ಉಳ್ಳಾಲ ಕಡಲ ತೀರದಲ್ಲಿ ಅಣಕು ಕಾರ್ಯಾಚರಣೆ

Update: 2022-06-26 15:22 GMT

ಮಂಗಳೂರು : ಉಳ್ಳಾಲ ತಾಲೂಕಿನ ಸೋಮೇಶ್ವರ ಗ್ರಾಮದ ಬಟ್ಟಪ್ಪಾಡಿ ಬಳಿಯ ಸಮುದ್ರದಲ್ಲಿ ಎಂವಿ ಪ್ರಿನ್ಸಸ್ ಮಿರಾಲ್  ಎಂಬ ಹಡಗು ಮುಳುಗಡೆಯಾದ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಕುರಿತು ದ.ಕ.ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಉಳ್ಳಾಲ ಕಡಲ ತೀರದಲ್ಲಿ ರವಿವಾರ ಅಣಕು ಪ್ರದರ್ಶನವನ್ನು ನಡೆಸಲಾಯಿತು.

ಅಗ್ನಿ ಶಾಮಕ ದಳ, ರಾಜ್ಯ ವಿಪತ್ತು ಸ್ಪಂದನಾ ಪಡೆ, ಗೃಹರಕ್ಷಕ ಪಡೆ, ಮೀನುಗಾರರು, ವಿವಿಧ ಕೈಗಾರಿಕೆಗಳ ಸುಮಾರು ೨೦೦ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕೋಸ್ಟ್ ಗಾರ್ಡ್ ಅಧಿಕಾರಿಗಳು ಸಹಕಾರ ನೀಡಿದರು.

ಸಮುದ್ರದಲ್ಲಿ ತೈಲ ಸೋರಿಕೆಯಾದ ಸಂದರ್ಭ ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮ ಹಾಗೂ ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ಪ್ರದರ್ಶನ ನಡೆಸಲಾಯಿತು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ, ಫ್ಯಾಕ್ಟರಿಸ್ ಮತ್ತು ಬಾಯ್ಲರ್ಸ್ ಇಲಾಖೆಯ ಉಪ ನಿರ್ದೇಶಕರು, ಉಳ್ಳಾಲ ನಗರಸಭೆ, ಉಳ್ಳಾಲ ತಹಶೀಲ್ದಾರ್, ಲೋಕೋಪಯೋಗಿ, ಮೆಸ್ಕಾಂ, ಆರೋಗ್ಯ, ಪೊಲೀಸ್, ಮಿನುಗಾರಿಕೆ  ಇಲಾಖೆ, ಮುಖ್ಯ ಅಗ್ನಿಶಾಮಕ ದಳದ ಅಧಿಕಾರಿ, ಜಿಲ್ಲಾ ಅಗ್ನಿ ಶಾಮಕ ದಳದ ಅಧಿಕಾರಿ, ಹೋಮ್‌ಗಾರ್ಡ್ ಕಮಾಂಡೆಂಟ್ ಸಿಆರ್‌ಜೆಡ್ ಹಾಗೂ  ಜಿಲ್ಲಾ ವಿಪತ್ತು ನಿರ್ವಹಣಾ ಪರಿಣತ ವಿಜಯ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News