​ಉಳ್ಳಾಲ: ಮತ್ತೆ ತೀವ್ರಗೊಂಡ ಕಡಲ್ಕೊರೆತ

Update: 2022-06-29 11:10 GMT

ಉಳ್ಳಾಲ: ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಉಳ್ಳಾಲ ಸೀ ಗ್ರೌಂಡ್ ಬಳಿ ಕಡಲ್ಕೊರೆತ ಮತ್ತೆ ತೀವ್ರ ಗೊಂಡಿದೆ.

ಸೀಗ್ರೌಂಡ್ ಸಮೀಪ ಸಮುದ್ರದ ಅಲೆ ರಸ್ತೆಗೆ ಅಪ್ಪಳಿಸುವ ಹಂತಕ್ಕೆ ತಲುಪಿದೆ. ತೆಂಗಿನ ಮರವೊಂದು ಸಮುದ್ರ ಪಾಲಾಗುವ ಸಾಧ್ಯತೆ ಇದೆ. ಸೀಗ್ರೌಂಡ್ ನಲ್ಲಿ 13ಕ್ಕೂ ಹೆಚ್ಚು ಮನೆಗಳು ಅಪಾಯದಂಚಿನಲ್ಲಿದ್ದು ಭೀತಿಯ ವಾತಾವರಣ ನಿರ್ಮಾಣವಾಗಿದೆ.

ಬಟ್ಟಂಪಾಡಿಯಲ್ಲಿ ಕಡಲ್ಕೊರೆತ ಜೋರಾಗಿದ್ದು, ಕೆಲವು ಮನೆಗಳು ಅಪಾಯ ದಂಚಿನಲ್ಲಿವೆ. ತಡೆಗೋಡೆಗೆ ಹಾಕಿದ ಕಲ್ಲು ಸಮುದ್ರ ಪಾಲಾಗಿವೆ. ಡಾಮರು ರಸ್ತೆಗೆ ಸಮುದ್ರದ ಅಲೆ ಅಪ್ಪಳಿಸುತ್ತಿದ್ದು, ಅರ್ಧ ರಸ್ತೆ ಸಮುದ್ರದ ಮಡಿಲು ಸೇರಿದೆ. ಘಟನಾ ಸ್ಥಳಕ್ಕೆ ಬುಧವಾರ ತಹಶೀಲ್ದಾರ್ ಗುರುಪ್ರಸಾದ್, ಗ್ರಾಮಕರಣಿಕ ಪ್ರಮೋದ್, ಸಹಾಯಕ ನವನೀತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಡಲ್ಕೊರೆತ ತೀವ್ರಗೊಂಡ ಪ್ರದೇಶದಲ್ಲಿ ತಡೆಗೋಡೆ ರಚನೆಗೆ ವ್ಯವಸ್ಥೆ ಮಾಡಲು ಇಲಾಖಾಧಿಕಾರಿಗಳು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News