದಂಡ ಭರಿಸಲು ತಪ್ಪಿದಲ್ಲಿ ಪುನಃ 2 ವರ್ಷ ಸಾದಾ ಕಾರಾಗೃಹ ವಾಸ ಶಿಕ್ಷೆಯನ್ನು ವಿಧಿಸಿ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಏನಿದು ಪ್ರಕರಣ?: 2017ನೆ ಸಾಲಿನಲ್ಲಿ ಇಲ್ಲಿನ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಗಿರೀಶ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅಂದಿನ ಮೈಕೋ ಲೇಔಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಯೋಗೇಂದ್ರನಾಥ ಸಮಕ್ಷಮದಲ್ಲಿ ಆರೋಪಿಗಳ ವಶದಲ್ಲಿದ್ದ 6 ಕೆಜಿ 377 ಗ್ರಾಂ ತೂಕದ ಮಾದಕ ವಸ್ತು ಆ್ಯಶಿಶ್ ಆಯಿಲ್‍ಅನ್ನು ವಶಪಡಿಸಿಕೊಳ್ಳಲಾಗಿತ್ತು.

ಆ ನಂತರ, ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಸರಕಾರಿ ಅಭಿಯೋಜಕರಾದ ಬಶೀರ್ ಅಹ್ಮದ್ ಮಕಂದರ್ ಅವರು ಅಭಿಯೋಜನೆ ಪರವಾಗಿ ವಾದ ಮಂಡಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News