ನಗರದಲ್ಲಿ 2 ಲಕ್ಷಕ್ಕೂ ಅಧಿಕ ಅಕ್ರಮ ಕಟ್ಟಡಗಳು ಪತ್ತೆ: ಬಿಬಿಎಂಪಿ ಮಾಹಿತಿ
ಬೆಂಗಳೂರು, ಜೂ.7: ಹೈಕೋರ್ಟ್ ನಿರ್ದೇಶನದಂತೆ ಕ್ರಮ ತೆಗೆದುಕೊಂಡ ಬಳಿಕ ನಗರದಲ್ಲಿ 2 ಲಕ್ಷಕ್ಕೂ ಅಧಿಕ ಅಕ್ರಮ ಕಟ್ಟಡಗಳನ್ನು ಬಿಬಿಎಂಪಿ ಪಟ್ಟಿ ಮಾಡಿದೆ.
ಈ ಕುರಿತು ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ಮಾತನಾಡಿ, 2016 ಜ.1 ರಿಂದ ನಗರದಲ್ಲಿರುವ ಅನಧಿಕೃತ ಕಟ್ಟಡಗಳನ್ನು, ಅನುಮೋದನೆ ಪಡೆದು ಯೋಜನೆಯನ್ನು ಉಲ್ಲಂಘಿಸಿದ ಕಟ್ಟಡಗಳು ಎಂದೂ, ಯೋಜನೆ ಇಲ್ಲದೆ ಕಟ್ಟಿದ ಕಟ್ಟಡಗಳೆಂದು 2 ವಿಧದಲ್ಲಿ ವಿಂಗಡಿಸಲಾಗಿದೆ. ನಗರದಲ್ಲಿ ಒಟ್ಟು ಅನಧಿಕೃತ ಕಟ್ಟಡಗಳ ಪೈಕಿ 36,759 ಅನುಮೋದನೆ ಪಡೆದು ಯೋಜನೆಯನ್ನು ಉಲ್ಲಂಘಿಸಿದ ಕಟ್ಟಡಗಳಾಗಿವೆ. ಅವುಗಳಲ್ಲಿ 16,086 ಕಟ್ಟಡಗಳನ್ನು ಸರ್ವೇ ಮಾಡಲಾಗಿದೆ. ಯೋಜನೆ ಇಲ್ಲದೆ ಕಟ್ಟಿದ ಕಟ್ಟಡಗಳು 1,81,236 ಇದ್ದು, ಕೆಲವೊಂದನ್ನು ಬಿ ಖಾತಾ ಜಮೀನಿನಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬಿ ಖಾತೆಗೆ ಸಂಬಂಧಿಸಿದಂತೆ ಸುಪ್ರೀಂನಲ್ಲಿ ಕೇಸ್ ದಾಖಲಾಗಿದೆ. ಹಾಗಾಗಿ ಅನಧಿಕೃತ ಕಟ್ಟಡಗಳ ಬಗ್ಗೆ ಉನ್ನತ ಮಟ್ಟದ ಚರ್ಚೆಗಳು ನಡೆಯಬೇಕಾಗಿರುತ್ತದೆ ಎಂದು ಮಾಹಿತಿ ನೀಡಿದರು.
ನಗರದಲ್ಲಿ ಒಟ್ಟು 9 ಸಾವಿರ ರಸ್ತೆಗುಂಡಿಗಳನ್ನು ಮುಚ್ಚಲಾಗಿದೆ. ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್‍ನಲ್ಲಿ ಪುನಃ ಹೊಸ ರಸ್ತೆಗುಂಡಿಗಳು ಸೇರ್ಪಡೆಯಾಗುತ್ತಿದ್ದು, 11,042 ಗುಂಡಿಗಳು ದಾಖಲಾಗಿವೆ. ಅವುಗಳನ್ನು ಹಂತಹಂತವಾಗಿ ಮುಚ್ಚಿ, ಹೈಕೋರ್ಟ್‍ಗೆ ವರದಿಯನ್ನು ನೀಡಲಾಗುತ್ತಿದೆ.
-ರವೀಂದ್ರ, ಬಿಬಿಎಂಪಿ ವಿಶೇಷ ಆಯುಕ್ತ