ಪ್ರಧಾನಿ ಭೇಟಿಗಾಗಿ ಅಭಿವೃದ್ಧಿಪಡಿಸಿದ ರಸ್ತೆ ಕುಸಿತ; ಮೂವರು ಎಂಜಿನಿಯರ್​ಗಳಿಗೆ ಬಿಬಿಎಂಪಿಯಿಂದ ಶೋಕಾಸ್​ ನೋಟಿಸ್​

Update: 2022-06-24 05:41 GMT
ಫೈಲ್ ಚಿತ್ರ

ಬೆಂಗಳೂರು:  ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ರಾಜಧಾನಿ ಬೆಂಗಳೂರಿನಲ್ಲಿ ಅಭಿವೃದ್ಧಿ ಪಡಿಸಲಾಗಿದ್ದ ರಸ್ತೆ ಕುಸಿದಿದ್ದು, ಈ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿ ನಿರ್ವಹಿಸಿದ್ದ ಬಿಬಿಎಂಪಿಯ ಮೂವರು ಎಂಜಿನಿಯರ್​ಗಳಿಗೆ  ಬಿಬಿಎಂಪಿ  ಶೋಕಾಸ್​ ನೋಟಿಸ್​ ಕೊಟ್ಟಿದೆ.

ಆರ್​​.ಆರ್​​​.ನಗರ ಎಕ್ಸಿಕ್ಯೂಟಿವ್​ ಎಂಜಿನಿಯರ್​ ಎಂ.ಟಿ.ಬಾಲಾಜಿ, ಆರ್​​​.ಆರ್​​​.ನಗರದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್​ ಎಂಜಿನಿಯರ್​​ ಹೆಚ್​.ಜೆ.ರವಿ, ಆರ್​​.ಆರ್​​​.ನಗರ ಅಸಿಸ್ಟೆಂಟ್​ ಎಂಜಿನಿಯರ್​​ ಐ.ಕೆ.ವಿಶ್ವಾಸ್​ಗೆ ನೋಟಿಸ್​ ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಜೂ. 20ರಂದು ಬೆಂಗಳೂರಿಗೆ ಬಂದಿದ್ದರು. ಪ್ರಧಾನಿ ಮೋದಿ ಸಾಗುವ ರಸ್ತೆ ಅಭಿವೃದ್ಧಿಗಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸುಮಾರು 24 ಕೋಟಿ ರೂ ವೆಚ್ಚ ಮಾಡಿತ್ತು. ಈ ಪೈಕಿ ಜ್ಞಾನಭಾರತಿಯ ಡಾ.ಬಿ.ಆರ್. ಅಂಬೇಡ್ಕರ್‌ ಸ್ಕೂಲ್ ಆಫ್‌ ಎಕಾನಮಿಕ್ಸ್‌ (ಬೇಸ್‌) ಕ್ಯಾಂಪಸ್‌ ಬಳಿ 6 ಕೋಟಿ ರೂ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ಇದೇ ರಸ್ತೆ ಇದೀಗ ಕುಸಿದು ಹೋಗಿದೆ. 

ಇದೀಗ ರಸ್ತೆ ಕಾಮಗಾರಿ ನಿರ್ವಹಿಸಿದ್ದ ಮೂವರು ಇಂಜಿನಿಯರ್ ಗಳಿಗೆ ಬಿಬಿಎಂಪಿಯ ರೋಡ್​ ಇನ್​ಫ್ರಾಸ್ಟ್ರಕ್ಚರ್​​​​ ಚೀಫ್​​ ಎಂಜಿನಿಯರ್​ರಿಂದ ಶೋಕಾಸ್ ನೋಟಿಸ್​ ನೀಡಲಾಗಿದೆ.

ಇದನ್ನೂ ಓದಿ... ರಾಷ್ಟ್ರಪತಿ, ಪ್ರಧಾನಿ ಬಂದರಷ್ಟೇ ರಸ್ತೆ ದುರಸ್ತಿ ಕೈಗೊಳ್ಳುತ್ತೀರಾ?: ಬಿಡಿಎ ವಿರುದ್ಧ ಹೈಕೋರ್ಟ್ ಅಸಮಾಧಾನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News