×
Ad

ಬಜ್ಪೆ; ಗಾಂಜಾ ಮಾರಾಟ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Update: 2022-06-22 23:30 IST

ಬಜ್ಪೆ : 5 ವರ್ಷಗಳ ಹಿಂದೆ ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾಮದ ನಿವಾಸಿ ಜಾಕೀರ್ ಹುಸೈನ್ (29) ಗುರುತಿಸಲಾಗಿದೆ.

ಈತನ ವಿರುದ್ಧ ಮಂಗಳೂರಿನ ಮುಲ್ಕಿ ಠಾಣೆಯಲ್ಲಿ ಕೊಲೆ ಮತ್ತು ದರೋಡೆ ಸೇರಿ ಒಟ್ಟು 3 ಪ್ರಕರಣಗಳು, ಬಂದರು ಠಾಣೆಯಲ್ಲಿ 2 ಪ್ರಕರಣಗಳು,  ಪಾಂಡೇಶ್ವರ ಠಾಣೆಯಲ್ಲಿ 2 ಪ್ರಕರಣಗಳು, ಮೂಡಬಿದ್ರೆ ಠಾಣೆಯಲ್ಲಿ  1 ಪ್ರಕರಣ ದಾಖಲಾಗಿರುತ್ತವೆ.

ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಬಜ್ಪೆ ಠಾಣೆ ಪಿಎಸ್ಸೈ ಗುರುಕಾಂತಿ, ಹೆಡ್ ಕಾನ್ ಸ್ಟೇಬಲ್ ರೋಹಿತ್ ಪಾವಂಜೆ ಮತ್ತು ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ ಶ್ರಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News