×
Ad

ಪಿಯುಸಿ ಫಲಿತಾಂಶ: ಜ್ಞಾನಸುಧಾ ಕಾಲೇಜಿನ ಇಬ್ಬರಿಗೆ 595, ನಾಲ್ವರಿಗೆ 594 ಅಂಕ

Update: 2022-06-18 23:16 IST

ಕಾರ್ಕಳ: ಜ್ಞಾನಸುಧಾದ 566 ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದು, 563 ವಿದ್ಯಾರ್ಥಿಗಳು ತೇರ್ಗಡೆಯಾಗೊಂಡು  ಶೇ. 99.5 ಫಲಿತಾಂಶ ದಾಖಲಿಸಿದೆ. ಕಾಮರ್ಸ್ ವಿಭಾಗದ 62 ವಿದ್ಯಾರ್ಥಿಗಳೂ ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದಿಂದ 504 ವಿದ್ಯಾರ್ಥಿಗಳ ಪೈಕಿ 501 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ 99.4 ಫಲಿತಾಂಶ ದೊರೆತಿದೆ.

ವಿಜ್ಞಾನ ವಿಭಾಗದಲ್ಲಿ ಚಿರಂತ್ ಕೆ. ಹಾಗೂ ಪ್ರಜ್ಞಾ ವಿ. 595 ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ ನಾಲ್ಕನೇ ಸ್ಥಾನ, ವಾಣಿಜ್ಯ ವಿಭಾಗದಲ್ಲಿ ಕುಮಾರಿ ಛಾಯಾ ಪೈ 594 ಅಂಕ ಗಳಿಸಿ ಉಡುಪಿ ಜಿಲ್ಲೆಗೆ ಮೊದಲ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. 

ಒಟ್ಟು 10 ಮಂದಿ ವಿದ್ಯಾರ್ಥಿಗಳು 590ಕ್ಕಿಂತ ಅಧಿಕ ಅಂಕ ಗಳಿಸಿದ್ದು, ವಿಜ್ಞಾನ ವಿಭಾಗದಲ್ಲಿ ಚಿರಂತ್ ಕೆ. (595), ಪ್ರಜ್ಞಾ ವಿ.(595), ಸ್ತುತಿ (593), ದಿಯಾ ಉದಯ್ ಶೆಟ್ಟಿ (592), ಉತ್ತಮ್ (592), ವೈಷ್ಣವಿ ಎನ್. (590), ಅಖಿಲ್ ವಾಗ್ಲೆ(590), ವಾಣಿಜ್ಯ ವಿಭಾಗದಲ್ಲಿ ಛಾಯಾ ಪೈ (594),  ರಶ್ಮಿತಾ ಶೆಟ್ಟಿ (592), ಸಾತ್ವಿಕ್ ಪ್ರಭು (591) ಅಂಕ ಗಳಿಸಿದ್ದಾರೆ. 17 ವಿದ್ಯಾರ್ಥಿಗಳು ಶೇ.98 ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿರುತ್ತಾರೆ. ವಿಷಯವಾರು ವಿಭಾಗದಲ್ಲಿ 100ಕ್ಕೆ 100 ಅಂಕವು ಗಣಿತ ಶಾಸ್ತ್ರದಲ್ಲಿ148, ಭೌತಶಾಸ್ತ್ರದಲ್ಲಿ 23, ರಸಾಯನ ಶಾಸ್ತ್ರದಲ್ಲಿ 43, ಜೀವಶಾಸ್ತ್ರದಲ್ಲಿ 30, ಗಣಕ ವಿಜ್ಞಾನದಲ್ಲಿ 45, ಸಂಖ್ಯಾಶಾಸ್ತ್ರದಲ್ಲಿ 22, ವ್ಯವಹಾರ ಅಧ್ಯಯನದಲ್ಲಿ 10, ಲೆಕ್ಕಶಾಸ್ತ್ರದಲ್ಲಿ 15, ಮೂಲ ಗಣಿತದಲ್ಲಿ 6, ಸಂಸ್ಕೃತ 41, ಕನ್ನಡದಲ್ಲಿ 2, ಹಿಂದಿಯಲ್ಲಿ 2 ಸೇರಿ ಒಟ್ಟು 387 ಪತ್ರಿಕೆಯು ನೂರಕ್ಕೆ ನೂರು ಅಂಕ ಲಭ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News