ಸಿಧು ಮೂಸೆ ವಾಲಾರೊಂದಿಗೆ ವ್ಯಕ್ತಿಯ ಸೆಲ್ಫಿ: ಪೊಲೀಸರಿಂದ ತನಿಖೆ

Update: 2022-06-06 18:04 GMT

ಹೊಸದಿಲ್ಲಿ, ಜೂ. 6: ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರು ಹತ್ಯೆಯಾದ ದಿನದಂದು ಅವರೊಂದಿಗೆ ವ್ಯಕ್ತಿಯೋರ್ವ ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯವಿರುವ ಸಿಸಿಟಿವಿ ವೀಡಿಯೊ ದೊರಕಿದೆ.

ಈ ವ್ಯಕ್ತಿ ಸೆಲ್ಫಿ ತೆಗೆದುಕೊಂಡ ಬಳಿಕ ಪಂಜಾಬ್ನ ಮಾನಸ ನಗರದಲ್ಲಿ ಹೊಂಚು ದಾಳಿ ನಡೆಸಲು ಸಿದ್ಧರಾಗಿರುವಂತೆ ಶೂಟರ್ಗಳಿಗೆ ಕರೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಪ್ಪು ಎಸ್ಯುವಿ ಮುಂದೆ ವ್ಯಕ್ತಿಗಳ ಗುಂಪು ನಿಂತುಕೊಂಡಿರುವುದು ಕೂಡ ವೀಡಿಯೊ ದೃಶ್ಯಾವಳಿಯಲ್ಲಿ ಕಂಡು ಬಂದಿದೆ.

ಅಸ್ಪಷ್ಟವಾಗಿರುವ ದೃಶ್ಯಾವಳಿಯಲ್ಲಿ ವ್ಯಕ್ತಿಗಳ ಮುಖ ಸರಿಯಾಗಿ ಕಾಣುತ್ತಿಲ್ಲ. ವೀಡಿಯೊ ದೃಶ್ಯಾವಳಿಯಲ್ಲಿರುವ ಇಬ್ಬರು ವ್ಯಕ್ತಿಗಳು ಶಂಕಿತರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದಲ್ಲಿ ಪಂಜಾಬ್ ಪೊಲೀಸರು 8 ಮಂದಿ ಶೂಟರ್ಗಳನ್ನು ಗುರುತಿಸಿದ್ದಾರೆ. ಈ ಶೂಟರ್ಗಳು ಪಂಜಾಬ್, ಹರ್ಯಾಣ, ರಾಜಸ್ಥಾನ ಹಾಗೂ ಮಹಾರಾಷ್ಟ್ರಕ್ಕೆ ಸೇರಿದವರು. ಈ ಹಿನ್ನೆಲೆಯಲ್ಲಿ ಪೊಲೀಸರ ತಂಡ ಈ ಎಲ್ಲಾ ಮೂರು ರಾಜ್ಯಗಳಲ್ಲಿ ದಾಳಿ ನಡೆಸುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News