ಪಕ್ಕಲಡ್ಕ: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮ
Update: 2022-06-05 15:56 IST
ಪಕ್ಕಲಡ್ಕ: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಜಮಾಅತ್ ಇಸ್ಲಾಮಿ ಹಿಂದ್ ಪಕ್ಕಲಡ್ಕ ವತಿಯಿಂದ ಸಸಿ ನೆಡುವ ಕಾರ್ಯಕ್ರಮವನ್ನು ಪಕ್ಕಲಡ್ಕ ಪರಿಸರದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ. ಸುರೇಶ್ ನೆಗಳಗುಳಿ ಭಾಗವಹಿಸಿ, ಪ್ರತಿಯೊಬ್ಬರೂ ಪರಿಸರದ ಮಹತ್ವ ಅರಿತು ಉತ್ತಮ ಪರಿಸರ ಉಳಿಸಿ ಬೆಳೆಸಲು ಪ್ರಯತ್ನ ಪಡಬೇಕು ಎಂದರು.
ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ ಅಧೀಕ್ಷಕರು ಮಾನಸ ಗಂಗೋತ್ರಿ ಕೊಣಾಜೆ ಹರೀಶ್ ಕುಮಾರ್ ಕುಡ್ತಾಡ್ಕ ಮಾತನಾಡಿ, ಮನಸ್ಸು ಸ್ವಚ್ಛವಾಗಿದ್ದರೆ ಮಾತ್ರ ಪರಿಸರ ಸ್ವಚ್ಛತೆಗೆ ಆದ್ಯತೆ ಕೊಡಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭ ಕಾರ್ಯಕ್ರಮದ ಸಂಚಾಲಕರಾದ ಅಬ್ದುಲ್ ಖಾದರ್ ಪಕ್ಕಲಡ್ಕ ಮತ್ತು ಜಮಾಅತ್ ಇಸ್ಲಾಮಿ ಹಿಂದ್ ಮಹಮ್ಮದ್ ಪರ್ವೇಝ್ ಉಪಸ್ಥಿತರಿದ್ದರು. ಒಟ್ಟು 80 ಕ್ಕಿಂತ ಹೆಚ್ಚು ಸಸಿಯನ್ನು ಈ ಸಂದರ್ಭ ನೆಡಲಾಯಿತು.