×
Ad

ಮಳಲಿಪೇಟೆ ಮಸೀದಿ ವಿವಾದ; ಜೂ.17ಕ್ಕೆ ವಿಚಾರಣೆ ಮುಂದೂಡಿದ ಸಿವಿಲ್ ನ್ಯಾಯಾಲಯ

Update: 2022-06-14 22:26 IST

ಮಂಗಳೂರು : ಮಳಲಿ ಪೇಟೆ ಜುಮಾ ಮಸೀದಿ ವಿವಾದಕ್ಕೆ ಸಂಬಂಧಿಸಿ ಮಂಗಳೂರು ಮೂರನೇ ಸಿವಿಲ್ ನ್ಯಾಯಾಲಯು ವಿಚಾರಣೆಯನ್ನು ಜೂ.17ಕ್ಕೆ ಮುಂದೂಡಿದೆ.

ಇಂದು ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಪ್ರಕರಣ ಸಂಬಂಧ ಕರ್ನಾಟಕ ಹೈಕೋರ್ಟ್ ಯಾವುದೇ ತೀರ್ಪು ನೀಡದಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಜೂ. 17ಕ್ಕೆ ಮುಂದೂಡಿತು.
 
*ಎಸಿ ನ್ಯಾಯಾಲಯದಲ್ಲಿ ವಾದ ಪ್ರತಿವಾದ ಮಂಡನೆ

ಮಳಲಿ ಪೇಟೆ ಜುಮಾ ಮಸೀದಿಗೆ ಸಂಬಂಧಿಸಿದ ಆರ್‌ಟಿಸಿಯಲ್ಲಿ ಅಕ್ರಮ ಎಸಗಲಾಗಿದೆ ಮತ್ತು ಸರಿಯಾದ ಆರ್‌ಟಿಸಿ ಹೊಂದಲಾಗಿದೆ ಎಂಬ ಎರಡು ಪ್ರತ್ಯೇಕ ಅರ್ಜಿಯನ್ನು ಕೈಗೆತ್ತಿಕೊಂಡ ಮಂಗಳೂರು ಸಹಾಯಕ ಆಯುಕ್ತರ ನ್ಯಾಯಾಲಯವು ವಾದ ಪ್ರತಿವಾದವನ್ನು ಆಲಿಸಿತು.

ಧನಂಜಯ ಮತ್ತಿತರರು ಸಲ್ಲಿಸಿದ್ದ ಅರ್ಜಿಯಲ್ಲಿ ಆರೋಪಗಳಿಗೆ ವಾದ ಮಂಡಿಸಿದ ಮಸೀದಿಯ ಪರ ವಕೀಲರು, ಮಸೀದಿಯ ಆರ್‌ಟಿಸಿಯ ಕಾಲಂ 9ರಲ್ಲಿ ಸರಕಾರದ ಹೆಸರಿನಲ್ಲಿದ್ದರೆ, ಕಲಂ ನಂಬರ್ 4ರಲ್ಲಿ  ಮಳಲಿ ಜುಮಾ ಮಸೀದಿಯ ಹೆಸರು ಇದೆ. ಇದು ತಹಶೀಲ್ದಾರ್ ಅವರ ಮೂಲಕವೇ ಅಧಿಕೃತವಾಗಿ ನಡೆದಿರುವ ಪ್ರಕ್ರಿಯೆಗಳು ಎಂದು ವಾದ ಮಂಡಿಸಿದರು. ಈ ವಾದವನ್ನು ಆಲಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ಮುಂದೂಡಿ ಆದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News