ಅಮೆರಿಕದ ಬಿಲ್‌ಬೋರ್ಡ್‌ನಲ್ಲಿ ಕಾರ್ಟೂನಿಸ್ಟ್ ಸತೀಶ್ ಆಚಾರ್ಯರ ಕಲಾಕೃತಿ ಪ್ರದರ್ಶನ

Update: 2022-06-24 16:36 GMT

ಕುಂದಾಪುರ : ಅಮೆರಿಕದ ಎನ್‌ಎಫ್‌ಟಿ ಡಾಟ್ ಎನ್‌ವೈಸಿ ಸಂಸ್ಥೆಯು ನ್ಯೂಯಾರ್ಕ್ ಸಿಟಿಯ ಪ್ರತಿಷ್ಠಿತ ಟೈಮ್ಸ್ ಸ್ಕ್ವೇರ್‌ನಲ್ಲಿ ಏರ್ಪಡಿಸಲಾಗಿದ್ದ ಎನ್‌ಎಫ್‌ಟಿ ಕಲಾಕೃತಿಗಳ ಪ್ರದರ್ಶನದಲ್ಲಿ ಕುಂದಾಪುರದ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಅವರ ಕಲಾಕೃತಿಯೂ ಪ್ರದರ್ಶನಗೊಂಡಿದೆ.

ಜೂ.20ರಿಂದ 23ರತನಕ ನಡೆದ ಈ ಪ್ರದರ್ಶನದಲ್ಲಿ ಜಗತ್ತಿನ ಸಾವಿರಾರು ಕಲಾಕೃತಿಗಳನ್ನು ಕಳುಹಿಸಿದ್ದು, ಈ ಪೈಕಿ ಆಯ್ದ 200ರಷ್ಟು ಕಲಾಕೃತಿಗಳು ಟೈಮ್ಸ್ ಸ್ಕ್ವೇರ್‌ನ ಬಿಲ್‌ಬೋರ್ಡ್‌ನಲ್ಲಿ ಪ್ರದರ್ಶನಗೊಂಡಿದೆ.

ಅದರಲ್ಲಿ ಸತೀಶ್ ಆಚಾರ್ಯರ ಐ ಕೇರ್ ಹೆಸರಿನ ಎನ್‌ಎಫ್‌ಟಿ ಕಲಾ ಕೃತಿಯೂ ಸೇರಿದೆ. ಆಧುನಿಕತೆಯತ್ತ ದಾಪುಗಾಲು ಹಾಕುತ್ತ ಸಾಗುತ್ತಿರುವ ಈ ದಿನಗಳಲ್ಲಿ ಮಾನವನಿಗಿಂತ ಮೆಷಿನ್ ಹೆಚ್ಚು ಮಾನವೀಯತೆ ತೋರಿದರೂ ಆಶ್ಚರ್ಯವಿಲ್ಲ ಎಂದ ಸಂದೇಶವನ್ನು ಈ ಕಲಾಕೃತಿ ನೀಡುತ್ತದೆ ಎಂದು ಕಲಾವಿದರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News