ಜೂ.24: ವಿದ್ಯುತ್ ವ್ಯತ್ಯಯ
Update: 2022-06-22 22:31 IST
ಮಂಗಳೂರು : ನಗರದ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ ಮಾರ್ಕೆಟ್ ಮತ್ತು ವಿವೇಕ್ ಮೋಟಾರ್ ಫೀಡರ್‌ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ನಡೆಯಲಿರುವುದರಿಂದ ಜೂ.೨೪ರ ಬೆಳಗ್ಗೆ ೧೦ರಿಂದ ೫ರವರೆಗೆ ಲೇಡಿಗೋಷನ್ ಆಸ್ಪತ್ರೆ, ಸೆಂಟ್ರಲ್ ಮಾರ್ಕೆಟ್, ಜೆಎಚ್‌ಎಸ್ ರಸ್ತೆ, ಪಿ.ಎಂ. ರಾವ್ ರೋಡ್, ಗೌರಿ ಮಠ ರೋಡ್, ರಾಘವೇಂದ್ರ ಮಠ ರೋಡ್, ಮೈದಾನ್ ೩ನೇ ಕ್ರಾಸ್, ಮೈದಾನ್ ೪ನೇ ಕ್ರಾಸ್, ಬೀಬಿ ಅಲಾಬಿ ರಸ್ತೆ, ರಾವ್ ಆ್ಯಂಡ್ ರಾವ್ ಸರ್ಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ಜೂ.೨೪ರ ಬೆಳಗ್ಗೆ ೧೦ರಿಂದ ಸಂಜೆ ೪ರವರೆಗೆ ಶಿವಭಾಗ್ ೧ನೇ ಕ್ರಾಸ್, ೨ನೇ ಕ್ರಾಸ್, ೩ನೇ ಕ್ರಾಸ್, ೪ನೇ ಕ್ರಾಸ್, ೫ನೇ ಕ್ರಾಸ್ ಮತ್ತು ೬ನೇ ಕ್ರಾಸ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದ್ಯುತ್ ನಿಲುಗಡೆ ಮಾಡಲಾಗುವುದುನ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.