×
Ad

ಬಂಡವಾಳದ ಸಲವತ್ತುಗೆ ಅರ್ಜಿ ಆಹ್ವಾನ

Update: 2022-06-10 22:20 IST

ಮಂಗಳೂರು : ಆತ್ಮ ನಿರ್ಭರ್‌ಯೋಜನೆಯಡಿ ಕೇಂದ್ರ ಆಹಾರ ಸಂಸ್ಕರಣ ಕೈಗಾರಿಕೆ ಮಂತ್ರಾಲಯ ೨೦೨೦-೨೧ನೇ ಸಾಲಿನಿಂದ ೨೦೨೪-೨೫ನೇ ಸಾಲಿನವರೆಗೆ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಯೋಜನೆಯನ್ನು ಪ್ರಾರಂಭಿಸಿದೆ.

ಕಿರು ಆಹಾರ ಸಂಸ್ಕರಣ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ ಡೇ-ನಲ್ಮ್ ಅಭಿಯಾನದಡಿ ರಚಿಸಿದ ಸ್ವ-ಸಹಾಯ ಸಂಘದ ಸದಸ್ಯರಿಗೆ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಕಾರ್ಯಕ್ರಮದಡಿ ಬರುವ ಸೌಲಭ್ಯವನ್ನು ಒದಗಿಸಲಾಗುವುದು. ಕಿರು ಆಹಾರ ಸಂಸ್ಕರಣಾ ಉದ್ಯಮಶೀಲತೆಯಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರಿಗೆ ಬಂಡವಾಳ ಮತ್ತು ಸಣ್ಣ ಉಪಕರಣಗಳ ಖರೀದಿಗೆ ೪೦,೦೦೦ ರೂ.ಗಳವರೆಗೆ ಸೀಡ್ ಕ್ಯಾಪಿಟಲ್, ಉತ್ಪನ್ನಗಳ ಮಾರ್ಕೆಟಿಂಗ್ ಮತ್ತು ಬ್ರಾಂಡ್‌ಗೆ ಸಂಬಂಧಿಸಿದಂತೆ ಬೆಂಬಲ ನೀಡಲಾಗುತ್ತಿದೆ.

ಆಸಕ್ತ ಅರ್ಹ ಡೇ-ನಲ್ಮ್ ಯೋಜನೆಯಡಿ ರಚಿಸಿದ ಸ್ವ-ಸಹಾಯ ಗುಂಪಿನ ಸದಸ್ಯರು ಅರ್ಜಿ ಸಲ್ಲಿಸಲು ಹೆಚ್ಚಿನ ಮಾಹಿತಿಗೆ ಮಂಗಳೂರು ಮಹಾನಗರಪಾಲಿಕೆಯ ನಗರ ಬಡತನ ನಿರ್ಮೂಲನಾ ಕೋಶವನ್ನು ಸಂಪರ್ಕಿಸು ವಂತೆ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News