×
Ad

ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ಕೆ. ಪೃಥ್ವಿರಾಜ್ ರೈ ಆಯ್ಕೆ

Update: 2022-06-12 18:53 IST

ಮಂಗಳೂರು: ಮಂಗಳೂರು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ವಕೀಲರಾದ ಕೆ. ಪೃಥ್ವಿರಾಜ್ ರೈ ಆಯ್ಕೆಯಾಗಿದ್ದಾರೆ. ಶುಕ್ರವಾರ ನಡೆದ ಚುನಾವಣೆಯಲ್ಲಿ ಅವರು ತಮ್ಮ ಎದುರಾಳಿ ಅರುಣ್ ಬಂಗೇರ ಅವರನ್ನು ಸೋಲಿಸಿ ಜಯ ಗಳಿಸಿದ್ದಾರೆ.

ಉಪಾಧ್ಯಕ್ಷರಾಗಿ ಹಿರಿಯ ವಕೀಲ ಹಾಗೂ ಜಿಲ್ಲಾ ಸರ್ಕಾರಿ ವಕೀಲರಾದ ಮನೋರಾಜ್ ರಾಜೀವ ಆಯ್ಕೆಯಾಗಿ ದ್ದಾರೆ. ಅವರು ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಎಚ್.ವಿ. ರಾಘವೇಂದ್ರ ಅವರನ್ನು ಸೋಲಿಸಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮೂರು ವಕೀಲರು ಸ್ಪರ್ಧಿಸಿದ್ದು, ಶ್ರೀಧರ ಎಣ್ಮಕಜೆ ಆಯ್ಕೆಯಾಗಿದ್ದಾರೆ. ಖಜಾಂಚಿ ಸ್ಥಾನಕ್ಕೆ ಶಶಿರಾಜ್ ರಾವ್ ಕಾವೂರು ಚುನಾಯಿತರಾದರು.

ಮಹಿಳಾ ಮೀಸಲು ಜೊತೆ ಕಾರ್ಯದರ್ಶಿ ಸ್ಥಾನಕ್ಕೆ ಚೈತ್ರಾ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಈ ಕೆಳಗಿನವರು ಆಯ್ಕೆಯಾದರು. ಪ್ರಸಾದ್ ಪೂಜಾರಿ, ರೇಷ್ಮ ಡಿ ಸೋಜ, ಸುಹಾಸ್ ಶೆಟ್ಟಿ, ಶುಕರಾಜ್ ಕೊಟ್ಟಾರಿ, ಶೀತಲ್, ವಿಕ್ರಮ ಪಡ್ವೆಂತಾಯ, ದಿನಕರ ಶೆಟ್ಟಿ, ಈಶ್ವರ್ ಕೊಟ್ಟಾರಿ, ಶ್ರೀಕುಮಾರ್ ಅವಿರೋಧ, ವಾಸುದೇವ ಗೌಡ, ಬೇಬಿ ಅರಸ, ದೇವದಾಸ್ ರಾವ್, ಮಹಿಳಾ ವಿಭಾಗದಲ್ಲಿ ಸ್ವಾತಿ, ಜೀಟಾ ಪ್ರಿಯಾ ಮೋರಸ್ ,ಸುಮನಾ ಶರಣ್ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News