ಸುಳ್ಯ ತಾಲೂಕಿನಲ್ಲಿ ಕಂಪಿಸಿದ ಭೂಮಿ

Update: 2022-06-25 07:18 GMT

ಸುಳ್ಯ: ಸುಳ್ಯ ತಾಲೂಕಿನ ಹಲವು ಕಡೆಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿರುವ ಬಗ್ಗೆ ಸಾರ್ವಜನಿಕರು ಹೇಳಿದ್ದಾರೆ.‌

ಇಂದು ಬೆಳಗ್ಗೆ 9.10, 9.11ರ ಸಮಯದಲ್ಲಿ ಲಘು ಕಂಪನದ‌‌ ಅನುಭವ ಆಗಿದೆ. ಹಲವೆಡೆ ವಿಚಿತ್ರ ಶಬ್ದದೊಂದಿಗೆ ಭೂಮಿ ಕಂಪಿಸಿರುವ ಬಗ್ಗೆ ಸಾರ್ವಜನಿಕರು ಅನುಭವ ಹಂಚಿಕೊಂಡಿದ್ದಾರೆ.

ಕಲ್ಲುಗುಂಡಿ, ಸಂಪಾಜೆ, ಗೂನಡ್ಕ, ಅಡ್ತಲೆ, ಅರಂತೋಡು, ಅರಂಬೂರು ಮತ್ತಿತರ ಭಾಗಗಳಲ್ಲಿ ಗುಡುಗಿನ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ. ಗೂನಡ್ಕದ ಕಚೇರಿಯಲ್ಲಿ ಕುಳಿತಿದ್ದಾಗ ಭಾರೀ ಶಬ್ದದೊಂದಿಗೆ ಸುಮಾರು 3 ಸೆಕೆಂಡುಗಳ ಕಾಲ ಕಂಪನ ಆದ ಅನುಭವ ಆಗಿದೆ. ಯಾವುದೋ ವಾಹನ ಬಂದು ಕಚೇರಿಗೆ ಗುದ್ದಿದಂತೆ ಭಾಸವಾಗಿ ಹೊರ ಬಂದೆ ಎನ್ನುತ್ತಾರೆ ರಹೀಂ ಬೀಜದಕಟ್ಟೆ.

ಸುಳ್ಯ ನಗರ ವ್ಯಾಪ್ತಿಯಲ್ಲಿಯೂ ಲಘು ಕಂಪನ ಆಗಿದೆ. ಬೀರಮಂಗಲ ಭಾಗದಲ್ಲಿ ಗುಡುಗಿನ ಶಬ್ದದೊಂದಿಗೆ ಸುಮಾರು 4-5 ಸೆಕೆಂಡು ಕಂಪನ ಆಗಿದೆ ಎಂದು ಆರ್.ಕೆ.ಭಟ್ ಅನುಭವ ಹಂಚಿಕೊಂಡಿದ್ದಾರೆ. ತಾಲೂಕಿನ ವಿವಿಧ ಭಾಗಗಳಲ್ಲಿ ಕಂಪನದ ಅನುಭವ ಆಗಿರುವ ಬಗ್ಗೆ ಸಾರ್ವಜನಿಕರು ಹೇಳಿಕೊಂಡಿದ್ದಾರೆ.

ಸುಳ್ಯದಲ್ಲಿ ಭೂ ಕಂಪಿಸಿದ ಬಗ್ಗೆ ರೆಕ್ಟರ್ ಮಾಪನದಲ್ಲಿ ದಾಖಲಾದ ಪ್ರಮಾಣ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News