ಆನ್‍ಲೈನ್‍ನಲ್ಲಿ ಲ್ಯಾಪ್‍ಟಾಪ್ ಮಾರಾಟ ಮಾಡುವುದಾಗಿ ವಂಚನೆ: ಆರೋಪಿಯ ಬಂಧನ

Update: 2022-06-11 12:43 GMT

ಬೆಂಗಳೂರು, ಜೂ.11: ಆನ್‍ಲೈನ್‍ನಲ್ಲಿ ಲ್ಯಾಪ್‍ಟಾಪ್ ಮಾರಾಟ ಮಾಡುವುದಾಗಿ ವಂಚಿಸುತ್ತಿದ್ದ ಆರೋಪದಡಿ ಓರ್ವನನ್ನು ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. 

ಹೊಸದಿಲ್ಲಿ ಮೂಲದ ಅಮನ್ ಕುಮಾರ್(20) ಬಂಧಿತ ಆರೋಪಿಯಾಗಿದ್ದು ಆತ ಹಿಂದಿನ ವಂಚನೆ ಕೃತ್ಯಗಳ ಮಾಹಿತಿಯನ್ನು ಪಡೆದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ಡಿಸಿಪಿ ಡಾ ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ. 

ಆರೋಪಿ ಅಮನ್ ಓಎಲ್‍ಎಕ್ಸ್ ನಲ್ಲಿ 1.50 ಲಕ್ಷ ಮೌಲ್ಯದ ಲ್ಯಾಪ್‍ಟಾಪ್ ಜಾಹೀರಾತು ನೀಡಿದ್ದು ಅದನ್ನು ಕಂಡ ದೂರುದಾರರು ಜಾಹೀರಾತುನಲ್ಲಿದ್ದ ಆರೋಪಿಯನ್ನು ಸಂಪರ್ಕಿಸಿದ್ದರು. ಈ ಸಂದರ್ಭದಲ್ಲಿ ಆರೋಪಿಯು ಹಂತ ಹಂತವಾಗಿ 72 ಸಾವಿರ ರೂ. ಪಡೆದಿದ್ದು ಬಳಿಕ ಲ್ಯಾಪ್‍ಟಾಪ್ ಬದಲು ಖಾಲಿ ಪೆಟ್ಟಿಗೆ ರವಾನಿಸಿದ್ದಾನೆ ಎನ್ನಲಾಗಿದೆ.

ಈ ಕುರಿತು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಸೆರೆಹಿಡಿದ ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News