ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಆರೋಪ: ನಟಿ ರಮ್ಯಾ ದೂರು

Update: 2022-06-09 11:51 GMT

ಬೆಂಗಳೂರು, ಜೂನ್ 09: ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ನಿಂದಿಸಿದ್ದಾನೆಂದು ಆರೋಪಿಸಿ ಮಾಜಿ ಸಂಸದೆ,  ನಟಿ ರಮ್ಯಾ ನಗರದ ಹಲಸೂರು ಗೇಟ್ ಠಾಣೆ ಬಳಿ ಇರುವ ಕೇಂದ್ರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ರಮ್ಯಾ ವಿರುದ್ಧ  ನಿಂದನಾತ್ಮಕವಾಗಿ ವ್ಯಕ್ತಿಯೊಬ್ಬ ಪೋಸ್ಟ್ ಹಾಕಿದ್ದ ಎಂದು ಆರೋಪಿಸಲಾಗಿದೆ.

ಈ ಸಂಬಂಧ  ವ್ಯಕ್ತಿಯ ನಿಂದನಾತ್ಮಕ ಪೋಸ್ಟ್ ಅನ್ನು  ಸ್ಕ್ರೀನ್ ಶಾಟ್ ತೆಗೆದುಕೊಂಡು ಬಂದಿರುವ ರಮ್ಯಾ ಕೇಂದ್ರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News