VIDEO- ದೌರ್ಜನ್ಯ ಖಂಡಿಸಿದರೆ, ಬುಲ್ಡೋಜರ್ ದಾಳಿ ನಡೆಸುತ್ತಿದ್ದಾರೆ: ನ್ಯಾ.ನಾಗಮೋಹನ್ ದಾಸ್

Update: 2022-06-26 17:30 GMT

ಬೆಂಗಳೂರು, ಜೂ. 25: ‘ದೌರ್ಜನ್ಯಗಳಿಗೆ ಪ್ರತಿರೋಧ ಒಡ್ಡಿದಾಗ ಕಾನೂನುಗಳಡಿ ಬಂಧಿಸುತ್ತಿದ್ದು, ಎನ್‍ಕೌಂಟರ್‍ಗಳನ್ನು ಮಾಡುತ್ತಿದ್ದರು. ಆದರೆ, ಈಗ ಮನೆಗಳ ಮೇಲೆ ಬುಲ್ಡೋಜರ್ ದಾಳಿ ನಡೆಸುತ್ತಿದ್ದಾರೆ' ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಕಿಡಿಕಾರಿದ್ದಾರೆ.

ರವಿವಾರ ನಗರದ ರವಿಂದ್ರ ಕಲಾಕ್ಷೇತ್ರದಲ್ಲಿ ಮಾತನಾಡಿದ ಅವರು, ‘ಇತ್ತೀಚಿಗೆ ಸಂವಿಂಧಾನದ ಆಶಯಗಳಿಗೆ ಮಸಿ ಬಳಿಯಲಾಗುತ್ತಿದೆ. ಹಾಗಾಗಿ ಹೋರಾಟಗಳ ಮುಖಾಂತರ ಸಮಸ್ಯೆಗಳನ್ನು ಬಗೆಹರಿಸಬೇಕು. ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಇಂದು ದೇಶದ ಮೂಲೆಗಳಲ್ಲಿ ಅಸಹನೆ ಹರಡಿದೆ. ಭಾಷೆ, ಆಹಾರ, ವಸ್ತ್ರ, ಆಚಾರ-ವಿಚಾರದ ವಿಷಯಗಳಲ್ಲಿ ಅಸಹನೆ ಉಂಟಾಗಿದೆ.ಸಂವಿಧಾನದ ಬಗ್ಗೆ ತಿಳುವಳಿಕೆ ಇಲ್ಲದವರು, ಮೀಸಲಾತಿಬಗ್ಗೆ ತಪ್ಪು ತಿಳುವಳಿಕೆಯನ್ನು ಇಟ್ಟುಕೊಂಡಿದ್ದಾರೆ ಎಂದರು. 

ಹಿರಿಯ ಪರ್ತಕರ್ತ ಬಿ.ಎಂ.ಹನೀಫ್ ಮಾತನಾಡಿ, ‘ಮುಸ್ಲಿಮರು ಹೆಚ್ಚಾಗಿರುವ ಕ್ಷೇತ್ರಗಳಲ್ಲಿ ಪರಿಶಿಷ್ಟ ಸಮುದಾಯಗಳಿಗೆ ಮೀಸಲಾತಿಯನ್ನು ನೀಡಲಾಗಿದೆ. ಇದು ಹೊಡೆದು ಆಳುವ ಷಡ್ಯಂತ್ರ ಎಂದರು. 

ಹಿರಿಯ ಆರ್ಥಿಕ ತಜ್ಞ ಚಂದ್ರಶೇಖರ್ ಮಾತನಾಡಿ, ‘ಆಳುವ ವರ್ಗ ಮೀಸಲಾತಿಯನ್ನು ದುರ್ಬಲಗೊಳಿಸಿದೆ. ಪ್ರಧಾನಿ ಮೋದಿ ‘75 ವರ್ಷಗಳಿಂದ ದೇಶದ ಜನರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿ ವ್ಯರ್ಥ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಜನರು ಕರ್ತವ್ಯ ಮತ್ತು ಜವಾಬ್ದಾರಿಯ ಬಗ್ಗೆ ಯೋಚಿಸಬೇಕು’ ಎಂದು ಹೇಳಿದ್ದಾರೆ. ಇದರ ಹುನ್ನಾರವನ್ನು ನಾವು ಬೇಗ ಹರಿತುಕೊಳ್ಳುವುದು ಉತ್ತಮ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಪರಿವರ್ತನೆಯ ಕಾಲದಲ್ಲಿ ಮಹಾಕಾವ್ಯಗಳು ಹುಟ್ಟುತ್ತವೆ. ಹರಿಕತೆ, ಗಿರಿಕತೆಗಳಾಗಿ ಜನ ಸಾಮಾನ್ಯರನ್ನು ತಲುಪಿವೆ. ಹಾಗಾಗಿ ಸಂವಿಧಾನವನ್ನು ಕಾವ್ಯರೂಪದಲ್ಲಿ ಕಾಪಾಡಿಕೊಳ್ಳಬೇಕು. ಸಂವಿಧಾನವನ್ನು ಸಾಮಾನ್ಯ ಜನರಿಗೆ ತಲುಪಿಸಲು 20 ಕವಿಗಳು ರಾಗ ಸಂಯೋಜನೆ ಮಾಡಿ ಜನರಿಗೆ ತಲುಪಿಸುತ್ತೇವೆ'

-ಹಂಸಲೇಖ, ಸಂಗೀತ ನಿದೇರ್ಶಕ 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News