×
Ad

ಫಿಝಾ ನೆಕ್ಸಸ್ ಮಾಲ್‌ನಲ್ಲಿ ಎಎನ್‌ಡಿ ಆ್ಯಂಡ್ ಗ್ಲೋಬಲ್‌ ದೇಸಿ ಮಳಿಗೆ ಉದ್ಘಾಟನೆ

Update: 2022-06-09 17:06 IST

ಮಂಗಳೂರು: ದೇಶದ ಪ್ರಮುಖ ಫ್ಯಾಶನ್ ಸಂಸ್ಥೆ ಎಎನ್‌ಡಿ ಆ್ಯಂಡ್ ಗ್ಲೋಬಲ್‌ ದೇಸಿ ಮಳಿಗೆ ತನ್ನ ಮಲ್ಟಿ ಬ್ರಾಂಡ್‌ಗಳ ಮಳಿಗೆಯನ್ನು ನಗರದ ಫಿಝಾ ನೆಕ್ಸಸ್ ಮಾಲ್ (ಹಳೆ ಫೋರಂ ಫಿಝಾ ಮಾಲ್)ನಲ್ಲಿ ತೆರೆದಿದ್ದು, ಇಂದು ಮಳಿಗೆ ಉದ್ಘಾಟನೆಗೊಂಡಿತು.

ಹೌಸ್ ಆಫ್ ಅನಿತಾ ಡೊಂಗ್ರೆ ಸಂಸ್ಥೆಯ ಎಂಡಿ ಮತ್ತು ಸಿಇಒ ಕವೀಂದ್ರ ಮಿಶ್ರಾ ಮಳಿಗೆಯನ್ನು ಉದ್ಘಾಟಿಸಿದರು.

ವಿಜಯ ಗ್ರೂಪ್ ಆಫ್ ಹಾಸ್ಪಿಟಲ್‌ಗಳ ಆಡಳಿತ ನಿರ್ದೇಶಕರಾದ ಡಾ. ಪ್ರಿಯಾ ಬಳ್ಳಾಲ್, ನೆಕ್ಸಸ್ ಮಾಲ್‌ನ ಪ್ರಮುಖರಾದ ಅರವಿಂದ್ ಶ್ರೀವಾಸ್ತವ, ಸಾಮಾಜಿಕ ಜಾಲತಾಣದ ಲಿಂಡಾ ಫೆರ್ನಾಂಡಿಸ್, ಅಲಿಶಾ ರೇಗೋ, ಶಹದಾ ರಹಿಮಾನ್ ಈ ಸಂದರ್ಭ ಉಪಸ್ಥಿತರಿದ್ದರು.

ನೆಕ್ಸಸ್ ಮಾಲ್‌ನ ಮಹಡಿಯಲ್ಲಿ 2000 ಚದರ ಅಡಿ ವಿಸ್ತೀರ್ಣದ ಮಳಿಗೆಯಲ್ಲಿ ಆರಂಭಗೊಂಡಿರುವ ಈ ಮಳಿಗೆಯು ಪ್ರತಿ ಮಹಿಳೆ ಮತ್ತು ಯುವತಿಯರ ಫ್ಯಾಶನ್‌ಗಾಗಿನ ಒಂದು ಪ್ರಮುಖ ತಾಣವಾಗಿದೆ. ಮಳಿಗೆಯ ಹೆಸರೇ ಸೂಚಿಸುವಂತೆ ಇದು ಪಾಶ್ಚಾತ್ಯ ಮತ್ತು ದೇಸೀಯ ಶೈಲಿಯ ಫ್ಯಾಶನ್‌ಗಳನ್ನು ಒಳಗೊಂಡ ಎಎನ್‌ಡಿ ಆ್ಯಂಡ್ ಎಎನ್‌ಡಿ ಗರ್ಲ್ ಹಾಗೂ ಸಾಂಪ್ರದಾಯಿಕ ಉಡುಪುಗಳಿಗೆ ಹೆಸರುವಾಸಿಯಾದ ಗ್ಲೋಬಲ್ ದೇಸಿ ಮತ್ತು ಗ್ಲೋಬಲ್  ಗರ್ಲ್ ಬ್ರಾಂಡ್‌ಗಳ ಉಡುಪುಗಳನ್ನು ಹೊಂದಿದೆ.

ಬಜೆಟ್ ಸ್ನೇಹಿ ದರದೊಂದಿಗೆ ಪಾಶ್ಚ್ಯಾತ್ಯ ಹಾಗೂ ಸಾಂಪ್ರದಾಯಿಕ ಉಡುಪುಗಳನ್ನು ಬಯಸುವ ಯುವತಿಯರಿಗೆ ಈ ಮಳಿಗೆ ಅತ್ಯುತ್ತಮ ಆಯ್ಕೆಯಾಗಿದೆ. ತನ್ನದೇ ಆದ ವೈಶಿಷ್ಟ್ಯಗಳೊಂದಿಗೆ ಕೂಡಿದ ಬ್ರಾಂಡ್‌ಗಳು ಪ್ರತಿ ಗ್ರಾಹಕರ ಫ್ಯಾಶನ್ ಬೇಡಿಕೆಗಳನ್ನು ಪೂರೈಸಲಿದೆ. ಮಾತ್ರಲ್ಲದೆ, ಮಂಗಳೂರು ನಗರದ ವಿವಿಧ ಕಡೆಗಳಲ್ಲಿ ಇತರ ಹಲವಾರು ಉಡುಪುಗಳ ಮಾರಾಟ ಮಳಿಗೆಗಳನ್ನು ಹೊಂದಿರುವ ಶಾಪಿನ್ ಗ್ರೂಪ್‌ನ ಪಾಲುದಾರಿಕೆ ಯೊಂದಿಗೆ ಈ ಮಳಿಗೆ ಆರಂಭಗೊಂಡಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News