ಪರಿಷ್ಕೃತ ಪಠ್ಯಪುಸ್ತಕ ಶೀಘ್ರದಲ್ಲೇ ಸಾರ್ವಜನಿಕರ ಮುಂದಿಡುತ್ತೇವೆ: ಸಚಿವ ಬಿ.ಸಿ. ನಾಗೇಶ್

Update: 2022-06-07 08:16 GMT

ಬೆಂಗಳೂರು: ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯಲ್ಲಿ ನಡೆದ ಪಠ್ಯಪರಿಷ್ಕರಣೆ ವಿವಾದವು ರಾಜ್ಯದಲ್ಲಿ ಭುಗಿಲೆದ್ದಿದ್ದು, ಈ ಕುರಿತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ಬಳಿಕ ಸುದ್ದಿಗಾರರೊಂದುಗೆ ಮಾತನಾಡಿದ ಅವರು, ಪಠ್ಯಪರಿಷ್ಕರಣೆ ವಿಚಾರದಲ್ಲಿ  ಸಾರ್ವಜನಿಕರಲ್ಲಿ ಭಿನ್ನಾಭಿಪ್ರಾಯ ಗೊಂದಲ ಇರುವುದರಿಂದ ನಾವೇನು ಸೇರಿಸಿದ್ದೇವೆ, ವಾವೇನು ತೆಗೆದಿದ್ದೇವೆ ಎಂಬುದನ್ನು ಸಾರ್ವಜನಿಕರ ಅವಗಾಹಣೆಗೆ ಹಾಕಿ ಎಲ್ಲರ ಅಭಿಪ್ರಾಯ ಪಡೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. 

ಯಾವುದೇ ಲೋಪದೋಷವಿದ್ದರೆ ಶಿಕ್ಷಣ ಇಲಾಖೆ ತಜ್ಞರ ಜೊತೆ ಮಾತನಾಡಿ ಸರಿಪಡಿಸುತ್ತೇವೆ. ಅಂಬೇಡ್ಕರ್, ಬಸವಣ್ಣ ಕುರಿತು ಯಾವ ಸಾಲು ಪುಸ್ತಕದಲ್ಲಿ ಯಾವುದು ಬಿಟ್ಟು ಹೋಗಿದೆ ಅದನ್ನು ಸೇರಿಸುತ್ತೇವೆ ಅಂತನೂ ಸಿಎಂ ಹೇಳಿದ್ದಾರೆ. ಇದಾಗಿಯೂ ರಾಜಕೀಯವಾಗಿ ಮಾತನಾಡುತ್ತಿರುವುದು ಸರಿಯಲ್ಲ. 

ಒಂದು ವಾರದಲ್ಲಿ ಪಠ್ಯವನ್ನು ಪಬ್ಲಿಕ್ ಡೊಮೈನ್‌ನಲ್ಲಿ ಇಡ್ತೀವಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಪ್ರಭುಗಳು ಅವರು ಏನು ಹೆಳುತ್ತಾರೋ ಆ ಅಭಿಪ್ರಾಯಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News