ಬಿದಿರಿನ ಕೊಳಲಿನಿಂದ ನಾದ ಹೊರಹೊಮ್ಮಿದಂತೆ ಮೋಟಮ್ಮನವರಿಂದ ನಾಡಿಗಾದದ್ದು ಅಪಾರ: ಡಿ.ಕೆ.ಶಿವಕುಮಾರ್

Update: 2022-06-11 12:54 GMT

ಬೆಂಗಳೂರು, ಜೂ.11: ಕೊಳಲು ಬಿದಿರಿನಿಂದ ಮಾಡಿದ್ದು. ಬಿದಿರಿಗೆ ಗೊತ್ತಿರುವುದಿಲ್ಲ. ತಾನು ಕೊಳಲಾಗುತ್ತೇನೆ ಎಂದು, ಕೊಳಲಿಗೂ ಗೊತ್ತಿರುವುದಿಲ್ಲ, ತನ್ನಿಂದ ಇಂಪಾದ ನಾದ ಹೊರಹೊಮ್ಮುತ್ತದೆ ಎಂದು, ಆ ನಾದಕ್ಕೂ ಗೊತ್ತಿರುವುದಿಲ್ಲ. ತನ್ನಿಂದ ಜನಕ್ಕೆ ಆನಂದವಾಗುತ್ತದೆ ಎಂದು, ಹಾಗೆ ಮೋಟಮ್ಮನವರಿಗೂ ಗೊತ್ತಿರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಣ್ಣಿಸಿದರು.

ಶನಿವಾರ ನಗರದ ರವೀಂದ್ರ ಕಲಾಕ್ಷೇತ್ರ ಸಭಾಂಗಣದಲ್ಲಿ ಮಾಜಿ ಸಚಿವ ಮೋಟಮ್ಮ ಅವರ ವಿಶಿಷ್ಟ ರಾಜಕೀಯ ಪಯಣದ ಆತ್ಮಕಥನ ‘ಬಿದಿರು ನೀನಾರಿಗಲ್ಲದವಳು’ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. 

ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಹೆಣ್ಣುಮಕ್ಕಳಿಗೆ ಶಕ್ತಿ ತುಂಬುವ ಯೋಜನೆಯ ಚಿಂತನೆ ಬಂತು. ಈ ಜವಾಬ್ದಾರಿಯನ್ನು ಮೋಟಮ್ಮ ಅವರಿಗೆ ವಹಿಸಲಾಯ್ತು. ಆಗ ಅನುಷ್ಠಾನಕ್ಕೆ ಬಂದ ಸ್ತ್ರೀ ಶಕ್ತಿ ಯೋಜನೆ ಇಂದು ಸಮಾಜದಲ್ಲಿ ಬಹಳ ಆಳವಾಗಿ ಬೇರೂರಿದೆ ಎಂದು ನುಡಿದರು.

ಹಿಂದೆ ಸಾಮ್ರಾಟ ಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಹೊರಟಾಗ ಅವರ ಗುರು ಹೇಳಿದರಂತೆ, ನೀನು ಭಾರತದಿಂದ ವಾಪಾಸ್ಸು ಬರುತ್ತಿಯೋ ಇಲ್ಲವೋ ಗೊತ್ತಿಲ್ಲ. ಆದರೆ ನೀನು ವಾಪಸ್ಸು ಬರುವಾಗ 5 ವಸ್ತುಗಳನ್ನು ಮರೆಯದೆ ತೆಗೆದುಕೊಂಡು ಬಾ ಎಂದಿದ್ದರು. ಅವು ರಾಮಾಯಣ, ಮಹಾಭಾರತ ಗ್ರಂಥ, ಗಂಗಾ ಜಲ, ಕೃಷ್ಣನ ಕೊಳಲು ಹಾಗೂ ಒಬ್ಬ ತತ್ವಜ್ಞಾನಿ ಎಂದು ಉಲ್ಲೇಖಿಸಿದ್ದರು ಎಂದರು.

ಕೊಳಲು ಬಿದಿರಿನಿಂದ ಮಾಡಿದ್ದು. ಬಿದಿರಿಗೆ ಗೊತ್ತಿರುವುದಿಲ್ಲ. ತಾನು ಕೊಳಲಾಗುತ್ತೇನೆ ಎಂದು, ಕೊಳಲಿಗೂ ಗೊತ್ತಿರುವುದಿಲ್ಲ, ತನ್ನಿಂದ ಇಂಪಾದ ನಾದ ಹೊರಹೊಮ್ಮುತ್ತದೆ ಎಂದು, ಆ ನಾದಕ್ಕೂ ಗೊತ್ತಿರುವುದಿಲ್ಲ. ತನ್ನಿಂದ ಜನಕ್ಕೆ ಆನಂದವಾಗುತ್ತದೆ ಎಂದು, ಹಾಗೆ ಮೋಟಮ್ಮನವರಿಗೂ ಗೊತ್ತಿರಲಿಲ್ಲ ಎಂದು ಬಣ್ಣಿಸಿದರು.

ಈ ಜಗತ್ತಿನಲ್ಲಿ ತಾಯಿಯೇ ಮೊದಲ ಗುರು. 1978 ರಲ್ಲೇ ಶಾಸಕರಾದ ತಮ್ಮ ತಾಯಿ ಮೋಟಮ್ಮ ಅವರಿಂದ ಜನರ ಜತೆ ಒಡನಾಡುವ ಬಗೆಯನ್ನು ನಯನ ಕಲಿತಿದ್ದಾರೆ. ಮೋಟಮ್ಮ ಅವರು ಕೆತ್ತಿ, ಕೆತ್ತಿ ಅವರನ್ನು ವಿಗ್ರಹ ಮಾಡಿದ್ದಾರೆ. ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕøತಿ. ಹೀಗಾಗಿ ಅವರಿಗೆ ತಾಯಿಯೇ ಗುರು ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News