ಭಾರತದಲ್ಲಿ ತಾಲಿಬಾನ್ ಮನೋಸ್ಥಿತಿಗೆ ಅವಕಾಶ ಇಲ್ಲ: ಅಜ್ಮೀರ್ ದರ್ಗಾ ಮುಖ್ಯಸ್ಥರ ಸ್ಪಷ್ಟನುಡಿ

Update: 2022-06-29 07:25 GMT
ಝೈನುಲ್ ಅಬಿದಿನ್ ಅಲಿ ಖಾನ್

ಜೈಪುರ: ಉದಯಪುರದಲ್ಲಿ ನಡೆದ ಟೈಲರ್ ಹತ್ಯೆಯನ್ನು ಬಲವಾಗಿ ಖಂಡಿಸಿರುವ ಅಜ್ಮೀರ್ ದರ್ಗಾ ದೀವಾನ್ ಝೈನುಲ್ ಅಬಿದಿನ್ ಅಲಿ ಖಾನ್, "ದೇಶದಲ್ಲಿ ತಾಲಿಬಾನೀಕರಣ ಮನೋಸ್ಥಿತಿಯನ್ನು ಹರಿದು ಬಿಡಲು ಭಾರತದ ಮುಸ್ಲಿಮರು ಅವಕಾಶ ನೀಡುವುದಿಲ್ಲ" ಎಂದು ಹೇಳಿದ್ದಾರೆ.

ಇಬ್ಬರು ಶಸ್ತ್ರಧಾರಿಗಳು ಉದಯಪಯರದಲ್ಲಿ ಟೈಲರ್ ಒಬ್ಬರನ್ನು ಹತ್ಯೆ ಮಾಡಿ ಇಸ್ಲಾಂಗೆ ಮಾಡಿದ ಅವಮಾನಕ್ಕೆ ಪ್ರತೀಕಾರವಾಗಿ ಈ ಹತ್ಯೆ ನಡೆಸುತ್ತಿರುವುದಾಗಿ ಘೋಷಿಸುವ ವಿಡಿಯೊವನ್ನು ಆನ್‍ಲೈನ್‍ನಲ್ಲಿ ಪೋಸ್ಟ್ ಮಾಡಿದ್ದರು.

"ಮಾನವತೆಯ ವಿರುದ್ಧ ಯಾವ ಧರ್ಮವೂ ಹಿಂಸೆಗೆ ಪ್ರಚೋದಿಸುವುದಿಲ್ಲ. ಅದರಲ್ಲೂ ಇಸ್ಲಾಂ ಧರ್ಮದಲ್ಲಿ ಎಲ್ಲ ಬೋಧನೆಗಳು ಶಾಂತಿಯನ್ನು ಹರಡುವಂಥವು" ಎಂದು ಖಾನ್ ಹೇಳಿಕೆ ನೀಡಿದ್ದಾರೆ.

"ಇಂಟರ್‍ನೆಟ್‍ನಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಕೆಲ ಅನೈತಿಕ ಮನಸ್ಸುಗಳು ಬಡ ವ್ಯಕ್ತಿಯ ಮೇಲೆ ಅಮಾನುಷ ದಾಳಿ ನಡೆಸಿರುವುದನ್ನು ಇಸ್ಮಾಮಿಕ್ ಜಗತ್ತಿನಲ್ಲಿ ಶಿಕ್ಷಾರ್ಹ ಪಾಪ ಎಂದು ಪರಿಗಣಿಸಲಾಗುತ್ತದೆ" ಎಂದು ಸ್ಪಷ್ಟಪಡಿಸಿದ್ದಾರೆ.

ಆರೋಪಿಗಳು ಹಿಂಸೆಯ ಮಾರ್ಗದಿಂದ ಮಾತ್ರ ಪರಿಹಾರ ಸಾಧ್ಯ ಎಂಬ ಮೂಲಭೂತವಾದಿ ಸಂಘಟನೆಗಳಿಗೆ ಸೇರಿದವರು. ಇದನ್ನು ನಾವು ಸಹಿಸುವುದಿಲ್ಲ. ಸರ್ಕಾರ ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಮ್ಮ ಮಾತೃಭೂಮಿಯಲ್ಲಿ ತಾಲಿಬಾನೀಕರಣದ ಮನೋಸ್ಥಿತಿಯನ್ನು ಹರಡಲು ಭಾರತದ ಮುಸ್ಲಿಮರು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿರುವುದಾಗಿ ndtv.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News