''ಸರಕಾರದ ಗೌರವಧನ ಕುಟುಂಬ ನಿರ್ವಹಣೆಗೂ ಸಾಲುತ್ತಿಲ್ಲ'': ಜೂ.29ರಂದು ವಿಶೇಷ ಶಾಲಾ ಶಿಕ್ಷಕರ ಪ್ರತಿಭಟನೆ

Update: 2022-06-27 13:10 GMT

ಬೆಂಗಳೂರು, ಜೂ.27: ಬುದ್ಧಿಮಾಂದ್ಯ ಹಾಗೂ ಅಂಗವಿಕಲರಿಗೆ ಶಿಕ್ಷಣವನ್ನು ನೀಡಲು ರಾಜ್ಯದಲ್ಲಿ ವಿಶೇಷ ಶಾಲೆಗಳನ್ನು ಸ್ಥಾಪಿಸಲಾಗಿದೆ. ಸರಕಾರೇತರ ಸಂಸ್ಥೆಗಳು ಇವುಗಳನ್ನು ನಡೆಸಿಕೊಂಡು ಹೋಗುತ್ತಿದ್ದು, ಸರಕಾರವು ಗೌರವಧನವನ್ನು ನೀಡುತ್ತದೆ. ಆದರೆ, ಈ ಗೌರವಧನ ಕುಟುಂಬ ನಿರ್ವಹಣೆಗೂ ಸಾಲುತ್ತಿಲ್ಲ. ಹಾಗಾಗಿ ಜೂ.29ರಂದು ಪ್ರತಿಭಟನೆ ಮಾಡಲು ಎಂದು ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕರ ಸಂಘ ಕರೆ ನೀಡಿದೆ.

ಬುಧವಾರ ಪ್ರೆಸ್‍ಕ್ಲಬ್‍ನಲ್ಲಿ ಸಂಘದ ಮುಖಂಡ ವಸಂತ್ ಕುಮಾರ್ ಶೆಟ್ಟಿ ಮಾತನಾಡಿ, ಸರಕಾರವು 2010ರಲ್ಲಿ ವಿಶೇಷ ಶಾಲಾ ಶಿಕ್ಷಕರಿಗೆ 6,500 ರೂ.ಗಳನ್ನು ಶಿಕ್ಷಕೇತರರಿಗೆ 4,500 ರೂ.ಗಳನ್ನು ಗೌರವಧನವಾಗಿ ಪಾವತಿ ಮಾಡುತ್ತಿತ್ತು. 2014ರಲ್ಲಿ ಇದನ್ನು ಪರಿಷ್ಕರಿಸಿ ಶಿಕ್ಷಕರಿಗೆ 13,500 ರೂ.ಗಳನ್ನು ಹಾಗೂ ಶಿಕ್ಷಕೇತರರಿಗೆ 9,500 ರೂ.ಗಳನ್ನು ಗೌರವಧನವಾಗಿ ನೀಡಲಾಗುತ್ತಿದೆ. ಇದು ಕುಟುಂಬ ನಿರ್ವಹಣೆಗೆ ಸಾಲುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು. 

ಸರಕಾರವು ವಿಶೇಷ ಶಾಲಾ ಶಿಕ್ಷಕರ ವೇತನವನ್ನು ಸರಕಾರವು ಪರಿಷ್ಕರಿಸಬೇಕು. ಗೌರವಧನವನ್ನು ಹೆಚ್ಚಳ ಮಾಡಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News