ಅರಬ್ ದೇಶಗಳಿಗೆ 3 ಮಿಲಿಯನ್ ಪುಸ್ತಕ ವಿತರಿಸಲು ಯುಎಇ ಪ್ರಧಾನಿ ಆದೇಶ

Update: 2022-06-15 12:53 GMT
PHOTO: TWITTER/@HHShkMohd

ಅಬುಧಾಬಿ, ಜೂ.14: ಅರಬ್ ದೇಶಗಳ ಸಾವಿರಾರು ಶಾಲೆಗಳಲ್ಲಿ ದಾಖಲಾತಿ ಪಡೆದಿರುವ ವಿದ್ಯಾರ್ಥಿಗಳಿಗೆ 3 ಮಿಲಿಯನ್ ಪುಸ್ತಕಗಳನ್ನು ವಿತರಿಸುವಂತೆ ಯುಎಇ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ರಶಿದ್ ಅಲ್ ಮಕ್ತೂಮ್ ಆದೇಶಿಸಿದ್ದಾರೆ.

ಈ ವಲಯದ ಅತ್ಯಂತ ಬೃಹತ್ ವಾಚನಾಲಯ ‘ದಿ ಡಿಎಚ್1-ಬಿಲಿಯನ್ ಮುಹಮ್ಮದ್ ಬಿನ್ ರಾಶಿದ್ ಲೈಬ್ರೆರಿ’ ಯನ್ನು ದುಬೈಯ ಕ್ರೀಕ್ ಬ್ಯಾಂಕ್‌ನಲ್ಲಿ ಸೋಮವಾರ ಅವರು ಉದ್ಘಾಟಿಸಿದ್ದು ಮರುದಿನ ಅವರು ಈ ಘೋಷಣೆ ಮಾಡಿದ್ದಾರೆ. ಜೂನ್ 16ರಿಂದ ಲೈಬ್ರೆರಿಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿರುತ್ತದೆ. ಅಲ್ಲದೆ ಮುಂಬರುವ ಅರಬ್ ಓದುವಿಕೆ ಸ್ಪರ್ಧೆಯಲ್ಲಿ 22 ಮಿಲಿಯನ್ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News