ಸಂಚಾರ ದಟ್ಟಣೆ; ನಂದಿ ಬೆಟ್ಟದಲ್ಲಿ ಸಾಲು ನಿಂತ ವಾಹನಗಳು, ಪ್ರವಾಸಿಗಳ ಪರದಾಟ
ಬೆಂಗಳೂರು, ಜೂ. 2: ಪ್ರಸಿದ್ಧ ನಂದಿ ಗಿರಿಧಾಮದಲ್ಲಿ ಸಂಚಾರ ದಟ್ಟಣೆ ಉಂಟಾಗಿ ರವಿವಾರ ಬೆಳಿಗ್ಗೆಯಿಂದಲೇ ವಾಹನಗಳು ಸಾಲು ಸಾಲಾಗಿ ನಿಂತಿದ್ದ ದೃಶ್ಯ ಕಂಡಿತು.
ರವಿವಾರ ಕಾರಹಳ್ಳಿ ಕ್ರಾಸ್‍ನಿಂದಲೇ ವಾಹನ ದಟ್ಟಣೆ ಉಂಟಾಗಿತ್ತು.ಅಲ್ಲದೆ, ಗಿರಿಧಾಮದ ವಾಹನ ನಿಲುಗಡೆ ಸ್ಥಳದಲ್ಲಿ 300 ಕಾರುಗಳ ನಿಲುಗಡೆಗೆ ಮಾತ್ರ ಜಿಲ್ಲಾಡಳಿತ ಅವಕಾಶ ನೀಡುತ್ತಿದೆ. ಆದರೆ ನಿನ್ನೆ ಮತ್ತು ರವಿವಾರ ಪ್ರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗಿರಿಧಾಮಕ್ಕೆ ಭೇಟಿ ನೀಡುವರು.
ಬೆಟ್ಟಕ್ಕೆ ಹೋದ ಕಾರುಗಳು ವಾಪಸ್ ಆದ ನಂತರವೇ ಕೆಳಗೆ ಇರುವ ಕಾರುಗಳು ಗಿರಿಧಾಮಕ್ಕೆ ಹೋಗಲು ಅವಕಾಶ ನೀಡಲಾಗುತ್ತದೆ ಎಂದು ಸ್ಥಳೀಯರು ಪ್ರತಿಕ್ರಿಯಿಸಿದರು.
ಇನ್ನೂ, ವಾರಾಂತ್ಯದಲ್ಲಿ ಪ್ರವಾಸಿಗರು ಹೆಚ್ಚುವ ಕಾರಣ ಬೆಳಿಗ್ಗೆಯೇ ಪಾಕಿರ್ಂಗ್ ಸ್ಥಳ ವಾಹನಗಳಿಂದ ತುಂಬುತ್ತದೆ. ಆ ನಂತರ ಬರುವ ಪ್ರವಾಸಿಗರಿಗೆ ಪ್ರವೇಶ ದೊರೆಯುವುದು ದುಸ್ತರ. ಪ್ರತಿ ಶನಿವಾರ ಮತ್ತು ರವಿವಾರ ಕಿಲೋಮೀಟರ್ ಗಟ್ಟಲೆ ವಾಹನಗಳು ನಿಲ್ಲುತ್ತವೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದರು.