ಬೆಂಗಳೂರು ಪ್ರೆಸ್‍ಕ್ಲಬ್ ನೂತನ ಅಧ್ಯಕ್ಷರಾಗಿ ಆರ್.ಶ್ರೀಧರ್ ಆಯ್ಕೆ
Update: 2022-06-12 21:27 IST
ಬೆಂಗಳೂರು, ಜೂ. 12: ಬೆಂಗಳೂರು ಪ್ರಸ್‍ಕ್ಲಬ್‍ನ ಕಾರ್ಯಕಾರಿ ಸಮಿತಿಗೆ ರವಿವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಆರ್.ಶ್ರೀಧರ್, ಉಪಾಧ್ಯಕ್ಷರಾಗಿ ಆನಂದ್ ಪಿ. ಬೈದನಮನೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಪಿ.ಮಲ್ಲಪ್ಪ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ದೊಡ್ಡಬೊಮ್ಮಯ್ಯ, ಜಂಟಿ ಕಾರ್ಯದರ್ಶಿಯಾಗಿ ಮಹಾಂತೇಶ್ ಎಸ್.ಹಿರೇಮಠ್, ಖಜಾಂಚಿಯಾಗಿ ಮೋಹನ್ ಕುಮಾರ್ ಬಿ.ಎನ್ ಆಯ್ಕೆಯಾಗಿದ್ದು, ಕಾರ್ಯಕಾರಿ ಸಮಿತಿಗೆ ರೋಹಿಣಿ ವಿ. ಅಡಿಗ, ಗಣೇಶ್ ಜಿ., ಮುನಿರಾಮೇಗೌಡ(ರವಿ), ಆಲ್‍ಫ್ರೆಡ್ ಟೆನ್ನಿಸನ್ ಡಿ., ಸೋಮಶೇಖರ್ ಕೆ.ಎಸ್. (ಸೋಮಣ್ಣ), ಯಾಸಿರ್ ಮುಸ್ತಾಕ್ ಹಾಗೂ ಮಿನಿ ತೇಜಸ್ವಿ(ಮಹಿಳಾ ಮೀಸಲು) ಅವರು ಸದಸ್ಯರಾಗಿ ಆಯ್ಕೆಯಾಗಿದ್ದಾರೆಂದು ಪ್ರಕಟಣೆ ತಿಳಿಸಿದೆ.