×
Ad

ಪ್ರಚೋದನಕಾರಿ ಭಾಷಣ: ಮುತಾಲಿಕ್ ಸೇರಿ ನಾಲ್ವರಿಗೆ ಕೋರ್ಟ್‍ನಿಂದ ಸಮನ್ಸ್ ಜಾರಿ

Update: 2022-06-09 21:30 IST

ಬೆಂಗಳೂರು, ಜೂ.9: ಯಾದಗಿರಿಯ ವಿರಾಟ್ ಹಿಂದೂ ಸಮಾವೇಶದಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಬಿಜೆಪಿ ಶಾಸಕ ರಾಜಾಸಿಂಗ್ ಠಾಕೂರ್, ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸೇರಿ ನಾಲ್ವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಿದೆ. 

2017ರ ಡಿ.12ರಂದು ಯಾದಗಿರಿಯ ವನಕೇರಿ ಲೇಔಟ್‍ನಲ್ಲಿ ನಡೆದಿದ್ದ ಹಿಂದೂ ಸಮಾವೇಶದಲ್ಲಿ ಪಾಲ್ಗೊಂಡಿದ್ದ ರಾಜಾಸಿಂಗ್ ಅವರಿಗೆ ಖಡ್ಗ ನೀಡಿ ಸತ್ಕರಿಸಲಾಗಿತ್ತು. ನಂತರದ ದಿನಗಳಲ್ಲಿ ಪ್ರಕರಣವನ್ನು ಯಾದಗಿರಿ ಜಿಲ್ಲಾ ನ್ಯಾಯಾಲಯದಿಂದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಶ್ರೀರಾಮ ಸೇನೆಯ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಬಿಜೆಪಿ ನಾಯಕ ವಿಜಯ್ ಪಾಟೀಲ್ ವಿರುದ್ಧ ಸಮನ್ಸ್ ಜಾರಿಯಾಗಿದೆ.

ರಾಜಾಸಿಂಗ್ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್‍ರೊಂದಿಗೆ ಸೇರಿ ಪ್ರಚೋದನಾಕಾರಿ ಭಾಷಣ ಮಾಡಿದ್ದರು. ಇವರಿಬ್ಬರ ವಿರುದ್ಧವೂ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಬಿಜೆಪಿ ನಾಯಕ ವಿಜಯ್ ಪಾಟೀಲ್ ಅವರ ವಿರುದ್ಧವೂ ಪ್ರಕರಣ ದಾಖಲಾಗಿತ್ತು. 'ಅಖಂಡ ಭಾರತ ಸಾಧಿಸುವವರೆಗೆ ಹಿಂದೂ ಯುವಕರು, ಹಿಂದೂ ಯೋಧರಾಗಬೇಕು' ಎಂದು ರಾಜಾಸಿಂಗ್ ಕೈಲಿ ಖಡ್ಗ ಝಳಪಿಸಿದ್ದರು ಎಂದು ಪೊಲೀಸಲು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News