ಜೂ.13ರಿಂದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕೃಷಿ ಅಭಿಯಾನ
ಮಂಗಳೂರು : ದ.ಕ.ಜಿಪಂ ಹಾಗೂ ಮಂಗಳೂರು ತಾಲೂಕು ಕೃಷಿ ಇಲಾಖೆಯಿಂದ ೨೦೨೨-೨೩ನೇ ಸಾಲಿಗೆ ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ, ಅರಣ್ಯ, ರೇಷ್ಮೆ ಇಲಾಖೆಗಳ ಸಮನ್ವಯದೊಂದಿಗೆ ಜೂ.೧೩ರಿಂದ ೨೯ರವರೆಗೆ ಕೃಷಿ ಅಭಿಯಾನ ಕಾರ್ಯಕ್ರಮ ನಡೆಯಲಿದೆ.
ಸಂಬಂಧಿಸಿದ ಇಲಾಖೆಗಳಲ್ಲಿ ಅನುಷ್ಠಾನಗೊಳ್ಳುವ ಕಾರ್ಯಕ್ರಮಗಳ ಹಾಗೂ ರೈತರಿಗೆ ದೊರೆಯುವ ಸೌಲಭ್ಯ ಗಳ ಕುರಿತು ಮಾಹಿತಿ ರಥ ಸಿದ್ದಪಡಿಸಿಕೊಂಡು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಹೋಬಳಿಯ ಪ್ರತಿ ಗ್ರಾಪಂಗಳಿಗೆ ಭೇಟಿ ನೀಡಿ ಆಯಾ ವ್ಯಾಪ್ತಿಯ ಕೃಷಿಕರಿಗೆ, ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರಿಗೆ ಮಾಹಿತಿ ನೀಡಲಾಗುವುದು.
ಮೂಡುಬಿದಿರೆ ಹೋಬಳಿಯ ಗ್ರಾಪಂಗಳಲ್ಲಿ ಜೂ.೧೩ರ ಪೂ.೧೧:೩೦ರಿಂದ ಮಧ್ಯಾಹ್ನ ೧೨ರವರೆಗೆ ಪುತ್ತಿಗೆ, ಮಧ್ಯಾಹ್ನ ೨ರಿಂದ ೩ರವರೆಗೆ ಕಡಂದಲೆ, ಅಪರಾಹ್ನ ೩ರಿಂದ ೪ರವರೆಗೆ ಕಲ್ಲಮುಂಡ್ಕೂರು, ಸಂಜೆ ೪ರಿಂದ ೫:೩೦ರವರೆಗೆ ತೆಂಕ ಮಿಜಾರು ಮತ್ತು ಜೂ.೧೪ರಂದು ಬೆಳಗ್ಗೆ ೧೦ರಿಂದ ೧೧ರವರೆಗೆ ಹೊಸಬೆಟ್ಟು, ೧೧:೩೦ರಿಂದ ೧೨:೩೦ರವರೆಗೆ ಇರುವೈಲು, ಮಧ್ಯಾಹ್ನ ೨ರಿಂದ ೩ರವರೆಗೆ ಶಿರ್ತಾಡಿ, ೩:೩೦ರಿಂದ ೫:೩೦ರವರೆಗೆ ವಾಲ್ಟಾಡಿ ಹಾಗೂ ಜೂ.೧೫ರಂದು ಬೆಳಗ್ಗೆ ೧೦:೩೦ರಿಂದ ೧೧:೩೦ರವರೆಗೆ ನೆಲ್ಲಿಕಾರು, ೧೨ರಿಂದ ೧ರವರೆಗೆ ಧರೆಗುಡ್ಡೆ, ೨ರಿಂದ ೩ರವರೆಗೆ ಬೆಳುವಾಯಿ ಹಾಗೂ ೩ರಿಂದ ೫ರವರೆಗೆ ಪಡುಮಾರ್ನಡುನಲ್ಲಿ ಅಭಿಯಾನ ನಡೆಯಲಿದೆ.
ಗುರುಪುರ ಹೋಬಳಿಯ ಗ್ರಾಪಂಗಳಲ್ಲಿ ಜೂ.೧೬ರ ಬೆಳಗ್ಗೆ ೧೦:೩೦ರಿಂದ ೧೧:೩೦ರವರೆಗೆ ಬಡಗ ಎಡಪದವು, ಮಧ್ಯಾಹ್ನ ೧೨ರಿಂದ ೧ರವರೆಗೆ ತೆಂಕ ಎಡಪದವು, ೨ರಿಂದ ೩ರವರೆಗೆ ಮುಚ್ಚೂರು, ಅಪರಾಹ್ನ ೩:೩೦ರಿಂದ ೪:೩೦ರವರೆಗೆ ಕುಪ್ಪೆಪದವು, ಸಂಜೆ ೫ರಿಂದ ೫:೩೦ರವರೆಗೆ ಮುತ್ತೂರು ಮತ್ತು ಜೂ.೧೭ರ ಬೆಳಗ್ಗೆ ೧೦ರಿಂದ ೧೧ರವರೆಗೆ ಗಂಜೀಮಠ, ೧೨ರಿಂದ ೧ರವರೆಗೆ ಪಡುಪೆರಾರ್, ಮಧ್ಯಾಹ್ನ ೨ರಿಂದ ೩ರವರೆಗೆ ಕಂದಾವರ, ಸಂಜೆ ೪ರಿಂದ ೫ರವರೆಗೆ ಗುರುಪುರ ಹಾಗೂ ಜೂ.೧೮ರ ಬೆಳಗ್ಗೆ ೧೦ರಿಂದ ೧೧ರವರೆಗೆ ಉಳಾಯಿಬೆಟ್ಟು, ೧೨ರಿಂದ ೧ರವರೆಗೆ ಮಲ್ಲೂರು, ಮಧ್ಯಾಹ್ನ ೨ರಿಂದ ೩ರವರೆಗೆ ನೀರುಮಾರ್ಗ, ಸಂಜೆ ೪ರಿಂದ ೫:೩೦ರವರೆಗೆ ಆಡ್ಯಾರುನಲ್ಲಿ ನಡೆಯಲಿದೆ.
