ಜು.7: ಯೆನೆಪೊಯ ಅಬ್ದುಲ್ಲ ಕುಂಞಿ, ಡಾ.ಹೇಮಾವತಿ ಹೆಗ್ಗಡೆ, ಹರಿಕೃಷ್ಣ ಪುನರೂರು, ದೇವದಾಸ್ ಕಾಪಿಕಾಡ್ ರಿಗೆ ಪೌರ ಸನ್ಮಾನ

Update: 2022-06-22 06:22 GMT

ಮಂಗಳೂರು: ಮಂಗಳೂರು ವಿಶ್ವ ವಿದ್ಯಾನಿಲಯ ಮತ್ತು ಗುಲ್ಬರ್ಗ ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಯೆನೆಪೊಯ ವಿ.ವಿ.ಯ ಕುಲಾಧಿಪತಿ ಡಾ.ಯೆನೆಪೊಯ ಆಬುಲ್ಲ ಕುಂಞಿ,ಶ್ರೀ ಕ್ಷೇತ್ರ ಧರ್ಮಸ್ಥಳದ ಜ್ಞಾನ ವಿಕಾಸ ಯೋಜನೆಯ ಅಧ್ಯಕ್ಷೆ ಹೇಮಾವತಿ ವಿ ಹೆಗ್ಗಡೆ, ಕ.ಸಾ.ಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಲಾವಿದ ದೇವದಾಸ್ ಕಾಪಿಕಾಡ್  ಅವರಿಗೆ ಜುಲೈ 7ರಂದು ಪೌರ ಸನ್ಮಾನ ಸಮಿತಿಯಿಂದ ಸನ್ಮಾನ ನಡೆಯಲಿದೆ ಎಂದು ಸಂಚಾಲಕರಾದ ಐವನ್ ಡಿಸೋಜ ತಿಳಿಸಿದ್ದಾರೆ.

ಕುದ್ಮುಲ್ ರಂಗರಾವ್‌ ಪುರಭವನದಲ್ಲಿ ನಡೆಯುವ ಸಮಾರಂಭದಲ್ಲಿ ಮನಪಾ ಮೇಯರ್  ಪ್ರೇಮಾನಂದ ಶೆಟ್ಟಿ  ಅಧ್ಯಕ್ಷತೆಯಲ್ಲಿ  ಕೇಂದ್ರ ಸಾಹಿತ್ಯ ಆಕಾಡೆಮಿ ಹಾಗೂ ಸರಸ್ವತಿ ಸನ್ಮಾನ ಪುರಸ್ಕೃತರು, ಮಾಜಿ ಮುಖ್ಯಮಂತ್ರಿ  ಮತ್ತು ಮಾಜಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಸನ್ಮಾನಿಸಲಿರುವರು.

ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ.ವಿನಯ ಹೆಗ್ಡೆ ಇವರು ಅಭಿನಂದನಾ ಭಾಷಣ ಮತ್ತು ದ.ಕ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇಂಧನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ,ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಾದ  ಯು.ಟಿ.ಖಾದರ್, ಡಿ. ವೇದವ್ಯಾಸ ಕಾಮತ್,  ಡಾ.ವೈ, ಭರತ್ ಶೆಟ್ಟಿ, ಡಾ.ರಾಘವೇಂದ್ರ ರಾವ್, ಶ್ರೀನಿವಾಸ ವಿಶ್ವವಿದ್ಯಾನಿಲಯದ ಕುಲಾಧಿಪತಿ  ಡಾ.ರಾಘವೇಂದ್ರ ರಾವ್, ಮಂಗಳೂರು  ವಿ.ವಿ ಯ ಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ, ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯ ಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ, ಯನೆಪೊಯ ಪರಿಗಣಿತ ವಿಶ್ವವಿದ್ಯಾನಿಲಯದಯ ಕುಲಪತಿ ಡಾ.ವಿಜಯ ಕುಮಾರ್, ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಮಂಗಳೂರು ಪೋಲಿಸ್ ಆಯುಕ್ತರು ಶಶಿ ಕುಮಾರ್ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಡಾ.ಕುಮಾರ್ , ಮನಪಾ ಆಯುಕ್ತ ಅಕ್ಷಯ ಶ್ರೀಧರ್ ಇವರ ಉಪಸ್ಥಿತಿಯಲ್ಲಿ ಗೌರವ ಸಮರ್ಪಣೆ ಮಾಡಲಾಗುವುದು ಎಂದು ಸಂಚಾಲಕ ಐವನ್‌ ಡಿಸೋಜ  ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪೌರ ಸನ್ಮಾನ ಸಮಿತಿಯ ಸದಸ್ಯರಾದ ಡಾ.ದೇವರಾಜ್, ಡಾ.ಜನಾರ್ದನ, ರಾಯ್ ಕ್ಯಾಸ್ಟೋಲಿನ, ಮಾರ್ಸೆಲ್ ಮೊಂತೆರೋ, ಪ್ರದೀಪ್ ಕುಮಾರ್ ಕಲ್ಕೂರ, ಎನ್.ಜೆ.ನಾಗೇಶ್, ಅರುಣಾ ಕಾಮತ್, ನಾಗೇಂದ್ರ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News