ನಾಗುರಿ: ಒಕಿನಾವ ಶೋರೂಮ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌

Update: 2022-06-24 05:55 GMT

ಮಂಗಳೂರು, ಜೂ. 24: ನಗರ ಹೊರವಲಯದ ಪಡೀಲ್ ಅಳಪೆ ಸಮೀಪದ ನಾಗುರಿ ಬಳಿಯ ಕಟ್ಟಡವೊಂದರಲ್ಲಿದ್ದ ಇಲೆಕ್ಟ್ರಿಕ್ ಸ್ಕೂಟರ್‌ನ "ಒಕಿನಾವ" ಶೂರೂಮ್‌ನಲ್ಲಿ ಇಂದು ಬೆಳಗ್ಗೆ ಅಗ್ನಿ ಅನಾಹುತ ಸಂಭವಿಸಿದೆ. 

ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅನಾಹುತ ಸಂಭವಿಸಿದೆ ಎಂದು‌ ಹೇಳಲಾಗುತ್ತಿದ್ದು, ಇದರಿಂದ ಹಲವು ಸ್ಕೂಟರ್‌ಗಳು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಇಂದು ಬೆಳಗ್ಗೆ ಸುಮಾರು 8 ಗಂಟೆಗೆ ಶೋರೂಮ್‌ನಲ್ಲಿ ಹೊಗೆ ಕಾಣಿಸಿದೆ. ಶೋರೂಮ್‌ನ ಮೇಲ್ಗಡೆ ಹಮೀದ್ ಎಂಬವರ ಮನೆಯಿದ್ದು, ಹೊಗೆಯಾಡುತ್ತಿರುವುದನ್ನು ಕಂಡ ಮನೆ ಮಂದಿ ಕೆಳಗಿಳಿದು ಬಂದಾಗ ಶೋರೂಮ್‌ನಲ್ಲಿದ್ದ ಸ್ಕೂಟರ್‌ಗಳು ಬೆಂಕಿಗೆ ಆಹುತಿಯಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗ ಬೆಂಕಿ ನಂದಿಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News