ಬೆಂಗಳೂರು | ವಂಚನೆ ಪ್ರಕರಣ: 120 ಆ್ಯಪ್‍ಗಳನ್ನು ತೆಗೆಯುವಂತೆ ಪ್ಲೇಸ್ಟೋರ್ ಗೆ ಮನವಿ

Update: 2022-06-24 15:24 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.24: ಆನ್‍ಲೈನ್‍ನಲ್ಲಿ ಕನಿಷ್ಠ ಬಡ್ಡಿದರದಲ್ಲಿ ಸಾಲ ಕೊಡುವುದಾಗಿ ವಂಚಿಸುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ವಿಭಾಗದ ಸಿಇಎನ್ ಪೊಲೀಸರು, ಇಂತಹ 120 ವಂಚಕ ಆ್ಯಪ್‍ಗಳನ್ನು ಗುರುತಿಸಿ ತೆಗೆದುಹಾಕುವಂತೆ ಗೂಗಲ್ ಪ್ಲೇ ಸ್ಟೋರ್ ಗೆ ಪತ್ರ ರವಾನಿಸಿದ್ದಾರೆ.

ಮೊದಲಿಗೆ ಕಡಿಮೆ ಬಡ್ಡಿಗೆ ಸಾಲ ನೀಡುವುದಾಗಿ ಆಸೆ ತೋರಿಸುವುದು, ನಂತರ ಅದಕ್ಕೆ ಹೆಚ್ಚಿನ ದರದಲ್ಲಿ ಬಡ್ಡಿ ಪಡೆಯುವುದು, ಕಟ್ಟದೇ ಹೋದರೆ ಬೆದರಿಕೆ ಹಾಕುವುದು. ಇದರಿಂದ ಆತ್ಮಹತ್ಯೆ ಮಾಡಿಕೊಂಡಿರುವಂತಹ ಪ್ರಕರಣಗಳೂ ಬೆಳಕಿಗೆ ಬಂದಿವೆ.

ಈ ಹಿನ್ನೆಲೆಯಲ್ಲಿ ಇಂತಹ 120 ವಂಚಕ ಆ್ಯಪ್‍ಗಳನ್ನು ಗುರುತಿಸಿ, ಅವುಗಳನ್ನು ತೆಗೆದು ಹಾಕುವಂತೆ ಸಿಇಎನ್ ಪೊಲೀಸರು, ಪ್ಲೇ ಸ್ಟೋರ್‍ಗೆ ಪತ್ರ ಬರೆದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಲಾಕ್‍ಡೌನ್ ಆದಾಗ ಲೋನ್ ಆ್ಯಪ್‍ಗಳಿಂದ ಸಾಕಷ್ಟು ಜನ ತೊಂದರೆ ಅನುಭವಿಸಿದ್ದು ಆತ್ಮಹತ್ಯೆಗೆ ಶರಣಾದಂತಹ ಘಟನೆಗಳು ಸಹ ವರದಿಯಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News