ಮಂಜನಾಡಿ: ʼಕಾಟನ್ ಇಂಡಸ್ಟ್ರೀಸ್ʼ ಬೆಂಕಿಗಾಹುತಿ

Update: 2022-06-21 12:31 GMT

ಕೊಣಾಜೆ: ಮಂಜನಾಡಿ ಸಮೀಪದ ತೌಡುಗೋಳಿ ಕ್ರಾಸ್ ನಲ್ಲಿರುವ ʼಕಾಟನ್ ಇಂಡಸ್ಟ್ರೀಸ್ʼ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹಿಡಿದ ಪರಿಣಾಮ ಅಪಾರ ನಷ್ಟ ಸಂಭವಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.

ದೇರಳಕಟ್ಟೆ ನೋಮನ್ ಎಂಬವರಿಗೆ ಸೇರಿದ ಈ ಹತ್ತಿಯ ಪ್ಯಾಕ್ಟರಿಯಲ್ಲಿ ಘಟನೆ ಸಂಭವಿಸಿದೆ.

ಘಟನೆ ನಡೆದ ವೇಳೆ ಸುಮಾರು ನಾಲ್ಕು ಜನ ಸಿಬ್ಬಂದಿ ಒಳಗಿದ್ದು ಬೆಂಕಿ ಹಿಡಿದ ಸಂದರ್ಭ ಹೊರ ಓಡಿ ಬಂದು ಅಪಾಯದಿಂದ ಪಾರಾಗಿದ್ದಾರೆ. ಬಳಿಕ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ.

ಘಟನೆಯಲ್ಲಿ ಅಪಾರ ಪ್ರಮಾಣದ ಹತ್ತಿಯ ವಸ್ತುಗಳು ನಾಶವಾಗಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News