×
Ad

ಹಳೆಕೋಟೆ ಶಾಲೆಯಲ್ಲಿ ಉಚಿತ ಸಮವಸ್ತ್ರ ವಿತರಣೆ

Update: 2022-06-22 18:37 IST

ಮಂಗಳೂರು: ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಳ್ಳಾಲದ ಹಳೆಕೋಟೆಯಲ್ಲಿ ನಡೆಸಲ್ಪಡು ತ್ತಿರುವ ಸಯ್ಯಿದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಯ್ಯದ್ ಮದನಿ ಪ್ರೌಢಶಾಲೆಯ ೪೨೫ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರವನ್ನು ರಾಜ್ಯ ವಿಧಾನಸಭೆಯ ವಿರೋಧಪಕ್ಷದ ಉಪ ನಾಯಕ, ಶಾಸಕ ಯು.ಟಿ. ಖಾದರ್ ವಿತರಿಸಿದರು.

ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳ ಸಂಪೂರ್ಣ ಜವಾಬ್ದಾರಿಯನ್ನು ವಿದ್ಯಾರ್ಥಿ ರಕ್ಷಕರು ವಹಿಸಿಕೊಳ್ಳ ಬೇಕು. ಶಕ್ತಿಗಳ ಪ್ರೇರಣೆ ನೀಡಬಾರದು. ಇದರಿಂದ  ಮಕ್ಕಳ ಭವಿಷ್ಯಕ್ಕೆ ಹಾನಿಯಾಗುತ್ತದೆ. ಶಿಕ್ಷಣಕ್ಕೆ ತೊಡಕಾಗು ತ್ತದೆ ಎಂದು ಹೇಳಿದರು.

ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಅಲ್ಹಾಜ್ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹ, ಶಾಲಾ ಸಂಚಾಲಕ ಇಸ್ಮಾಯಿಲ್ ಹಾಜಬ್ಬ, ಸದಸ್ಯರಾದ ಹಾಜಿ ಜೈನುದ್ದೀನ್, ದಾಸ್ ಸೇವಾ ಟ್ರಸ್ಟಿನ ಅಧ್ಯಕ್ಷ ಅನಿಲ್‌ದಾಸ್, ಫಾರೂಕ್ ಯು.ಎಚ್, ಇಖ್ರಾ ಚಾರಿಟೇಬಲ್ ಅಧ್ಯಕ್ಷ  ಮುಹಮ್ಮದ್ ಯು.ಬಿ., ರಿಯಾಝ್ ಕಡುಂಬು, ಝಾಕಿರ್ ಉಳ್ಳಾಲ, ಇಸ್ಮಾಯಿಲ್ ಉಳ್ಳಾಲ, ಸುಮತಿ ಹೆಗ್ಡೆ, ಸಂದೀಪ್ ಜಿ., ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲ, ಹಮೀದ್ ಕೋಡಿ, ರಮೀಝ್ ಹಳೆಕೋಟೆ ಕೆ.ಎಂ.ಕೆ. ಮಂಜನಾಡಿ, ರಫೀಕ್, ನ್ಯಾಯವಾದಿ ಅಸ್ಗರ್ ಮುಡಿಪು, ಹುಸಾಮುದ್ದೀನ್ ಹಳೆಕೊಟೆ, ಫಾರೂಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News