ಬೆಂಗಳೂರು | ವಂಚನೆ ಪ್ರಕರಣ: ಮೂವರ ಬಂಧನ, ನಕಲಿ ಸಿಮ್ ಕಾರ್ಡ್, ಮೊಬೈಲ್ ವಶ

Update: 2022-06-24 12:17 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.24: ಸ್ಥಳೀಯರ ಹೆಸರಿನಲ್ಲಿ ನಕಲಿ ಸಿಮ್‍ಕಾರ್ಡ್, ಬ್ಯಾಂಕ್ ಖಾತೆಗಳನ್ನು ಬಳಕೆ ಮಾಡಿಕೊಂಡು ಸೈಬರ್ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆಫ್ರಿಕನ್ ಮೂಲದ ಆರೋಪಿಗಳು ಸೇರಿ ಮೂವರನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೆÇಲೀಸರು ಬಂಧಿಸಿದ್ದಾರೆ. 

ಬಂಧಿತರನ್ನು ಆಫ್ರಿಕಾ ಮೂಲದ ಫಾಸೋಯಿನ್ ಅವಲೋಹೋ ಅಡೆಯಿಂಕಾ(32), ಅಡ್ಜೆ ಅಂಗೇ ಆಲ್ಫ್ರೆಡ್ ಅಡೋನಿ(23) ಹಾಗೂ ತ್ರಿಪುರಾ ಮೂಲದ ಮೋನಿಕುಮಾರ್ ಕಾಯ್ ಪೆಂಗ್(23) ಎಂದು ಗುರುತಿಸಲಾಗಿದೆ. 

ನಕಲಿ ಸಿಮ್ ಕಾರ್ಡ್, ನಕಲಿ ಬ್ಯಾಂಕ್ ಖಾತೆಗಳನ್ನೇ ಬಂಡವಾಳವಾಗಿಸಿಕೊಳ್ಳುತ್ತಿದ್ದ ಆಫ್ರಿಕಾ ಮೂಲದ ಆರೋಪಿಗಳು ಉದ್ಯೋಗ, ಲೋನ್ ಕೊಡಿಸುವುದಾಗಿ, ಲಾಟರಿ, ಗಿಫ್ಟ್ ಬಂದಿರುವುದಾಗಿ ಹೇಳುವ ಮೂಲಕ ಕರ್ನಾಟಕ ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳ ವ್ಯಕ್ತಿಗಳಿಗೆ ಕರೆ ಮಾಡಿ ನಕಲಿ ಖಾತೆಗಳಿಗೆ ಹಣ ಹಾಕಿಸಿಕೊಂಡು ವಂಚಿಸುತ್ತಿದ್ದರು.

ಸದ್ಯ ವಂಚನೆಯ ಜಾಲ ಬಯಲಿಗೆಳೆದಿರುವ ಪೊಲೀಸರು ಬಂಧಿತ ಮೋನಿಕುಮಾರ್‍ನಿಂದ 1 ಮೊಬೈಲ್, 2 ಸಿಮ್ ಕಾರ್ಡ್ ಹಾಗೂ ಆಫ್ರಿಕಾ ಮೂಲದ ಆರೋಪಿಗಳಿಂದ 4 ಡೆಬಿಟ್ ಕಾಡ್ರ್ಸ್, 4 ಸಿಮ್ ಕಾಡ್ರ್ಸ್, 3 ಮೊಬೈಲ್ ಫೋನ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಮೊಕದ್ದಮೆ ದಾಖಲಿಸಿಕೊಂಡಿರುವ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News