ಸುರತ್ಕಲ್ ಹೋಬಳಿಯ ಗ್ರಾಪಂಗಳಲ್ಲಿ ಜೂ.೨೦ರ ಪೂ.೧೧:೩೦ರಿಂದ ೧೨:೩೦ರವರೆಗೆ ಚೇಳ್ಯಾರು, ಮಧ್ಯಾಹ್ನ ೧೨:೩೦ರಿಂದ ೧:೩೦ರವರೆಗೆ ಸೂರಿಂಜೆ, ೨:೩೦ರಿಂದ ೩:೩೦ರವರೆಗೆ ಎಕ್ಕಾರು, ಸಂಜೆ ೪:೩೦ರಿಂದ ೫:೩೦ರವರೆಗೆ ಪೆರ್ಮುದೆ ಮತ್ತು ಜೂ.೨೧ರ ಬೆಳಗ್ಗೆ ೧೦ರಿಂದ ೧೧ರವರೆಗೆ ಬಾಳ, ಪೂ.೧೧:೩೦ರಿಂದ ೧೨:೩೦ರವರೆಗೆ ಜೋಕಟ್ಟೆ, ಮಧ್ಯಾಹ್ನ ೩:೩೦ರಿಂದ ೪:೩೦ರವರೆಗೆ ಮೂಡುಶೆಡ್ಡೆಯಲ್ಲಿ ನಡೆಯಲಿದೆ.
ಮುಲ್ಕಿ ಹೋಬಳಿಯ ಗ್ರಾಪಂಗಳಲ್ಲಿ ಜೂ.೨೨ರ ಬೆಳಗ್ಗೆ ೧೦:೩೦ರಿಂದ ೧೧:೩೦ರವರೆಗೆ ಅತಿಕಾರಿಬೆಟ್ಟು, ೧೨ರಿಂದ ೧ರವರೆಗೆ ಕಿಲ್ಪಾಡಿ, ಮಧ್ಯಾಹ್ನ ೨:೩೦ರಿಂದ ೩:೩೦ರವರೆಗೆ ಕೆಮ್ರಾಲ್ ಹಾಗೂ ಜೂ.೨೩ರ ಪೂ.೧೧ರಿಂದ ೧೨:೩೦ರವರೆಗೆ ಹಳೆಯಂಗಡಿ, ಮಧ್ಯಾಹ್ನ ೨ರಿಂದ ೩:೩೦ರವರೆಗೆ ಪಡುಪಣಂಬೂರು ಮತ್ತು ಜೂ.೨೪ರ ಬೆಳಗ್ಗೆ ೧೦:೩೦ರಿಂದ ೧೨ರವರೆಗೆ ಐಕಳ, ಮಧ್ಯಾಹ್ನ ೨:೩೦ರಿಂದ ೩:೩೦ರವರೆಗೆ ಬಳ್ಕುಂಜೆಯಲ್ಲಿ ನಡೆಯಲಿದೆ.
ಮಂಗಳೂರು-ಬಿ ಹೋಬಳಿಯ ಗ್ರಾಪಂಗಳಲ್ಲಿ ಜೂ.೨೭ರ ಬೆಳಗ್ಗೆ ೧೦:೩೦ರಿಂದ ೧೧:೩೦ರವರೆಗೆ ಮುನ್ನೂರು, ೧೧:೩೦ರಿಂದ ೧೨:೩೦ರವರೆಗೆ ಅಂಬ್ಲಮೊಗರು, ಮಧ್ಯಾಹ್ನ ೧ರಿಂದ ೨ರವರೆಗೆ ಹರೇಕಳ, ೩ರಿಂದ ೪ರವರೆಗೆ ಪಾವೂರು ಹಾಗೂ ಜೂ.೨೮ರಂದು ಬೆಳಗ್ಗೆ ೧೦:೩೦ರಿಂದ ೧೧:೩೦ರವರೆಗೆ ಬೋಳಿಯಾರು, ಮಧ್ಯಾಹ್ನ ೧೨:೩೦ರಿಂದ ೧:೩೦ರವರೆಗೆ ಕೊಣಾಜೆ, ಅಪರಾಹ್ನ ೩ರಿಂದ ೪ರವರೆಗೆ ಬೆಳ್ಮ ಮತ್ತು ಜೂ.೨೯ರ ಬೆಳಗ್ಗೆ ೧೦:೩೦ರಿಂದ ೧೧:೩೦ರವರೆಗೆ ಮಂಜನಾಡಿ, ಮಧ್ಯಾಹ್ನ ೧೨ರಿಂದ ೧ರವರೆಗೆ ಕಿನ್ಯಾ, ಅಪರಾಹ್ನ ೩ರಿಂದ ೪ರವರೆಗೆ ತಲಪಾಡಿಯಲ್ಲಿ ಅಭಿಯಾನ ನಡೆಯಲಿದೆ ಎಂದು ಮಂಗಳೂರು ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.