ಮಂಜನಾಡಿ ಯುವ ಕಾಂಗ್ರೆಸ್ ವತಿಯಿಂದ ಪರಿಸರ ದಿನಾಚರಣೆ

Update: 2022-06-05 16:19 GMT

ಮಂಜನಾಡಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಂಜನಾಡಿ ಯುವ ಕಾಂಗ್ರೆಸ್ ಘಟಕದ ವತಿಯಿಂದ ಕಲ್ಕಟ್ಟ ಜಂಕ್ಷನ್ ಬಸ್ಸು ನಿಲ್ದಾಣದ ಬಳಿ ಸಾರ್ವಜನಿಕರಿಗೆ ಉಚಿತ ಗಿಡಗಳ ವಿತರಣಾ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಸಕರೂ, ವಿಪಕ್ಷ ಉಪ ನಾಯಕರಾದ ಯು.ಟಿ.ಖಾದರ್ ರವರು ಮಾತನಾಡಿ "ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗ ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಸಾರ್ವಜನಿಕರಿಗೆ ಉಚಿತ ಗಿಡಗಳನ್ನು ನೀಡುವ ಮೂಲಕ ಯುವ ಕಾಂಗ್ರೆಸ್ ಒಂದು ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಗಿಡಗಳನ್ನು ಮನೆಯವರ ಮತ್ತು ಮಕ್ಕಳ ಜೊತೆಗೂಡಿ ನೆಡುವ ಮುಖಾಂತರ ಅವರಲ್ಲಿಯೂ ಪರಿಸರದ ಬಗ್ಗೆ ಕಾಳಜಿ ಬೆಳೆಸಬೇಕು" ಎಂದರು.

ನಂತರ ಹಿರಿಯ ನಾಗರಿಕರಾದ ಭುಜಂಗ ಸಪಾಲ್ಯ, ಲಿಂಗಪ್ಪ, ಮೌರಿಸ್ ಮೊಂತೆರೋ, ಫಕೀರ್ ಸಾಹಿಬ್ ರಿಗೆ  ಗಿಡಗಳನ್ನು ವಿತರಿಸುವ ಮೂಲಕ ಅಧಿಕೃತ ಚಾಲನೆ ನೀಡಿದರು. 

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ರವರು ಅಧ್ಯಕ್ಷೀಯ ನುಡಿಗಳನ್ನಾಡಿದರು, ಯುವ ಕಾಂಗ್ರೆಸ್ ಅಧ್ಯಕ್ಷ ಅಶೀರುದ್ದೀನ್ ಸಾರ್ತಬೈಲ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎನ್ ಎಸ್ ಕರೀಂ ಅತಿಥಿಗಳನ್ನು ಸ್ವಾಗತಿಸಿದರು. ಮಹಿಳಾ ಕಾಂಗ್ರೆಸ್ ನಾಯಕಿ ಮಮತಾ ಗಟ್ಟಿ, ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯ ಅಬ್ದುಲ್ ಖಾದರ್ ಪೊಡಿ, ಕಾಂಗ್ರೆಸ್ ಗ್ರಾಮ ಘಟಕದ ಅಧ್ಯಕ್ಷ ಹಮೀದ್ ಮದ್ಪಾಡಿ,  ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ನಾಸಿರ್ ಸಾಮಣಿಗೆ, ಕಾರ್ಯದರ್ಶಿ ಮೋನು ಕಲ್ಕಟ್ಟ, ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್ ಕಾರ್ಯದರ್ಶಿ ತಂಝೀಲ್ ಮಹಿಳಾ ಘಟಕದ ಅಧ್ಯಕ್ಷೆ ನೆಲ್ಲಿ ಫರ್ನಾಂಡಿಸ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಸ್ಮಾಯಿಲ್ ಸಾಯಿಬಾಕ, ಯುವ ಪ್ರಧಾನ ಕಾರ್ಯದರ್ಶಿ ಅಶ್ರಫ್ ಸಫಾ, ಸಫ್ವಾನ್ ಮಂಗಳ ನಗರ, ಮುಝಮ್ಮಿಲ್ ಕಲ್ಕಟ್ಟ, ಪಿಲಿಪ್ ಡಿಸೋಜ ಹಾಗೂ, ಬಾವು ಮಂಗಳಾಂತಿ, ಬಶೀರ್ ಮಂಜನಾಡಿ, ಅಬ್ಬಾಸ್ ನಾಟೆಕಲ್, ಮಹಮ್ಮದ್ ಅಸೈ ಇಬ್ರಾಹಿಂ ಕಂಡಿಕ, ಅಸೀರ್, ಇಸ್ಮಾಯಿಲ್ ದೊಡ್ಡಮನೆ, ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News