ಹಸಿರು ಬಾದಾಮಿಯನ್ನು ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತೇ ?

Update: 2022-06-26 03:05 GMT

ಪ್ರತಿ ದಿನ ನೆನೆಸಿದ ಬಾದಾಮಿ ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ಪೌಷ್ಟಿಕಾಂಶ ತಜ್ಞರು ಸಾಕಷ್ಟು ಹೇಳಿದ್ದಾರೆ. ಆದರೆ ಹಸಿರು ಬಾದಾಮಿ ಕೂಡ ಹೆಚ್ಚಿನ ಪೌಷ್ಟಿಕಾಂಶ ಹೊಂದಿದೆ. ತೂಕ ಕಡಿಮೆಯಾಗುವುದರಿಂದ ಹಿಡಿದು ಉತ್ತಮ ರೋಗನಿರೋಧಕ ಶಕ್ತಿ ಹೆಚ್ಚಳ ಸೇರಿದಂತೆ ಹಸಿರು ಬಾದಾಮಿ ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ.

ಹಸಿರು ಬಾದಾಮಿಗಳು ಸಿಹಿ ಬಾದಾಮಿ ಮರದ ಅಪಕ್ವವಾದ ಹಣ್ಣುಗಳಾಗಿವೆ, ಹೊರ ಕವಚವು ಗಟ್ಟಿಯಾಗುವ ಮೊದಲು ಮತ್ತು ಒಳಗಿರುವ ವಸ್ತು ಸಂಪೂರ್ಣವಾಗಿ ಬೆಳೆಯುವ ಮೊದಲು ಮೃದುವಾಗಿರುವಾಗ ಅದನ್ನು ಕೊಯ್ಲು ಮಾಡಲಾಗುತ್ತದೆ. 

ಹಸಿರು ಬಾದಾಮಿಯನ್ನು ತಿನ್ನುವುದರಿಂದ ಹಲವು ಪ್ರಯೋಜನಗಳಿವೆ.

 ಫೈಬರ್ ಅಧಿಕ

 ಹಸಿರು ಬಾದಾಮಿಯು ಫೈಬರ್‌ನಿಂದ ಕೂಡಿದೆ, ಇದು ಮಲಬದ್ಧತೆ ಮತ್ತು ಕರುಳಿನ ಆರೋಗ್ಯಕ್ಕೆ ಉತ್ತಮವಾಗಿದೆ. ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ.

ಕೊಲೆಸ್ಟ್ರಾಲ್

ಹಸಿರು ಬಾದಾಮಿ ಸೇವನೆಯು ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇವುಗಳು ಅಪರ್ಯಾಪ್ತ ಕೊಬ್ಬನ್ನು ಹೊಂದಿರುತ್ತವೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

 ಉತ್ಕರ್ಷಣ ನಿರೋಧಕಗಳ ಆಗರ

 ಹಸಿರು ಬಾದಾಮಿಯಲ್ಲಿ ವಿಟಮಿನ್ - ಇ  ಹೆಚ್ಚು ಇದೆ ಮತ್ತು ಉತ್ತಮ ಉತ್ಕರ್ಷಣ ನಿರೋಧಕವಾಗಿದೆ.  ಇದು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಹೃದಯ ಸ್ನೇಹಿ

 ಹಸಿರು ಬಾದಾಮಿಯು ಫ್ಲೇವನಾಯ್ಡ್‌ಗಳನ್ನು ಹೊಂದಿರುತ್ತದೆ ಮತ್ತು ದೇಹದಲ್ಲಿ ಉತ್ಕರ್ಷಣ ನಿರೋಧಕಗಳ ಶಕ್ತಿಯನ್ನು ಹೆಚ್ಚಿಸುತ್ತದೆ, ಇದು ಹೃದಯದ ತೊಂದರೆಗಳ ಅಪಾಯವನ್ನು ಕಡಿಮೆ ಮಾಡಲು ಇದು ಅತ್ಯುತ್ತಮ ಆಹಾರವಾಗಿದೆ.


 ತ್ವಚೆಗೆ ಉತ್ತಮ

 ಹಸಿರು ಬಾದಾಮಿಯ ತ್ವಚೆಯ ಸೌಂದರ್ಯವನ್ನೂ ಕಾಪಾಡುತ್ತದೆ.  ಇದು ನಮ್ಮ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ, ಇದು ಚರ್ಮಕ್ಕೆ ಕಾಂತಿ ಮತ್ತು ಮೃದುತ್ವವನ್ನು ನೀಡುತ್ತದೆ.


 ಕೂದಲಿಗೆ ಮದ್ದು

 ಹಸಿರು ಬಾದಾಮಿಯನ್ನು ನಮ್ಮ ಆಹಾರದಲ್ಲಿ ಸೇರಿಸುವುದರಿಂದ ನಮ್ಮ ಕೂದಲಿನ ಬೆಳವಣಿಗೆ ಮತ್ತು ರಚನೆಗೆ ತುಂಬಾ ಪ್ರಯೋಜನಕಾರಿಯಾಗಿದೆ.  ಇದರ ಹೆಚ್ಚಿನ ಪ್ರೋಟೀನ್ ಅಂಶವು ಕೂದಲ ಬೆಳವಣಿಗೆಗೆ ಮ್ಯಾಜಿಕ್ ಆಗಿ ಕೆಲಸ ಮಾಡುತ್ತದೆ.

 
 ರೋಗನಿರೋಧಕ ಶಕ್ತಿ

 ನಮ್ಮ ಹಿರಿಯರು ನಮಗೆ ಬಾಲ್ಯದಿಂದಲೂ ಬಾದಾಮಿಯನ್ನು ದಿನವೂ ತಿನ್ನುವಂತೆ ಪೀಡಿಸುತ್ತಿದ್ದರಲ್ಲವೇ?  ಕಾರಣ ಬಾದಾಮಿಯನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News