×
Ad

ಸರಣಿ ಅಪಘಾತ: ಇಬ್ಬರಿಗೆ ಗಾಯ

Update: 2022-06-09 20:54 IST

ಪುತ್ತೂರು: ಕಾರು, ಎರಡು ಅಟೋ ರಿಕ್ಷಾ ಮತ್ತು ಬೈಕೊಂದರ ನಡುವೆ ಸರಣಿ ಅಪಘಾತ ನಡೆದು ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ಸಂಜೆ ಮಾಣಿ ಮೈಸೂರು ರಾಜ್ಯ ರಸ್ತೆಯಲ್ಲಿನ ಪುತ್ತೂರು ನಗರದ ಹೊರ ವಲಯದ ಮುಕ್ರಂಪಾಡಿ ಎಂಬಲ್ಲಿ ನಡೆದಿದೆ. 

ಮುಂಡೂರು ಕಡೆಯಿಂದ ಬರುತ್ತಿದ್ದ ಕಾರು ಮುಕ್ರಂಪಾಡಿ ಮುಖ್ಯರಸ್ತೆಗೆ ಸಂಪರ್ಕಿಸುವ ಸಂದರ್ಭದಲ್ಲಿ ಅಪಘಾತ ತಪ್ಪಿಸಲು ಪುತ್ತೂರಿನಿಂದ ಸಂಪ್ಯ ಕಡೆಗೆ ತೆರಳುತ್ತಿದ್ದ ಅಟೋ ರಿಕ್ಷಾವೊಂದರ ಚಾಲಕ  ತಕ್ಷಣ ಬ್ರೇಕ್ ತನ್ನ ಅಟೋವನ್ನು ನಿಲ್ಲಿಸಿದ್ದ ಇದೇ ಸಂದರ್ಭದಲ್ಲಿ ಹಿಂಬಾಗದಿಂದ ಬರುತ್ತಿದ್ದ ಅಟೋರಿಕ್ಷಾ ನಿಲ್ಲಿಸಿದ್ದ ರಿಕ್ಷಾಕ್ಕೆ ಡಿಕ್ಕಿಯಾಗಿತ್ತು. ಇದರಿಂದಾಗಿ ಅಟೋ ರಸ್ತೆಯ ಮದ್ಯಭಾಗಕ್ಕೆ ವಾಲಿದ್ದರಿಂದ ವಿರುದ್ದ ದಿಕ್ಕಿನಿಂದ ಬರುತ್ತಿದ್ದ ಬೈಕ್ ಅಟೋ ರಿಕ್ಷಾಕ್ಕೆ ಡಿಕ್ಕಿಯಾಗಿ ಉರುಳಿ ಬಿದ್ದಿತ್ತು. ಬೈಕ್‍ನಲ್ಲಿದ್ದ ಇಬ್ಬರು ಸವಾರರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News