ಪಡುಬಿದ್ರಿ: ಗೂಡಂಗಡಿ ತೆರವು ಕಾರ್ಯಾಚರಣೆ

Update: 2022-06-16 16:37 GMT

ಪಡುಬಿದ್ರಿ: ಪಡುಬಿದ್ರಿ ಪೇಟೆಯ ಬಸ್ಸು ನಿಲ್ದಾಣದ ಬಳಿ ಹಾಗೂ ಕಾರ್ಕಳ ರಸ್ತೆ ಮತ್ತು ಕಂಚಿನಡ್ಕದಲ್ಲಿನ ಒಟ್ಟು 15 ಗೂಡಂಗಡಿಗಳನ್ನು ಗುರುವಾರ ಪಡುಬಿದ್ರಿ ಗ್ರಾಮ ಪಂಚಾಯಿತಿ ತೆರವು ಕಾರ್ಯಾಚರಣೆ ನಡೆಸಿತು. 

ಪಡುಬಿದ್ರಿ ಪೇಟೆಯಲ್ಲಿ ಸರ್ವಿಸ್, ತಡೆ ರಹಿತ ಬಸ್ ನಿಲ್ದಾಣಗಳಲ್ಲಿ ಬಸ್‍ಗಳು ನಿಲುಗಡೆಗೆ ಹಾಗೂ ಪಡುಬಿದ್ರಿಯಲ್ಲಿ ರಿಕ್ಷಾ ಹಾಗೂ ಕಾರು ನಿಲ್ದಾಣಕ್ಕೆ ಸರಿಯಾದ ವ್ಯವಸ್ಥೆ ಇರಲಿಲ್ಲ. ವ್ಯವಸ್ಥೆ ಕಲ್ಪಿಸಿಕೊಡಿ ಎಂಬ ಮನವಿಯಮೇರೆಗೆ ರಿಕ್ಷಾ, ಕಾರು ತಂಗುದಾಣಗಳನ್ನು ನಿರ್ಮಿಸಲು ಪಂಚಾಯತ್ ನೇತೃತ್ವದಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ.  

ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು ಅವರು, ಕಳೆದ ಮಾರ್ಚ್, ಎಪ್ರಿಲ್‍ಗಳಲ್ಲಿ ಪಂಚಾಯತ್‍ನಲ್ಲಿ ನಡೆದಿದ್ದ ಶಾಸಕರ ಉಪಸ್ಥಿತರಿಯಲ್ಲಿ  ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ವಿಶೇಷ ಸಭೆಯಲ್ಲಿ ನಿರ್ಣಯದಂತೆ ಕಾರ್ಯಾಚರಣೆ ನಡೆಸಲಾಗಿದೆ. ತೆರವುಗೊಳಿಸಲು ಎರಡೆರಡು ಭಾರಿ ನೋಟೀಸು ನೀಡಲಾಗಿತ್ತ.  

ಮುಂದಿನ ದಿನಗಳಲ್ಲಿ ಹೆದ್ದಾರಿಯ ಪಾದಚಾರಿಗಳು ನಡೆಯುವ ಭಾಗದಲ್ಲಿ ಅಂಗಡಿಗಳ ಮಂದಿ ನಿರ್ಮಿಸಿರುವ ಅಕ್ರಮ ನಿರ್ಮಾಣಗಳನ್ನೂ ತೆರವುಗೊಳಿಸಲಾಗುತ್ತದೆ. ಪಂಚಾಯತ್ ದಂಡನಾ ಮೊತ್ತದ ಸಹಿತ ಕಾರ್ಯಾ ಚರಣೆಯ ಸಕಲ ಖರ್ಚು ವೆಚ್ಚಗಳನ್ನು ಮರು ಪಾವತಿಸಿ ಪಂಚಾಯತ್ ವಶಪಡಿಸಿಕೊಳ್ಳುವ ಯಾವುದೇ ಸೊತ್ತನ್ನು ವಾಪಾಸು ಪಡೆದುಕೊಳ್ಳುವ ಬದಲು ತಾವಾಗಿಯೇ ಅಕ್ರಮ ನಿರ್ಮಾಣವನ್ನು ತೆರವುಗೊಳಿಸಿದರೆ ಎಲ್ಲರಿಗೂ ಉತ್ತಮವೆಂದು ಹೇಳಿದರು.

ಸಾರ್ವಜನಿಕ ವಾಹನಗಳ ಪಾರ್ಕಿಂಗ್‍ಗಾಗಿ ಪಂಚಾಯತ್ ಕಾರ್ಕಳ ಲೋಕೋಪಯೋಗಿ ಇಲಾಖಾ ಹಳೆ ರಸ್ತೆಯ ಭಾಗವನ್ನು ಮುಂದಿನ ದಿನಗಳಲ್ಲಿ ವ್ಯವಸ್ಥಿತಗೊಳಿಸಲಿದೆ. ಈಗಾಗಲೇ ರಾಧಾ ಸಿಟಿ ಮಾರ್ಕೆಟ್ ಎದುರು ಈ ಹಳೆ ರಸ್ತೆ ಭಾಗದಲ್ಲಿನ ಗಿಡಗಳನ್ನು ತೆರವುಗೊಳಿಸಲಾಗಿದೆ. ಮಣ್ಣನ್ನು ಈಗಾಗಲೇ ಅಲ್ಲಿನ ಆಡಳಿತ ವರ್ಗವು ತೆರವುಗೊಳಿಸಿದೆ. ಮಂಗಳವಾರದ ಸಂತೆಯ ದಿನ ಶಾಲಾ ಮೈದಾನದಲ್ಲೇ ಬ್ಯಾರಿಕೇಡ್‍ಗಳನ್ನು ಇರಿಸಿ ಖಾಸಗಿ ವಾಹನಗಳ ಪಾರ್ಕಿಂಗ್‍ಗೆ ವ್ಯವಸ್ಥೆಗೊಳಿ ಸಲಾಗುವುದು ಎಂದು ರವಿ ಶೆಟ್ಟಿ ಅವರು ತಿಳಿಸಿದರು.

ಪಿಡಿಒ ಪಂಚಾಕ್ಷರೀ ಸ್ವಾಮಿ, ಸದಸ್ಯರು ಮತ್ತಿತರರು ಇದ್ದರು. ಪಡುಬಿದ್ರಿ ಪೊಲೀಸ್ ಠಾಣಾ ಸಿಬಂದಿ ತೆರವು ಕಾರ್ಯಾಚರಣೆಯ ವೇಳೆ ಕಾನೂನು ಸುವ್ಯವಸ್ಥೆಗಾಗಿ ಸ್ಥಳದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News